Ø
ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ.
Ø
ಇಂದಿನ ಸೋಲು ನಾಳಿನ ಗೆಲುವು.
Ø
ಇಂಬರಿತು ಕೊಡುವಳೆ ರಂಭೆ.
Ø
ಇಕ್ಕಟ್ಟಾದರೂ ತನ್ನ ಗುಡಿಲೇ ಚಂದ.
Ø
ಇಕ್ಕಲಾರದ ಕೈ ಎಂಜಲು.
Ø
ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು.
Ø
ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ.
Ø
ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ.
Ø
ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ.
Ø
ಇಟ್ಟ ವಿಭೂತಿ ಪಟ್ಟದಂತೆ.
Ø
ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು.
Ø
ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ.
Ø
ಇಡಿಯಾಗಿ ಮುಳುಗಿದವನಿಗೆ ಚಳಿಯೇನು?ಮಳೆಯೇನು?
Ø
ಇಡೀ ಮುಳುಗಿದರೂ ಮೂಗು ಮೇಲೆ.
Ø
ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ.
Ø
ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
Ø
ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
Ø
ಇತರೆ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು.
Ø
ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು.
Ø
ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು.
Ø
ಇದ್ದ ನಿಜ ಆಡಿದರೆ ನಿಷ್ಠೂರ.
Ø
ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ.
Ø
ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ.
Ø
ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು.
Ø
ಇದ್ದದ್ದು ಹೋಯಿತು ಮದ್ದಿನ ಗುಣದಿಂದ.
Ø
ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ.
Ø
ಇದ್ದದ್ದು ಹೋಯಿತು ಮದ್ದಿನ ಗುಣದಿಂದ.
Ø
ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು.
Ø
ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ.
Ø
ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ.
Ø
ಇದ್ದೂ ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು.
Ø
ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
Ø
ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
Ø
ಇಬ್ಬರ ಜಗಳ ಮೂರನೆಯವನಿಗೆ ಲಾಭ.
Ø
ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ.
Ø
ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
Ø
ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು).
Ø
ಇರಲಾರದೆ ಇರುವೆ ಬಿಟ್ಟುಕೊಂಡು ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ.
Ø
ಇರು ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ.
Ø
ಇರುವುದೆಲ್ಲವ ಬಿಟ್ಟು ,ಇಲ್ಲದುದರೆಡೆಗೆ ಸಾಗುವುದೇ
ಜೀವನ.
Ø
ಇರುವೆಗೆ ಇರುವೆ ಮೈ ಭಾರ, ಆನೆಗೆ ಆನೆ ಮೈ ಭಾರ.
Ø
ಇರುಳು ಕಂಡ ಭಾವೀಲಿ ಹಗಲು ಬಿದ್ದರು.
Ø
ಇರುಳು ಮಾತು ನಿದ್ದೆಗೇಡು ,ಹಗಲು ಮಾತು ಕೆಲಸಗೇಡು .
Ø
ಇರೂತನ ಹಿರಿತನ ಸಿರಿಹೋದ ಮರುದಿನ ಕಿರಿತನ.
Ø
ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
Ø
ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು.
Ø
ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು.
Ø
ಇಲ್ಲು ಪೋಗಂಡ ಅಲ್ಲು ಪೋಗಂಡ.
Ø
ಇಲಿ ಬಂತು ಎಂದರೆ ಹುಲಿ ಬಂತು ಅಂದರು.
Ø
ಇಲಿ ಬೇಟೆಗೆ ತಮಟೆ ಬಡಿದಂಗೆ.
Ø
ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
Ø
ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು.
Ø
ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ.
Ø
ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು.
Ø
ಇವ ತನ್ನೂರಲಿ ರಂಗ, ಪರೂರಲಿ ಮಂಗ.
Ø
ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು.
Ø
ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ.
Ø
ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
Ø
ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
Ø
ಈಸಬೇಕು ಇದ್ದು ಜಯಿಸ ಬೇಕು.
Ø
ಈಸಿ ನೋಡು, ಇದ್ದು ಜೈಸಿ ನೋಡು.
No comments:
Post a Comment