ರಾಹುಲ್ ದ್ರಾವಿಡ್
-ಸಂಪಾದಿತ
1. ಅಮೇರಿಕಾದ ರಾಷ್ಟ್ರೀಯ ಕ್ರೀಡೆ ಯಾವುದು?
2. ಇಂಗ್ಲೇಂಡಿನ ರಾಷ್ಟ್ರೀಯ ಕ್ರೀಡೆ ಯಾವುದು?
3. ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?
4.ರಗ್ಬಿ ಯಾವ ದೇಶಗಳ ರಾಷ್ಟ್ರೀಯ ಕ್ರೀಡೆಯಾಗಿದೆ?
5. ಜಗತ್ತಿನಲ್ಲಿ ಜನಪ್ರಿಯತೆಯನ್ನು ಗಳಿಸಿ ಮೆರೆಯುತ್ತಿರುವ
ಕ್ರೀಡೆಯಾವುದು?
6. ಕ್ರಿಕೆಟ್ ಆಟಕ್ಕಿರುವ ಅಪವಾದವೇನು? ಆ ರೀತಿಯ ಅಪವಾದಕ್ಕೆ
ಕಾರಣವೇನು?
7. ಒಂದು ದಿನದ ಕ್ರಿಕೆಟ್ ರೂಢಿಗೆ ಬರಲು ಕಾರಣವೇನು?
8. ಕ್ರಿಕೆಟ್ ಆಟವನ್ನು ರೋಮಾಂಚನಗೊಳಿಸಲು ಕೈಗೊಂಡಿರುವ
ಕ್ರಮ ಯಾವುದು?
9. ಕ್ರಿಕೆಟ್ ಆಟದ ಮೂರು ವಿಧಗಳಾವುವು?
10. ಕ್ಷಮತೆಯು ಯಾವಾಗಲೂ ಸ್ಥಿರವಲ್ಲವೆಂದು ಹೇಳಲು ಕಾರಣವೇನು?
11.ಕ್ಷಮತೆಯು ಹಾವು ಏಣಿ ಆಟವಿದ್ದಂತೆ ಎಂದು ಹೇಳಲು ಕಾರಣವೇನು?
12. ಹಾವು ಏಣಿ ಆಟವೆಂದರೇನು?
13. ‘ಕ್ಷಮತೆಯು ಹಾವು ಏಣಿ ಆಟವಿದ್ದಂತೆ’-ಇಲ್ಲಿರುವ
ಅಲಂಕಾರ ಯಾವುದು?
14. ನಿಮಗೆ ಗೊತ್ತಿರುವ ಭಾರತೀಯ ಪ್ರಮುಖ ಕ್ರಿಕೆಟ್
ಸಾಧಕರನ್ನು ಹೆಸರಿಸಿ.
15. ಭಾರತೀಯ ಕ್ರಿಕೆಟ್ ಎಂದೊಡನೆ ಕಣ್ಣಮುಂದೆ ಸುಳಿದಾಡುವ
ಯಶಸ್ವಿ ಆಟಗಾರರು ಯಾರು ಯಾರು? (ಹತ್ತು ಜನರನ್ನು ಹೆಸರಿಸಿ)
16. ಕರ್ನಾಟಕದ ಪ್ರಖ್ಯಾತ ಹತ್ತು ಕ್ರಿಕೆಟ್ ಪಟುಗಳನ್ನು
ಹೆಸರಿಸಿ?
17. ‘ಗೂಗ್ಲಿ’ ಬೌಲಿಂಗ್ ನಲ್ಲಿ ಖ್ಯಾತಿಪಡೆದ ಭಾರತದ
ಬೌಲರ್ ಯಾರು?
18. ‘ಗೂಗ್ಲಿ’ ಎಂದೊಡನೆ ನೆನಪಿಗೆ ಬರುವ ಕರ್ನಾಟಕದ
ಕ್ರಿಕೆಟಿಗ ಯಾರು?
19. ಬಿ. ಎಸ್ ಚಂದ್ರಶೇಖರ್ ಯಾರು? ಅವರು ಯಾವ ರೀತಿಯ
ಬೌಲಿಂಗಿಗೆ ಹೆಸರಾಗಿದ್ದರು?
20.
ಲೇಟ್
ಕಟ್, ಸ್ಕ್ವೇರ್ ಕಟ್ ನಿಂದ ಹೆಸರು ಪಡೆದ ಕರ್ನಾಟಕದ ಕ್ರಿಕೆಟ್ ಪಟು ಯಾರು?
21.
ಜಿ.
ಆರ್ ವಿಶ್ವನಾಥ್ ಯಾರು? ಇವರು ಎಂತಹ ಹೊಡೆತಗಳಿಗೆ ಹೆಸರಾಗಿದ್ದರು?
22. ಜಿಮ್ ಲೇಕರ್ ಯಾರು ? ಅವರ ಸಾಧನೆ ಏನು?
23. ಒಂದೇ ಇನ್ನಿಂಗ್ಸ್ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
24.
ಅನಿಲ್
ಕುಂಬ್ಳೆಯ ಸಾಧನೆಗಳೇನು?
25.
ಗೋಡೆ
ಎಂದು ಕರೆಸಿಕೊಳ್ಳುವ ಕ್ರಿಕೆಟಿಗ ಯಾರು?
26.
ರಾಹುಲ್
ದ್ರಾವಿಡರು ಯಾವ ರಾಜ್ಯದ ಪರವಾಗಿ ಆಡುತ್ತಿದ್ದರು?
27.
ರಕ್ಷಣಾತ್ಮಕ
ಆಟಕ್ಕೆ ಹೆಸರಾದ ಕರ್ನಾಟಕದ ಕ್ರಿಕೆಟಿಗ ಯಾರು?
28. ರಾಹುಲ್ ದ್ರಾವಿಡರು ಕರ್ನಾಟಕ ತಂಡದ ಅನಿವಾರ್ಯ
ಆಟಗಾರರೆಂದು ಖ್ಯಾತಿಯನ್ನು ಪಡೆಯಲು ಕಾರಣವೇನು?
29.ರಾಹುಲ್ ದ್ರಾವಿಡರ ತಂದೆ ತಾಯಿ ಯಾರು?
30.
ರಾಹುಲ್
ದ್ರಾವಿಡರ ಜನ್ಮ ಸ್ಥಳ ಯಾವುದು?
31.
ರಾಹುಲ್
ದ್ರಾವಿಡರ ಮನೆತನದ ಹೆಸರು ಯಾವುದು?
32.
ದ್ರಾವಿಡ್
ಎಂಬ ಹೆಸರು ರಾಹುಲ್ ದ್ರಾವಿಡರ ಮನೆತನಕ್ಕೆ ಬರಲು ಕಾರಣವೇನು?
33. ರಾಹುಲ್ ದ್ರಾವಿಡರ ಮುತ್ತಜ್ಜ ಪ್ರಧಾನ ಪುರೋಹಿತರಾಗಿದ್ದುದು
ಎಲ್ಲಿ?
34.
ದಕ್ಷಿಣ
ಭಾರತದಿಂದ ಬಂದವರನ್ನು ಗ್ವಾಲಿಯರ್ ನಲ್ಲಿ ಏನೆಂದು ಕರೆಯುತ್ತಿದ್ದರು?
35. ರಾಹುಲ್ ದ್ರಾವಿಡರ ಮುತ್ತಜ್ಜ ತಾಂಜಾವೂರಿನಿಂದ
ಎಲ್ಲಿಗೆ ವಲಸೆ ಹೋಗಿದ್ದರು?
36.
ರಾಹುಲ್
ದ್ರಾವಿಡರ ವಿಷಯದಲ್ಲಿ ಕರ್ನಾಟಕದವರಿಗೆ ಹೆಮ್ಮೆಯ ವಿಷಯಗಳಾಗಿರುವುದು ಯಾವುವು?
37.
ರಾಹುಲ್
ದ್ರಾವಿಡರ ಮುತ್ತಜ್ಜ ದ್ರಾವಿಡರು ಎನಿಸಿ ಕೊಂಡಿದುದು ಹೇಗೆ?
38.
ಬೆಳೆಯ
ಸಿರಿ ಮೊಳಕೆಯಲ್ಲಿ ಎಂಬ ಮಾತು ದ್ರಾವಿಡರಿಗೆ ಹೇಗೆ ಅನ್ವಯವಾಗುತ್ತದೆ? ತಿಳಿಸಿರಿ.
39.
ರಾಹುಲ್
ದ್ರಾವಿಡರ ಪ್ರತಿಭೆಗೆ ನೀರೆರೆದು, ದಿಕ್ಕು ತೋರಿಸಿದವರು ಯಾರು?
40.
ರಾಹುಲ್
ದ್ರಾವಿಡರು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಯೇ ಶಾಲಾತಂಡವನ್ನು ಪ್ರತಿನಿಧಿಸುವಂತಾದುದು ಹೇಗೆ?
41.
ರಾಹುಲ್
ದ್ರಾವಿಡರು ಸತತ ಪರಿಶ್ರಮಕ್ಕೆ ಸಂದ ಸೂಕ್ತ ಸ್ಥಾನಮಾನ ಯಾವುದು?
42.
ರಾಹುಲ್
ದ್ರಾವಿಡರ ಸಾಧನೆಯು ಊರ್ಧ್ವಗಾಮಿಯಾದುದೆಂದು ಹೇಗೆ ಹೇಳುವಿರಿ?
43.
ರಾಹುಲ್
ದ್ರಾವಿಡರು ಕೇವಲ ಬ್ಯಾಟಿಂಗಿಗಷ್ಟೇ ತಮ್ಮನ್ನು ತೊಡಗಿಸಿಕೊಳ್ಳಲು ಕಾರಣವೇನು?
44.
ಬ್ಯಾಟಿಂಗಿಗಷ್ಟೇ
ತೊಡಗಿಸಿಕೊಳ್ಳುವಂತೆ ರಾಹುಲ್ ದ್ರಾವಿಡರಿಗೆ ಸಲಹೆ ನೀಡಿದ ಹಿರಿಯ ಆಟಗಾರ ಯಾರು?
45.
ರಾಹುಲ್
ದ್ರಾವಿಡರ ಆಟಕ್ಕೊಂದು ಕಲಾತ್ಮಕತೆ ದೊರೆತದ್ದು ಹೇಗೆ? ಇದಕ್ಕೆ ಕಾರಣರು ಯಾರು?
46.
ರಾಹುಲ್
ದ್ರಾವಿಡರ ಆಟಕ್ಕೊಂದು ಕಲಾತ್ಮಕತೆ ದೊರಕುವಂತಾಗಲು ಜಿ. ಎಸ್. ವಿಶ್ವನಾಥ್ ಹೇಗೆ ಕಾರಣರಾದರು?
47.
ರಾಹುಲ್
ದ್ರಾವಿಡರು ಇಂಗ್ಲೆಂಡ್ ಪ್ರವಾಸದ ತಂಡಕ್ಕೆ ಆಯ್ಕೆಯಾಗಲು ಕಾರಣವೇನು?
48.
ರಾಹುಲ್
ದ್ರಾವಿಡರು ಇಂಗ್ಲೆಂಡ್ ಪ್ರವಾಸದ ತಂಡಕ್ಕೆ ಯಾವಾಗ ಆಯ್ಕೆಯಾದರು?
49.
ರಾಹುಲ್
ದ್ರಾವಿಡರ ಕ್ರಿಕೆಟ್ ಜೀವನದಲ್ಲಿ ಜಿ. ಎಸ್. ವಿಶ್ವನಾಥರ ಪಾತ್ರವೇನು?
50.
ರಾಹುಲ್
ದ್ರಾವಿಡರು ವಿದ್ಯಾಭ್ಯಾಸ ಯಾವ ಊರಿನಲ್ಲಿ ನಡೆಯಿತು?
51.
ರಾಹುಲ್
ದ್ರಾವಿಡರ ಚೊಚ್ಚಲ ಟೆಸ್ಟ್ ಯಾವುದು?
52.
ರಾಹುಲ್
ದ್ರಾವಿಡರ ಭವಿಷ್ಯಕ್ಕೆ ಮುನ್ನುಡಿಯಾದ ಟೆಸ್ಟ್ ಯಾವುದು? ಹೇಗೆ?
53.
ಮೊದಲ
ಟೆಸ್ಟ್ ನಲ್ಲೇ ರಾಹುಲ್ ದ್ರಾವಿಡರ ಸಾಧನೆಯೇನು?
54.
ರಾಹುಲ್
ದ್ರಾವಿಡರು ಆಡಿದ ಟಸ್ಟ್ ಪಂದ್ಯಗಳು ಎಷ್ಟು?
55.
ರಾಹುಲ್
ದ್ರಾವಿಡರು ಗಳಿಸಿದ ರನ್ ಗಳು ಎಷ್ಟು?
56.
ರಾಹುಲ್
ದ್ರಾವಿಡರವರಿಗೆ ‘ಗೋಡೆ’ ಎಂಬ ಹೆಸರು ಅನ್ವರ್ಥವಾದುದು ಹೇಗೆ?
57.
ಟೆಸ್ಟ್
ಪ್ರವೇಶಿಸಿದ ನಾಲ್ಕನೆಯ ವರ್ಷವೇ ರಾಹುಲ್ ದ್ರಾವಿಡರಿಗೆ ಸಂದ ಪ್ರಶಸ್ತಿಯಾವುದು?
58.
‘ವಿಸ್ಡನ್’
ಸಂಸ್ಥೆಯು ರಾಹುಲ್ ದ್ರಾವಿಡರಿಗೆ ನೀಡಿದ ಪ್ರಶಸ್ತಿಯಾವುದು?
59.
ರಾಹುಲ್
ದ್ರಾವಿಡರ ನಾಯಕತ್ವದಲ್ಲಿ ಭಾರತವು ಜಯಗಳಿಸಿದ ಎರಡು ಕ್ರಿಕೆಟ್ ಪಂದ್ಯಗಳಾವುವು?
60.
ಭಾರತ
ಕ್ರಿಕೆಟ್ ತಂಡದ ನಾಯಕರಾಗಿ ರಾಹುಲ್ ದ್ರಾವಿಡರ ಸಾಧನೆಯೇನು?
61.
ಭಾರತವು
21 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಪಡೆದ ಕ್ರಿಕೆಟ್ ಸರಣಿಜಯ ಯಾವುದು? ಈ ಪಂದ್ಯದ ನಾಯಕತ್ವ ವಹಿಸಿದ್ಧವರು
ಯಾರು?
62.
ರಾಹುಲ್
ದ್ರಾವಿಡರ ನಾಯಕತ್ದದಲ್ಲಿ ಜಯಗಳಿಸಿದ ಮೊದಲ ಕ್ರಿಕೆಟ್ ಪಂದ್ಯಯಾವುದು?
63.
ರಾಹುಲ್
ದ್ರಾವಿಡರ ಕ್ರಿಕೆಟ್ ಆಟದ ವೈಶಿಷ್ಟ್ಯತೆ ಏನು?
64.
ರಾಹುಲ್
ದ್ರಾವಿಡರು ಬೇರೆ ಆಟಗಾರರಿಗಿಂತ ಭಿನ್ನ ಹೇಗೆ?
65.
ದೇಶ
ಮೊದಲು, ದೇಶಕ್ಕಾಗಿ ಆಟ ಎಂಬ ಮಾತಿಗೆ ರಾಹುಲ್ ದ್ರಾವಿಡರು ಬದ್ಧರಾಗಿದ್ದರೆಂದು ಹೇಗೆ ಹೇಳುವಿರಿ?
66.
ರಾಹುಲ್
ದ್ರಾವಿಡರು ಟೆಸ್ಟ್ ಮತ್ತು ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದೇಕೆ?
67.
ರಾಹುಲ್
ದ್ರಾವಿಡರು ಒಬ್ಬ ಅಪೂರ್ವ ಸಾಧಕ ಎಂದು ಹೇಗೆ ಹೇಳುವಿರಿ?
68.
ರಾಹುಲ್
ದ್ರಾವಿಡರ ಸಾಧನೆಗಳಾವುವು?
69.
ರಾಹುಲ್
ದ್ರಾವಿಡರು ಯಶಸ್ಸಿನ ಶಿಖರದಲ್ಲಿರುವಾಗಲೇ ಕ್ರಿಕೆಟ್ ಗೆ ವಿದಾಯ ಹೇಳಿದ್ದೇಕೆ?
70.
ರಾಹುಲ್
ದ್ರಾವಿಡರ ಸಾಧನೆಗಳನ್ನು ಪಟ್ಟಿ ಮಾಡಿರಿ.
*************