ಪದ್ಯ : ಒಂದೇ (ಭೂಮಿತಾಯ ಕುಡಿಗಳು)
-ಕೆ. ಎಸ್. ನಿಸಾರ್ ಅಹಮದ್
1. ಪಂಚಭೂತಗಳಾವುವು?
2. ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಯಾವರೀತಿಯಲ್ಲಿ ಒಗ್ಗಟ್ಟಾಗಿರ ಬೇಕು?
3. ‘ಒಂದೇ’(ಭೂಮಿತಾಯಿಯ ಕುಡಿಗಳು) ಈ ಪದ್ಯದ ಆಶಯವೇನು?
4. ‘ಒಂದೇ’(ಭೂಮಿತಾಯಿಯ ಕುಡಿಗಳು) ಈ ಪದ್ಯದ ಕರ್ತೃ ಯಾರು?
5. ‘ಒಂದೇ’(ಭೂಮಿತಾಯಿಯ ಕುಡಿಗಳು) ಈ ಪದ್ಯದ ಆಕರ ಕೃತಿಯಾವುದು?
6. ಮನುಷ್ಯರೆಲ್ಲಾ ಒಂದೇ ಎಂದು ಹೇಳಿರುವ ಕನ್ನಡದ ಆದಿ
ಕವಿವಾಣಿಯಾವುದು?
ಕವಿವಾಣಿಯಾವುದು?
7. ಮನುಜ ಕುಲಂ ತಾನೊಂದೆ ವಲಂ ಎಂದು ಹೇಳಿದ ಕವಿ ಯಾರು?
8. ಪ್ರಕೃತಿಯಲ್ಲಿ ಕಂಡುಬರುವ ವೈವಿಧ್ಯತೆಯನ್ನು ವಿವರಿಸಿ.
9. ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವ ಅಂಶಗಳಾವುವು?
10. ‘ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ’-ಈ ಹೇಳಿಕೆಯನ್ನು ನಿದರ್ಶನಗಳೊಂದಿಗೆ ಸಮರ್ಥಿಸಿರಿ.
11. ಮಾನವನು ವಿಶ್ವಮಾನವನೆನಿಸುವುದು ಯಾವಾಗ?
12. ಮಾನವನು ಅಲ್ಪ ಮಾನವನೆನಿಸುವುದು ಯಾವಾಗ?
13. ಎಲ್ಲರೂ ಇಂದೇ ಏನೆಂದು ಪಣ ತೊಡಬೇಕೆಂದು ನಿಸಾರ್ ಅಹಮದ್ರವರು ಹೇಳಿದ್ದಾರೆ?
14. ನಿಸಾರ್ ಅಹಮದ್ರವರು ಯಾರು ಯಾರು ಒಂದು ಎಂದು ಹೇಳಿದ್ದಾರೆ?
15. ತಾಯಿಯ ಬಸಿರು ಒಂದೇ ಆಗಿದ್ದರೂ ಭಿನ್ನವಾಗಿರುವುದು ಯಾವುದು?
16. ಕಳಸ, ಶಿಲುಬೆ, ಬಿಳಿ ಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ?
17. ‘ಒಂದೇ’ ಎಂಬ ಪದ್ಯದಲ್ಲಿ ಸೂಚಿಸಿರುವ ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮದ ಪ್ರತೀಕಗಳಾವುವು?
18. ಆಂಗ್ಲರು ಆಫ್ರಿಕನ್ನರಲ್ಲಿ ಹರಿವ ನೆತ್ತರೊಂದೆ ಎಂದು ಹೇಳಿರುವುದರ ಔಚಿತ್ಯವೇನು?
19. ಆಂಗ್ಲರು ಮತ್ತು ಆಫ್ರಿಕನ್ನರ ನಡುವಿನ ವ್ಯತ್ಯಾಸವೇನು?
20. ಕನಕದಾಸರ ‘ರಾಮಧಾನ್ಯ ಚರಿತ’ದಲ್ಲಿ ಬರುವ ಭತ್ತ ಮತ್ತು ರಾಗಿ ನಡುವಿನ ವ್ಯಾಜ್ಯವನ್ನು ಕೇಳಿ ತಿಳಿಯಿರಿ.
21. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರಲ್ಲಿ ಯಾರು ಹೆಚ್ಚು ಎಂದು ರಾಮನು ಹೇಗೆ ತೀರ್ಮಾನ ಮಾಡಿದನು?
22. ಅಕ್ಕಿ ಮತ್ತು ರಾಗಿಯಲ್ಲಿರುವ ಸಾಮ್ಯ ಮತ್ತು ವ್ಯತ್ಯಾಸವು ‘ಒಂದೇ’ ಎಂಬ ಪದ್ಯದಲ್ಲಿ ಹೇಗೆ ವ್ಯಕ್ತವಾಗಿದೆ?
23. ಕವಿತ್ವ ರಚನೆಯಲ್ಲಿ ಬಳಸುವ ಪ್ರಮುಖ ಛಂದೋ ಪ್ರಕಾರಗಳಾವುವು?
24. ಮಾತ್ರಾಗಣದ ನಾಲ್ಕು ಸಾಲಿನ ಪದ್ಯಯಾವುದು?
25. ಅಕ್ಷರಗಣದ ನಾಲ್ಕು ಸಾಲಿನ ಪದ್ಯಯಾವುದು?
26. ಕಂದ ಪದ್ಯಕ್ಕೂ ವೃತ್ತ ಪದ್ಯಕ್ಕೂ ಇರುವ ವ್ಯತ್ಯಾಸವೇನು?
27. ಮೂರುಸಾಲಿನ ಪದ್ಯವನ್ನು ಏನೆಂದು ಕರೆಯುತ್ತಾರೆ?
28. ಕಂದ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ ಎಷ್ಟು?
29. ವೃತ್ತ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ ಎಷ್ಟು?
30. ತ್ರಿಪದಿಯನ್ನು ಬಳಸಿಕೊಂಡು ಗೀತೆಗಳನ್ನು ರಚಿಸಿದವರು ಯಾರು?
31. ತ್ರಿಪದಿ ಛಂದಸ್ಸನ್ನು ವಚನಗಳನ್ನು ರಚಿಸಿರುವವರು ಯಾರು?
32. ‘ವಚನ’ ಎಂದರೇನು?
33. ಬೇರೆ ಕವಿತ್ವಗಳಿಗಿಂತ ವಚನಗಳು ಹೇಗೆ ಭಿನ್ನವಾಗಿವೆ?
34. ದಿಕ್ಕುಗಳ ಹೆಸರನ್ನು ಕನ್ನಡದಲ್ಲಿ ಬರೆಯಿರಿ.
35. ತೆಂಕಣ ಎಂದರೆ ಯಾವ ದಿಕ್ಕು?
36. ಪಡುವಣ ಎಂದರೆ ಯಾವದಿಕ್ಕು?
37. ಕನ್ನಡದಲ್ಲಿ ಉತ್ತರ ದಿಕ್ಕನ್ನು ಏನೆಂದು ಕರೆಯುತ್ತಾರೆ?
38. ‘ಬೆಳಕ ಸತ್ವ ಒಂದೇ’ ಎನ್ನುವುದಕ್ಕೆ ಕವಿಯು ನೀಡಿರುವ ನಿದರ್ಶನಗಳಾವುವು?
39. ಒಂದೇ(ಭೂಮಿತಾಯಿಯ ಕುಡಿಗಳು) ಈ ಕವನದ ಸಾರಾಂಶವನ್ನು ಬರೆಯಿರಿ.
40. ‘ಮನುಜ ಜಾತಿ ತಾನೊಂದೆ ವಲಂ’ ಎಂಬ ಭಾವನೆ ನಿಸಾರ್ ಅಹಮದ್ರವರ ‘ಒಂದೇ’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ.
41. ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿರುವ ಕವಿ ಯಾರು?
42. ನಿಸಾರ್ ಅಹಮದ್ರವರ ಕಾಲ ಮತ್ತು ಸ್ಥಳವನ್ನು ತಿಳಿಸಿರಿ.
43. ನಿಸಾರ್ ಅಹಮದ್ರವರ ವೃತ್ತಿ ಪ್ರವೃತ್ತಿಗಳನ್ನು ತಿಳಿಸಿರಿ.
44. ನಿಸಾರ್ ಅಹಮದ್ರವರು ಸೇವೆಸಲ್ಲಿಸಿದ ವಿವಿಧ ಸಂಘ ಸಂಸ್ಥೆಗಳಾವುವು?
45. ನಿಸಾರ್ ಅಹಮದ್ರವರ ಪ್ರಮುಖ ಕವನ ಸಂಕಲನಗಳಾವುವು?
46. ನಿಸಾರ್ ಅಹಮದ್ರವರ ಬಹುಮಾನ ವಿಜೇತ ಮಕ್ಕಳ ಕೃತಿ ಯಾವುದು?
47. ‘ಹಕ್ಕಿಗಳು’ ಪುಸ್ತಕಕ್ಕೆ ಸಂದ ಪುರಸ್ಕಾರ ಯಾವುದು?
48. ನಿಸಾರ್ ಅಹಮದ್ರವರಿಗೆ ಸಂದ ಪ್ರಶಸ್ತಿ ಹಾಗೂ ಪುರಸ್ಕಾರಗಳಾವುವು?
49. 73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?
50. ಶಿವಮೊಗ್ಗದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?
51. ಸಂದರ್ಭಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ವಿವರಿಸಿ
1) “ಭೂಮಿ ತಾಯ ಕುಡಿಗಳೆಂದು ಪಣವ ತೊಡಿರಿ ಇಂದೆ”.
2) “ಸ್ವಸ್ವಭಾವ ಚಹರೆ ಬೇರೆ ತಾಯ ಬಸಿರು ಒಂದೆ”.
3) “ಧರ್ಮದುಸಿರು ಒಂದೆ”.
4) “ಬಿಳಿದು ಕರಿದು ಹುಲ್ಲು ಬಣ್ಣ ಒಂದೆ”.
5) “ರಸ ಕವಿತ್ವ ಒಂದೆ”.
6) “ಗಾಳಿ ಮುಗಿಲು ಒಂದೆ”.
52. ಈ ಕೆಳಗಿನ ಪದಗಳ ಸಂಧಿ ಬಿಡಿಸಿ ಹೆಸರಿಸಿ.
1) ಕುಡಿಗಳೆಂದು
2) ಧರ್ಮದುಸಿರು
3) ನೆತ್ತರೊಂದೆ
4) ಪೂರ್ವೊತ್ತರ
5) ಭಾರತೀಯರೊಂದೆ
53. ಈ ಕೆಳಗಿನ ಪದಗಳ ಅರ್ಥವನ್ನು ತಿಳಿಸಿರಿ.
1) ನೆತ್ತರು
2) ಪಣ
3) ಕುಡಿ
4) ಚಹರೆ
5) ವಂಗ
6) ಸ್ವಸ್ವಭಾವ
7) ಮುಗಿಲು
54. ಈ ಕೆಳಗಿನ ಪದಗಳ ವಿರುದ್ಧರೂಪವನ್ನು ತಿಳಿಸಿರಿ.
1) ಧರ್ಮ
2) ಕರಿದು
3) ಬಿಳುಪು
55. ಈ ಕೆಳಗಿನ ತತ್ಸಮಗಳ ತದ್ಭವ ರೂಪವನ್ನು ತಿಳಿಸಿರಿ.
1) ವರ್ಣ
2) ಧರ್ಮ
3) ಪ್ರಣತಿ(ಪಣತಿ)
56. ಕನಿಷ್ಠ ಮೂರು ಪದಗಳಾದರೂ ಇರುವಂತೆ ಸಮಾನಾರ್ಥಕ ಪದಗಳನ್ನು ಬರೆಯಿರಿ.(ಗರಿಷ್ಠಕ್ಕೆ ಮಿತಿಯಿಲ್ಲ)
1) ನೆತ್ತರು
2) ಭೂಮಿ
3) ತಾಯಿ
4) ಬಸಿರು
5) ಮುಗಿಲು
6) ಗಾಳಿ
***********
***********
No comments:
Post a Comment