ಪಾಠದ ಶೀರ್ಷಿಕೆ: ಲಾಕಪ್ಪಿನಲ್ಲಿ ಒಂದು ರಾತ್ರಿ (ಪ್ರವಾಸ ಕಥನ)
-ಗೊರೂರು ರಾಮಸ್ವಾಮಿ ಅಯ್ಯಂಗಾರ್
ಈ
ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರ
ಬರೆಯಿರಿ.
1
ಪ್ರವಾಸಕ್ಕೂ ಪ್ರಯಾಣಕ್ಕೂ ಇರುವ ವ್ಯತ್ಯಾಸವೇನು?
2
ಪ್ರವಾಸ ಕಥನ ಎಂದರೇನು?
3
ದೇಶ ಸುತ್ತಿ ನೋಡು ಕೋಶ ಓದಿ ನೋಡು ಈ ಗಾದೆಯ ಅರ್ಥವೇನು?
4
ಜ್ಞಾನವನ್ನು ಹೆಚ್ಚಿಸುವಲ್ಲಿ ಪ್ರವಾಸದ ಪಾತ್ರವೇನು?
5
ಪ್ರಪಂಚದಲ್ಲಿ ಅತ್ಯಂತ ಮುಂದುವರಿದಿರುವ ದೇಶಗಳಾವುವು?
6
ಕನ್ನಡ ಸಾಹಿತ್ಯ ಭಂಡಾರದಲ್ಲಿ ಕಂಡು ಬರುವ ಪ್ರವಾಸ ಕಥನಗಳನ್ನು ಪಟ್ಟಿ ಮಾಡಿ.
7
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವರ ಪ್ರವಾಸ ಕಥನ ಯಾವುದು?
8
ಕನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳಾವುವು?
9
ಕನ್ನಡ ಸಾಹಿತ್ಯದಲ್ಲಿ ಕಂಡು ಬರುವ ಪ್ರಮುಖ ಸಾಹಿತ್ಯ ಪ್ರಕಾರಗಳಾವುವು?
10
ಕನ್ನಡದಲ್ಲಿ ಪ್ರವಾಸ ಕಥನವನ್ನು ಬರೆದಿರುವ ಪ್ರಮುಖ ಸಾಹಿತಿಗಳು ಯಾರು ಯಾರು?
11
ನಿಮ್ಮ ಊರಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾವುವು?
12
ನೀವು ಭೇಟಿ ನೀಡಿದ ಯಾವುದಾದರೂ ಒಂದು ಪ್ರವಾಸಿತಾಣದ ವಿಶೇಷತೆಯನ್ನು ಕುರಿತು ಬರೆಯಿರಿ.
13
ಮಿನಿಪೊಲೀಸ್ ನಗರಕ್ಕೆ ಗೊರೂರರು ಏಕೆ ಹೋಗಿದ್ದರು?
14
ಮಿನಿಪೊಲೀಸ್ ನಗರದಲ್ಲಿ ಗೊರೂರರು ಎದುರಾದ ಸಮಸ್ಯೆಗಳಾವುವು?
15
ಮಿನಿಪೊಲೀಸ್ ನಗರದಲ್ಲಿ ಎದುರಾದ ಸಮಸ್ಯೆಯಿಂದ ಲೇಖಕರು ಪಾರಾದುದು ಹೇಗೆ?
16
ಮಿತ್ರರೊಬ್ಬರನ್ನು ನೋಡಲು ರಾಮಸ್ವಾಮಿ ಅಯ್ಯಂಗಾರರು ಎಲ್ಲಿಗೆ ಹೋಗಿದ್ದರು?
17
ಗೊರೂರರು ತಮ್ಮ ಮಿತ್ರರ ಪರಿಚಿತರೊಬ್ಬರ ಕಾರಿನಲ್ಲಿ ಕುಳಿತು ಹೊರಟಿದ್ದೇಕೆ?
18
ದಾರಿಯ ಮಧ್ಯದಲ್ಲೇ ಗೊರೂರರು ಕಾರಿನಿಂದ ಇಳಿದಿದ್ದೇಕೆ?
19
ಗೊರೂರರು ಕಾರು ಇಳಿದ ಸ್ಥಳದಿಂದ ತಪ್ಪಿಸಿಕೊಳ್ಳಲು ಕಾರಣವೇನು?
20
ಬೆಳಗಾಗುವ ವೇಳೆಗೆ ಕಾಲು ಕೊರಡಾಗ ಬಹುದೆಂಬ ಭಾವನೆ ಗೊರೂರರ ಮನಸ್ಸಿಗೆ ಬರಲುಕಾರಣವೇನು?
21
ಚಳಿಯಿಂದ ರಕ್ಷಣೆ ಪಡೆಯಲು ಲೇಖಕರ ಬಳಿಯಿದ್ದ ಉಡುಗೆಗಳಾವುವು?
22
ರಾತ್ರಿವೇಳೆಯಲ್ಲಿ ತಂಗಲು ಅಲೆಮಾರಿಗಳಿಗೆ ಭಾರತದಲ್ಲಿರುವ ಅವಕಾಶಗಳಾವುವು?
23
ಅಲೆಮಾರಿಗಳು ರಾತ್ರಿವೇಳೆ ಅಮೇರಿಕಾದಲ್ಲಿ ಕಂಡುಬಂದರೆ ಯಾವ ಶಿಕ್ಷೆಯನ್ನು ಅನುಭವಿಸ ಬೇಕಾಗುತ್ತದೆ?
24
ದಾರಿ ತಪ್ಪಿದ ಲೇಖಕರು ರಾತ್ರಿ ಕಳೆಯಲು ಹೋಟಲ್ಲಿಗೆ ಹೋಗಲಾಗಲಿಲ್ಲ ಏಕೆ?
25
ದಾರಿ ತಪ್ಪಿ ಅಲೆಯುತ್ತಿದ್ದ ಲೇಖಕರ ಕಣ್ಣಿಗೆ ಕಂಡವರು ಯಾರು?
26
ಪೊಲೀಸರು ಗೊರೂರರನ್ನು ತಮ್ಮ ಮನೆಗೆ ಏಕೆ ಕರೆದುಕೊಂಡು ಹೋದರು?
27
ದಾರಿ ತಪ್ಪಿದ ರಾಮಸ್ವಾಮಿ ಅಯ್ಯಂಗಾರರಿಗೆ ರಾತ್ರಿ ಆಶ್ರಯ ನೀಡಿದವರು ಯಾರು?
28
ತನ್ನ ಅತಿಥಿಯನ್ನು ಮಿನಿ ಪೋಲೀಸ್ ನಗರದ ಪೊಲೀಸರು ಯಾವರೀತಿ ಉಪಚರಿಸಿದರು?
29
ಅಪತ್ಕಾಲೇತು ಸಂಪ್ರಾಪ್ತೇ ಯನ್ಮಿತ್ರಂ ಮಿತ್ರಮೇವ ತತ್'- ಈ ಮಾತಿನ ಅರ್ಥವೇನು?
30
ಪೊಲೀಸರು ಗೊರೂರರನ್ನು ಎಲ್ಲಿ ಮಲಗಿಸಲು ಯೋಚಿಸಿದರು?ಏಕೆ?
31
ಪೊಲೀಸರು ಗೊರೂರರನ್ನು ಲಾಕಪ್ಪಿನಲ್ಲಿ ಮಲಗುವಂತೆ ಹೇಳಲು ಕಾರಣವೇನು?
32
ಗೊರೂರು ರಾಮಸ್ವಾಮಿ ಅಯ್ಯಂಗಾರರ ಹಾಸ್ಯ ಪ್ರವೃತ್ತಿಯನ್ನು ‘ಲಾಕಪ್ಪಿನಲ್ಲಿ ಒಂದು ರಾತ್ರಿ’ಗದ್ಯದ ಆಧಾರದಿಂದ ವಿವರಿಸಿರಿ.
33
ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯ ಬೇಕಾಯಿತು ಏಕೆ?
34
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವರ ಸ್ಥಳ ಮತ್ತು ಕಾಲವನ್ನು ತಿಳಿಸಿರಿ?
35
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇವರ ಕೃತಿಗಳನ್ನು ಹೆಸರಿಸಿ
36
ನೀವು ಕೈಗೊಂಡ ಪ್ರವಾಸದ ಅನುಭವಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
37
ಅಮೇರಿಕಾದಲ್ಲಿ ಗೊರೂರುರಿಗೆ ಆದ ಅನುಭವವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
38
ಮಿನಿಪೊಲೀಸ್ ನಗರದ ರಾತ್ರಿಯ ಬೆಡಗನ್ನು ಲೇಖಕರು ಹೇಗೆ ವರ್ಣಿಸಿದ್ದಾರೆ?
39
ಅಮೇರಿಕಾದ ಪೊಲೀಸರು ಭಾರತದ ಪೊಲೀಸರ ಯಾವ ವಿಷಯಗಳನ್ನು ಕೇಳಿ ತಿಳಿದುಕೊಂಡರು?
40
ಮಿನಿಪೊಲೀಸ್ ನಗರದಲ್ಲಿ ಲೇಖಕರಿಗೆ ಆದ ಅನುಭವಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
41
ಮಿನಿಪೊಲೀಸ್ ನಗರದಲ್ಲಿ ಗೊರೂರರು ತಪ್ಪಿಸಿಕೊಂಡ ಪ್ರಕರಣವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
42
ಯಾವುದಾದರು ಒಂದು ಪ್ರವಾಸಿ ತಾಣದ ಚಿತ್ರಗಳನ್ನು ಸಂಗ್ರಹಿಸಿ ಒಂದು ಚಿತ್ರ ಪಟವನ್ನು ತಯಾರಿಸಿ. ಆ ಚಿತ್ರಗಳಿಗೆ ಶೀರ್ಷಿಕೆಯನ್ನು ಬರೆಯಿರಿ
43
ಗೊರೂರರಿಗೆ ಸಂದ ಪ್ರಶಸ್ತಿ ಮತ್ತು ಗೌರವಗಳಾವುವು?
44
ರಾಮಸ್ವಾಮಿ
ಅಯ್ಯಂಗಾರರ ಪ್ರಮುಖ ಕೃತಿಗಳಾವುವು?
45
ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ರಾಮಸ್ವಾಮಿ ಅಯ್ಯಂಗಾರ ಕೃತಿಯಾವುದು?
46
ರಾಮಸ್ವಾಮಿ
ಅಯ್ಯಂಗಾರರು ಬರೆದಿರುವ ಲಲಿತ ಪ್ರಬಂಧಗಳಾವುವು?
47
ರಾಮಸ್ವಾಮಿ
ಅಯ್ಯಂಗಾರವರಿಗೆ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದ ವಿಶ್ವವಿದ್ಯಾನಿಲಯ ಯಾವುದು?
48
1982ರಲ್ಲಿ
ಅಖಿಲ ಭಾರತ ಸಮ್ಮೇಳನವು ಎಲ್ಲಿ ಜರುಗಿತು? ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಯಾರು?
49
ಗೊರೂರರ
ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ದೊರೆಕಿದೆ?
50
ಗೊರೂರರು
ಎಂದು ನಿಧನಹೊಂದಿದರು?
51
‘ಲಾಕಪ್ಪಿನಲ್ಲಿ
ಒಂದು ರಾತ್ರಿ’ ಪಾಠದಲ್ಲಿ ಬಂದಿರುವ ಅನ್ಯದೇಶ್ಯ ಪದಗಳನ್ನು ಪಟ್ಟಿಮಾಡಿರಿ.
52
ವಿರುದ್ಧ
ಪದಗಳನ್ನು ಬರೆಯಿರಿ.
ಮಿತ್ರ,
ರಾತ್ರಿ, ಪರಿಚಿತ,ಹತ್ತಿರ,ಧರ್ಮ,ಬೆಳಕು
53
ತತ್ಸಮ-ತದ್ಭವಗಳನ್ನು ಬರೆಯಿರಿ.
ಬಣ್ಣ,
ನಿದ್ರೆ, ರಕ್ತ.
54
ಸಂಧಿ ಬಿಡಿಸಿ ಸಂಧಿ ಹೆಸರನ್ನು ತಿಳಿಸಿರಿ.
ದಾರಿಯಲ್ಲಿ,
ಅಲ್ಲಲ್ಲಿ, ದೇವಾಲಯ, ನನ್ನಲ್ಲಿ, ದೀಪಾಲಂಕಾರ, ಧರ್ಮಾರ್ಥ, ವಾರಕ್ಕೆರಡು, ಸ್ವಚ್ಛವಾದ.
****************
No comments:
Post a Comment