v ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
v ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
v ಉ೦ಡೂ ಹೋದ, ಕೊ೦ಡೂ ಹೋದ.
v ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.
v ಉಂಡ ಮನೆ ಜಂತೆ ಎಣಿಸಬಾರದು
v ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
v ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
v ಉಂಡರೆ ಉಬ್ಬಸ, ಹಸಿದಿದ್ದರೆ ಸಂಕಟ
v ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
v ಉಂಡೂ ಹೋದ; ಕೊಂಡೂ ಹೋದ
v ಉಂಬಾಗ ಉಡುವಾಗ ಊರೆಲ್ಲ ನೆಂಟರು
v ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
v ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
v ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
v ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
v ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
v ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
v ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
v ಉಚ್ಚೆ ಕುಡಿದರೂ ತನ್ನಿಚ್ಚೇಯಿಂದ ಇರಬೇಕು
v ಉಚ್ಚೇಲಿ ಮೀನು ಹಿಡಿಯೋ ಜಾತಿ
v ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
v ಉಟ್ಟು ಉಡಲಾರ ಕೊಟ್ಟು ಸೈರಿಸಲಾರ
v ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು
v ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
v ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
v ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು
v ಉಣ್ಣು ಬಾ ಅಂದ್ರೆ, ಇರಿ ಬಾ ಅಂದ್ರಂತೆ
v ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
v ಉಣ್ಣುವಾಗ ಉಡುವಾಗ ಊರಲ್ಲಿ ನೆಂಟರು.
v ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
v ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
v ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
v ಉತ್ತಮನು ಎತ್ತ ಹೋದರೂ ಶುಭವೇ
v ಉತ್ತಮರು ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು
v ಉತ್ತಮವಾದ ನಗು ನೇಸರನ ಮಗು.
v ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ
v ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
v ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
v ಉತ್ತು ಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
v ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
v ಉದ್ದುದ್ದ ಮಾತಿನವರ ಮೊಳಕೈ ಮೊಂಡ.
v ಉದ್ದುದ್ದ ಮಾತಿನವರ ಮೊಳಕೈ ಮೊಂಡ.
v ಉದ್ಯೋಗಂ ಪುರುಷ
ಲಕ್ಷಣಂ(ಉದ್ಯೋಗವೇ ಗಂಡಸಿಗೆ ಲಕ್ಷಣ)
v ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೇಕು (ಉಪ್ಪು ತಿಂದವನು ನೀರು ಕುಡಿಯಲೇ ಬೇಕು)
v ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
v ಉಪ್ಪು ತಿಂದ ಮನೆಗೆ ಎರಡು ಬಗೆಯಲು ಬಂದ.
v ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
v ಉಪಕಾರಕ್ಹೋಗಿ ಉಪದ್ರ ಬಂತು
v ಉಪವಾಸ ಇರಬಹುದು , ಉಪದ್ರವ ತಾಳಲಾರದು. (ಉಪಾಸ ಇದ್ರೂ ಉಪದ್ರ ಇರಬಾರದು)
v ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ
v ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ
v ಉರಿದ ಹೊಟ್ಟೆಗೆ ಉಪ್ಪು ತುಂಬಿಸಿದಂಗೆ
v ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
v ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
v ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
v ಉರುಳುವ ಕಲ್ಲಿಗೆ ಏನೂ ಅಂಟುವುದಿಲ್ಲ.
v ಉಸ್ ಎಂದರೆ ಉಸಳಿ ಬೇಡಿದ್ದನಂತೆ
v ಉಳ್ಳನಕ ಹಿರಿಯಣ್ಣ ಇಲ್ಲಾದಗ ನಡಿಯಣ್ಣ
v ಉಳ್ಳವನು ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ
v ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
v ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ.
v ಊಟ ತನ್ನಿಚ್ಚೆ, ನೋಟ ಪರರಿಚ್ಚೆ
v ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
v ಊಟಕ್ಕಿಲ್ಲದ ಉಪ್ಪಿನಕಾಯಿ
v ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
v ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ.
v ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
v ಊಟವೆಂದರೆ ಊರು ಬಿಟ್ಟುಹೋದಂತೆ.
v ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
v ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
v ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
v ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
v ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
v ಊರಿಗಾಗದ ಗೌಡ, ಮೇಲೆರಗುವ ಗಿಡುಗ
v ಊರಿಗೆ ಉಪಕಾರಿ, ಮನೆಗೆ ಮಾರಿ
v ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ
v ಊರಿಗೆ ದಾರೀಯ ಯಾರು ತೋರಿದರೇನು?
v ಊರಿಗೆ ದೊರೆ ಆದರೂ ತಾಯಿಗೆ ಮಗನೆ.
v ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
v ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
v ಊರಿಗೆ ಹಂದಿಯಿರಬೇಕು, ಕೇರಿಗೆ ನಿಂದಕನಿರಬೇಕು
v ಊರಿಗೊಂದು ದಾರಿಯಾದ್ರೆ, ಎಡವಟ್ಟಂಗೆ ಅವನದ್ದೇ ದಾರಿ
v ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ?
v ಊರು ದೂರಾಯಿತು ಕಾಡು ಹತ್ತರಾಯಿತು
v ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ. .
v ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
v ಊರು ಸುಟ್ಟರೂ ಹನುಮಂತರಾಯ ಹೊರಗೆ
v ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
v ಊರು ಹೋಗು ಅನ್ನುತ್ತೆ; ಕಾಡು ಬಾ ಅನ್ನುತ್ತೆ
v ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.
v ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ ಬಾಗಿಲು ಹಾಕಿದರಂತೆ. (ಊರೆಲ್ಲ ಸೂರೆ ಆದ ಮೇಲೆ ಕೋಟೆ ಬಾಗಿಲ ಮುಚ್ಚಿದರು)
v ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
v ಊರು ಸುಟ್ಟರೂ ಹನುಮ೦ತರಾಯ ಹೊರಗೆ.
No comments:
Post a Comment