¨
ಎಂಜಲ ತಿಂದರೂ ಅಂಜದೆ ತಿನ್ನು
¨
ಎಂಜಲಿಗೆ ಹೇಸದವಳು ತಂಗಳು
ಬಿಟ್ಟಾಳೆಯೇ ?
¨
ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
¨
ಎಂಟು ವರ್ಷಕ್ಕೆ ನನ್ನ ಮಗ ದಂಟಾದ
¨
ಎಂಟು ಹೊನ್ನು ಘನವಾದ ನಂಟು ತಂತು
¨
ಎಂತರಸು ಒಲಿದರೂ ಮಂತ್ರಿಯ ಹಗೆಬೇಡ.
¨
ಎಂಜಲು ಎಲೆ ಆಯ್ದು ತಿನ್ನೋಕ್ಕಿಂತ ನಾಲ್ಕು ಮನೆ ಮುಸುರೆ ತಿಕ್ಕಿ ತಿನ್ನೋದು
ಲೇಸು.
¨
ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
¨
ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
¨
ಎಚ್ಚರಿಸದವನ ಮನೆ ಹಾಳು, ಒತ್ತರಿಸಿದವನ ಹೊಲ ಹಾಳು.
¨
ಎಟ್ಟೆ ಗಂಡಗೆ ಖೊಟ್ಟಿ ಹೆಂಡತಿ
¨
ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
¨
ಎಡರು ಬಂದಾಗ ಎದೆಕೊಡು.
¨
ಎಡವಿದ ಕಾಲು ಎಡವುದು ಹೆಚ್ಚು
¨
ಎಣ್ಣೆ ಕಂಡ ಕಡೆ ಮಗೂ ಹೆರೋದು.
¨
ಎಣ್ಣೆ ಚೆಲ್ಲಿದವನೂ ಅತ್ತ, ಕಾಯಿ ಚೆಲ್ಲಿದವನೂ ಅತ್ತ.
¨
ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
¨
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
¨
ಎಣ್ಣೆ ಬರುವಾಗ ಗಾಣ ಮುರೀತು.
¨
ಎಣ್ಣೆ ಬಿಟ್ಟರೆ ಕಣ್ಣಿಗೆ ಗುಣ, ನೀರು ಬಿಟ್ಟರೆ ಗಿಡಕ್ಕೆ ಗುಣ.
¨
ಎತ್ಕೊಂಡು ಹೋಗೋರಿದ್ರೆ ಸತ್ತ
ಹಾಗೆ ಬಿದ್ದೇನು.
¨
ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
¨
ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ (ಎತ್ತಿಗೆ ಜ್ವರ ಬಂದರೆ ಎಮ್ಮೆಗೆ
ಬರೆ ಹಾಕಿದರು).
¨
ಎತ್ತಿಗೆ ಭತ್ತದ ಚಿಂತೆ ಬಂದೀತೆ ?
¨
ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
¨
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
¨
ಎತ್ತು ಕದ್ದ ಕಳ್ಳ ಹಗ್ಗ ಮರೀತಾನೆಯೇ?
¨
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
¨
ಎತ್ತು ಮಾರಿದವಗೆ ಹಗ್ಗದ ಆಸೆಯೇ
¨
ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
¨
ಎದ್ದರೆ ಆಳಲ್ಲ
¨
ಎದ್ದವನು ಗೆದ್ದಾನು
¨
ಎದ್ದೋಗೋ ಮಾತು ಬಿದ್ದೋಗಲಿ ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ
¨
ಎದೆಯುದ್ದ ಬೆಳೆದ ಮಕ್ಕಳನ್ನು ಮಿತ್ರರಂತೆ ಕಾಣ್ಬೇಕು
¨
ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ (ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.)
¨
ಎಮ್ಮೆ ಬಿಟ್ಟ ಗಂಜಲ ಇರುವೆಗೆ ಜಲಪ್ರಳಯ
¨
ಎಮ್ಮೆ ಮೇಲೆ ಮಳೆ ಬಿದ್ದ ಹಾಗೆ.
¨
ಎಮ್ಮೆನ ನೀರಲ್ಲಿ ಮುಳುಗಿಸಿ ವ್ಯಾಪಾರ ಮಾಡಿದ ಹಾಗೆ
¨
ಎರಡು ಕಡೆ ನಂಬಿ ಕುರುಡು ದಾಸಯ್ಯ ಕೆಟ್ಟ(ಎರಡು ದಾಸರ ನಂಬಿ ಕುರುಡು ದಾಸ
ಕೆಟ್ಟ)
¨
ಎರಡೂ ಕೈ ಸೇರಿದರೆ ಚಪ್ಪಾಳೆ (ಎರಡೂ ಕೈ ತಟ್ಟಿದರೆ ಸದ್ದು)
¨
ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು ಮೋರೆ
¨
ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
¨
ಎಲ್ಲ ಬಿಟ್ಟು,ಭಂಗಿ ನೆಟ್ಟ.
¨
ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
¨
ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
¨
ಎಲ್ಲರ ಮನೆ ದೋಸೇನೂ ತೂತೇ.
¨
ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
¨
ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
¨
ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ
¨
ಎಲ್ಲರು ಶಿವನ ಮರೆತರೆ ಕೈಲಾಸವೇ ಹಾಳಕ್ಕು , ಎಲ್ಲರು ಶಿವನ ನೆನೆದರೆ ಇಲ್ಲಿಯೇ ಕೈಲಾಸವಕ್ಕು.
¨
ಎಲ್ಲರೂ ನಗ್ತಾರೆ ಅ೦ಥ ಕಿವುಡ ತಾನೂ ನಕ್ಕ.
¨
ಎಲ್ಲರೂ ಪಲ್ಲಕ್ಕಿಲಿ ಕೂತರೆ ಹೊರೋರು ಯಾರು
¨
ಎಲ್ಲವೂ ತಾನಗ ಬಲ್ಲೊಡೆ ಅದುವೇ ಯೋಗ
¨
ಎಲ್ಲಾ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
¨
ಎಲ್ಲಾ ಜಾಣ, ತುಸು ಕೋಣ.
¨
ಎಲ್ಲಾ ಬಣ್ಣ ಮಸಿ ನುಂಗಿತು
¨
ಎಲ್ಲಾ ಬೆಳಕಿಗಿಂತ, ಸತ್ಯದ ನುಡಿಯ ಬೆಳಕೇ ಬೆಳಕು .
¨
ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
¨
ಎಲ್ಲಾರ ಮನೇ ದೋಸೇನೂ ತೂತು
¨
ಎಲ್ಲಿಂದ ಎಲ್ಲಿಗೆ
ಹೋದರೂ ಮುತ್ತುಗಕ್ಕೆ ಮೂರೇ ಎಲೆ.
¨
ಎಲ್ಲಿಂದ ಎಲ್ಲಿಗೆ ಹೋದರೂ ವ್ಯಾಪಾರಿ ತನ್ನ ಲೆಕ್ಕ ಬಿಡ.
¨
ಎಲುಬಿಲ್ಲದ ನಾಲಿಗೆ ಎತ್ತಲಾದರೂ ತಿರುಗುತ್ತೆ.
¨
ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
¨
ಎಲೆ ನೆಕ್ಕೋನ ಮನೆಗೆ ಮೂತಿ ನೆಕ್ಕೋನು ಬಂದ.
¨
ಎಷ್ಟು ದಕ್ಷಿಣೆಯೋ ಅಷ್ಟು ಪ್ರದಕ್ಷಿಣೆ’
¨
ಎಸರಿಗೆ ಅಕ್ಕಿ ಇಲ್ಲ ಎಳ್ಳಮಾಸೆ ಮಾಡ್ಬೇಕು
¨
ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
¨
ಎಳ್ಳು ಬೆಲ್ಲ ಕೊಟ್ಟು ಒಳ್ಳೆ ಮಾತನಾಡು.
¨
ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
¨
ಏತಿ ಅಂದರೆ ಪ್ರೇತಿ ಅಂದಂತೆ
¨
ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ
¨
ಏನಾದರೂ ಆಗು ಮೊದಲು ಮಾನವನಾಗು.
¨
ಏನಾದರೇನು ತಾನು ತಾನಾಗದವರೆಗೆ
¨
ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
¨
ಏನೂ ಇಲ್ಲದವಗೆ ಭಯವಿಲ್ಲ
¨
ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
¨
ಏರಿದವ ಇಳಿದಾನು ಇಳಿದವ ಏರಿಯಾನು
¨
ಏರಿನೇ ನೀರೆಲ್ಲಾ ಕುಡಿದ ಹಾಗೆ
¨
ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
¨
ಏಳಲಾರದ ಅತ್ತೆ ದೇಕಲಾರದ ಸೊಸೆ.
¨
ಏಳಲಾರದವನಿಗೆ ಏಳು ಜನ ಹೆಂಡಿರು.
¨
ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
¨
ಐದು ಜನ ಗಂಡಂದಿರಿದ್ರು ಕಷ್ಟ ತಪ್ಪಲಿಲ್ಲ
¨
ಐದು ಬೆರಳೂ ಒಂದೇ ಸಮ ಇರೋಲ್ಲ
¨
ಐನೋರು ಇಲ್ದಿದ್ರೆ ಅಮಾವಾಸ್ಯೆ ನಿಲ್ಲುತ್ಯೇ ?
ಮಾಡಿದ್ದುನೂ ಮಹಾರಾಯ ಗದೆ ವಿಸ್ತರಣೆ ಕಲಸಿ
ReplyDelete