- ಅ೦ಗ ತೋರಿಸಿ
ಅರ್ಧಾ೦ಗಿಯಾದಳು.
- ಅ೦ಗಳದಾಗೆ ಒದ್ದು
ಅಡಿಗೆ
ಮನೆಯಲ್ಲಿ
ಕಾಲು
ಹಿಡಿದ.
- ಅಂಕೆ ಇಲ್ಲದ
ಕಪಿ
ಲಂಕೆ
ಸುಟ್ಟಿತು
- ಅಂಕೆ ಇಲ್ಲದ
ಚತುರೆ,
ಲಗಾಮು
ಇಲ್ಲದ
ಕುದುರೆ
- ಅಂಕೆಯಲ್ಲಿದ್ದ
ಹೆಣ್ಣು,
ಮಜ್ಜಿಗೆಯಲ್ಲಿದ್ದ
ಬೆಣ್ಣೆ
ಕೆಡೊಲ್ಲ
- ಅಂಗಾಂಗದಲ್ಲಿ
ಪಾಪ
ಮಡಗಿಕೊಂಡು
ಗಂಗೇಲಿ
ಮಿಂದು
ಬಂದ
- ಅಂಗೈ ತೋರಿಸಿ
ಅವಲಕ್ಷಣ
ಅಂತ
ಅನ್ನಿಸಿಕೊಂಡರಂತೆ
- ಅಂಗೈ ಹುಣ್ಣಿಗೆ
ಕನ್ನಡಿ
ಬೇಕೆ?
- ಅಂಜುತ್ತಾ ಅಳುಕುತ್ತಾ
ತಿಂದ
ಅಮೃತ
ನಂಜು
- ಅಂತೂ ಇಂತೂ
ಕುಂತಿ
ಮಕ್ಕಳಿಗೆ
ರಾಜ್ಯವಿಲ್ಲ
- ಅಂದು ಬಾ
ಅಂದ್ರೆ
ಮಿಂದು
ಬಂದ
- ಅಂಬಲಿ ಕುಡಿಯುವವನಿಗೆ,
ಮೀಸೆ
ಹಿಡಿಯುವವನೊಬ್ಬ
- ಅಂಬಲಿಗೆ ಗತಿ
ಇಲ್ಲದವ
- ಅಕ್ಕ ನನ್ನವಳಾದ್ರೆ
ಬಾವ
ನನ್ನವನೇನು
- ಅಕ್ಕ ಬರಬೇಕು
ಅಕ್ಕಿ
ಮುಗೀಬಾರದು
- ಅಕ್ಕ ಸತ್ತರೆ
ಅಮಾಸೆ
ನಿಲ್ಲದು,
ಅಣ್ಣ
ಸತ್ತರೆ
ಹುಣ್ಣಿಮೆ
ನಿಲ್ಲದು
- ಅಕ್ಕನ ಚಿನ್ನವಾದ್ರೂ
ಅಕ್ಕಸಾಲಿ
ಟೊಣೆಯದೆ(=ಕದಿಯದೆ)
ಬಿಡ
(ಅಕ್ಕಸಾಲಿ ಅಕ್ಕನ ಚಿನ್ನಾನೂ
ಬಿಡ)
- ಅಕ್ಕನ ಹಗೆ
ಬಾವನ
ನಂಟು
- ಅಕ್ಕರ ಕಲ್ತು
ತನ್ನ
ಒಕ್ಕಲನ್ನೇ
ತಿನ್ನೊದ್ಕಲ್ತ
- ಅಕ್ಕರೆಯ ಅಕ್ಕ
ಬಂದಾಗೇ
ಸಕ್ಕರೆಯೆಲ್ಲ
ಕಹಿ
ಆಯ್ತು
- ಅಕ್ಕರೆಯಿದ್ದಲ್ಲಿ
ದುಃಖತಪ್ಪದು
- ಅಕ್ಕಸಾಲಿಗನ ಮಗ
ಚಿಮ್ಮಟ
ಹಿಡಿಯುತ್ತಲೇ
ಹೊನ್ನ
ಕದ್ದ
- ಅಕ್ಕಿ ಅಂದ್ರೆ
ಪ್ರಾಣ,
ನೆಂಟ್ರು
ಅಂದ್ರೆ
ಜೀವ
(ಪ್ರೀತಿ)
- ಅಕ್ಕಿ ಉಂಡವ
ಹಕ್ಕಿ,
ಜೋಳ
ಉಂಡವ
ತೋಳ
- ಅಕ್ಕಿ ಸರಿಯಾಗ
ಬಾರದು
ಅಕ್ಕನ
ಮಕ್ಕಳು
ಬಡವಾಗ
ಬಾರದು
- ಅಕ್ಕಿಯ ಮೇಗಳ
ಆಸೆ,
ನೆಂಟರ
ಮೇಗಳ
ಬಯಕೆ
- ಅಕ್ಕಿಲ್ಲ ಬ್ಯಾಳಿಲ್ಲ
ಅಕ್ಕನ್ನ
ಕರತರಬೇಕು
- ಅಗ್ಗದ ಆಸೆಗೆ
ಗೊಬ್ಬರ
ತಗೊಂಡರು
- ಅಗ್ಗದ ಮಾಲು;
ಮುಗ್ಗಿದ
ಜೋಳ
- ಅಗಸನ ಬಡಿವಾರವೆಲ್ಲ
ಹೆರರ
ಬಟ್ಟೆ
ಮೇಲೆ
- ಅಗಸನ ಸಿಟ್ಟು
ಅನ್ಯರ
ವಸ್ತ್ರದ
ಮೇಲೆ.
- ಅಗಸರ ಕತ್ತೆ
ಕೊಂಡು
ಹೋಗಿ,
ಡೊಂಬರಿಗೆ
ತ್ಯಾಗ
ಹಾಕಿದ
ಹಾಗೆ
- ಅಜ್ಜಿ ನೂತದ್ದೆಲ್ಲಾ
ಅಜ್ಜನ
ಉಡಿದಾರಕ್ಕೆ.
- ಅಜ್ಜಿ ಸಾಕಿದ
ಮಗ
ಬೊಜ್ಜಕ್ಕೂ
ಬಾರದು
- ಅಜ್ಜಿಗೆ ಅಕ್ಕಿ ಚಿ೦ತೆಯಾದರೆ ಮೊಮ್ಮಗಳಿಗೆ ಮೂಗುತಿ
ಚಿ೦ತೆ
- ಅಜ್ಜಿಗೆ ಅರಿವೆ
ಚಿಂತೆ
ಮೊಮ್ಮಗಳಿಗೆ
ಮಿಂ..ನ
ಚಿಂತೆ
- ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ,
ಮೊಮ್ಮಗಳಿಗೆ ಕಜ್ಜಾಯದ ಚಿಂತೆ
- ಅಟ್ಟದ ಮೇಲಿಂದ
ಬಿದ್ದವನಿಗೆ
ದಡಿಗೆ
ತಗೊಂಡು
ಹೇರಿದರಂತೆ
- ಅಡ್ಡ ಗೋಡೆ
ಮೇಲೆ
ದೀಪ
ಇಟ್ಟಂತೆ
- ಅಡವಿಯ ದೊಣ್ಣೆ
ಪರದೇಸಿಯ
ತಲೆ
- ಅಡಿಕೆಕಾಯಿಯನ್ನು
ಚೀಲದೊಳಗೆ
ಹಾಕಬಹುದು,
ಮರ
ಆದ
ನಂತರ
ಹಾಕಬಹುದೇ?
- ಅಡಿಕೆಗೆ ಹೋದ
ಮಾನ
ಆನೆ
ಕೊಟ್ಟರು
ಬರಲ್ಲ.
- ಅಡಿಗೆ ಬಿದ್ದರೂ
ಮೀಸೆ
ಮೇಲೆ
- ಅಡುಗೆ ಮಾಡಿದವಳಿಗಿಂತ
ಬಡಿಸಿದವಳೇ
ಮೇಲು
- ಅಣ್ಣ ಸತ್ತರೆ
ಹುಣ್ಣಿಮೆ
ನಿಲ್ಲದು
- ಅಣ್ಣ ಹುಸಿಯಾದರೂ
ತಮ್ಮ
ತಂಪು
ತರದೇ
ಹೋಗಲ್ಲ.
- ಅತ್ತ ದರಿ;
ಇತ್ತ
ಪುಲಿ
- ಅತ್ತೂ ಕರೆದೂ
ಔತಣ
ಮಾಡಿಸಿಕೊಂಡಂತೆ
- ಅತ್ತೆ ಆಸ್ತೀನ
ಅಳಿಯ
ದಾನ
ಮಾಡಿದ
- ಅತ್ತೆ ಒಡೆದ
ಪಾತ್ರೆಗೆ
ಬೆಲೆ
ಇಲ್ಲ
- ಅತ್ತೆ ಮಾಡಿದ್ದು
ಅಡಕಲಗೂಡಿಗೆ
ಸೊಸೆ
ಮಾಡಿದ್ದು
ಬೆಳಕಿಗೆ
- ಅತ್ತೆ ಮೇಲಿನ
ಕೋಪ
ಕೊತ್ತಿ
ಮೇಲೆ
- ಅತ್ತೆ ಸತ್ತ
ಮೇಲಿನ
ಸೊರ್ಗಕ್ಕಿಂತ
ಇದ್ದ
ನರಲೋಕ
ವಾಸಿ
- ಅತ್ತೆಗೊಂದು ಕಾಲ,
ಸೊಸೆಗೊಂದು
ಕಾಲ.
- ಅತ್ತೆಯ ಮನಿಯಾಗ
ಮುತ್ತಾಗಿ
ಇರಬೇಕು
- ಅತಿ ಆಸೆ
ಗತಿ
ಕೇಡು
- ಅತಿ ಸ್ನೇಹ
ಗತಿ
ಕೇಡು
- ಅತಿ ಸರ್ವತ್ರ
ವರ್ಜಯೇತ್
- ಅತಿಯಾದರೆ ಅಮೃತವೂ
ವಿಷ
- ಅದ್ನೇ ಉಂಡೇನ್
ಅತ್ತೆಮ್ನೋರೇ,
ಕದ
ತೆಗೀರಿ
ಮಾವ್ನೋರೇ
ಅಂದ್ರಂತೆ
- ಅಧರಕ್ಕೆ ಕಹಿ
ಉದರಕ್ಕೆ
ಸಿಹಿ
- ಅನ್ನ ಇಕ್ಕಿ
ಸಾಕು
ಅನ್ನಿಸ
ಬಹುದು,
ದುಡ್ಡು
ಕೊಟ್ಟು
ಸಾಕು
ಅನ್ನಿಸೋಕಾಗಲ್ಲ
- ಅನ್ನ ಹಾಕಿದ
ಮನೆಗೆ
ಕನ್ನ
ಹಾಕಿದಂತೆ
- ಅನ್ನದಾತ ಸುಖೀಭವ
- ಅನ್ಯಾಯದಿಂದ ಗಳಿಸಿದ್ದು
ಅಸಡ್ಡಾಳಾಗಿ
ಹೋಯ್ತು
- ಅನುಕೂಲ ಸಿಂಧು;
ಅಭಾವ
ವೈರಾಗ್ಯ
- ಅಪ್ಪ ಗುಡಿ
ಕಟ್ಟಿದರೆ
ಮಗ
ಕಳಸ
ಇಟ್ಟ
- ಅಪ್ಪ ಹಾಕಿದ
ಆಲದ
ಮರಕ್ಕೆ
ನೇಣು
ಹಾಕಿಕೊಂಡಂತೆ
- ಅಪ್ಪನ ಬಟ್ಟೆಯಾದರು
ಚಿಪ್ಪಿಗ
ಬಿಡ
- ಅಪ್ಪನ ಮನೇಲಿ
ಸೈ
ಅನ್ನಿಸಿಕೊಂಡೋಳು,
ಅತ್ತೆ
ಮನೇಲೂ
ಸೈ
ಅನ್ನಿಸಿ
ಕೊಳ್ತಾಳೆ
- ಅಪ್ಪನ್ನೇ ಅಪ್ಪ
ಅನ್ದೋನು,
ಚಿಕ್ಕಪ್ಪನ್ನ
ಅಪ್ಪಾ
ಅಂತ
ಕರೀತಾನಾ?
- ಅಬದ್ಧಕ್ಕೆ ಅಪ್ಪಣೆಯೇ
ಅಂದ್ರೆ
ಬಾಯಿಗೆ
ಬಂದಷ್ಟು
- ಅಮ್ಮನ ಮನಸ್ಸು
ಬೆಲ್ಲದ
ಹಾಗೆ,
ಮಗಳ
ಮನಸ್ಸು
ಕಲ್ಲಿನ
ಹಾಗೆ
- ಅಮ್ಮನವರು ಪಟ್ಟಕ್ಕೆ
ಬಂದಾಗ,ಅಯ್ಯನವರು
ಚಟ್ಟಕ್ಕೇರಿದರು
- ಅಯ್ಯಾ ಎಂದರೆ
ಸ್ವರ್ಗ;
ಎಲವೋ
ಎಂದರೆ
ನರಕ
- ಅಯ್ಯೋ ಪಾಪ
ಅಂದ್ರೆ
ಅರ್ಧ
ಆಯುಸ್ಸು
- ಅರ್ಧ ಆದ
ಕೆಲಸವನ್ನು
ಅರಸನಿಗೂ
ತೋರಿಸಬೇಡ
- ಅರಗಿನಂತೆ ತಾಯಿ,
ಮರದಂತೆ
ಮಕ್ಕಳು
- ಅರಮನೆಯ ಮುಂದಿರ
ಬೇಡ,
ಕುದುರೆಯ
ಹಿಂದಿರಬೇಡ
- ಅರವತ್ತಕ್ಕೆ ಅರಳು
ಮರಳು
- ಅರಸನ ಕುದರೆ
ಲಾಯದಲ್ಲೆ
ಮುಪ್ಪಾಯಿತು
- ಅರಸು ಒಲಿದರೆ
ಸಿರಿ
ದೆಸೆಯಾಯ್ತು
- ಅರಿತರೆ ಮಾತನಾಡು
ಮರೆತರೆ
ಕೂತು
ನೋಡು
- ಅರಿತು ಮಾಡದ
ದಾನ
ತೆರೆದು
ನೋಡದ
ಕಣ್ಣಂತೆ
- ಅರೆಪಾವಿನವರ ಅಬ್ಬರ
ಬಹಳ
- ಅಲ್ಪ ವಿದ್ಯಾ
ಮಹಾಗರ್ವಿ
- ಅಲ್ಪನಿಗೆ ಐಶ್ವರ್ಯ
ಬಂದ್ರೆ
ಅರ್ಧ
ರಾತ್ರೀಲಿ
ಕೊಡೆ
ಹಿಡಿದನಂತೆ
- ಅಲ್ಪರ ಸಂಗ
ಅಭಿಮಾನ
ಭಂಗ
- ಅಲ್ಲದವನ ಒಡನಾಟ
ಮೊಳಕೈಗೆ
ಕಲ್ಲು
ಬಡಿದಂತೆ
- ಅಶ್ವಥ ಸುತ್ತಿದರೆ
ಮಕ್ಕಳಾಗುತ್ತೆ
ಅ೦ದ್ರೆ
ಸುತ್ತು
ಸುತ್ತಿಗೂ
ಹೊಟ್ಟೆ
ಮುಟ್ಟಿ
ನೋಡಿಕೊ೦ಡಳ೦ತೆ.
- ಅಹಂಕಾರಕ್ಕೆ ಉದಾಸೀನವೇ
ಮದ್ದು.
- ಅಳಿದೂರಿಗೆ ಉಳಿದವನೇ
ಗೌಡ
- ಅಳಿಯ ಅಲ್ಲ,
ಮಗಳ
ಗಂಡ
- ಅಳಿಯ ಮನೆ
ತೊಳಿಯ
- ಅಳಿಯನ ಕುರುಡು
ಬೆಳಗಾದರೆ
ಗೊತ್ತಾಗತ್ತೆ
- ಅಳಿಯನಿಗೆ ದೀಪಾವಳಿ
ಮಾವನಿಗೆ
ಕೋಪಾವಳಿ.
- ಅಳಿಲ ಸೇವೆ,
ಮಳಲ
ಭಕ್ತಿ
- ಅಳಿಲು ಏರಿದರೆ
ಅರಳಿಮರ
ಅಲ್ಲಾಡೀತೆ ?
- ಅಳಿವುದೇ ಕಾಯ ಉಳಿವುದೇ ಕೀರ್ತಿ
- ಅಳೋನ್ ... ಮೇಲೆ ಗಳು ಬಿತ್ತು
Saturday, 13 February 2016
'ಅ' ಕಾರದಿಂದ ಪ್ರಾರಂಭವಾಗುವ ನೂರು ಗಾದೆಗಳು
Subscribe to:
Post Comments (Atom)
No comments:
Post a Comment