- ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.
- ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ,
- ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
- ಆಕಳು ಕಪ್ಪಾದ್ರೆ ಹಾಲು ಕಪ್ಪೇನು
- ಆಕಳು ದಾನಕ್ಕೆ ಕೊಟ್ರೆ,
ಹಲ್ಲು ಹಿಡಿದು ನೊಡಿದ್ರಂತೆ.
- ಆಕಾಶ ನೋಡೊದಕ್ಕೆ ನೂಕುನುಗ್ಗಲೆ ? (ಆಕಾಶ ನೋಡೋಕೆ
ನೂಕಾಟವೇಕೆ?)
- ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?
- ಆಕಾಶಕ್ಕೆ ಏಣಿ ಹಾಕಿದ ಹಾಗೆ
- ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ,ಆತ ಆಕೇನ ಬಿಟ್ಟು ಆರು ವರ್ಷ ಆಗಿತ್ತಂತೆ.
- ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗಿ
- ಆಗ-ಭೋಗ ಸೂಳೆ ಪಾಲು, ಗೂರಲು ಉಬ್ಬಸ ಹೆಂಡತಿ ಪಾಲು.
- ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
- ಆಗುವ (ಅಡುವ) ವರೆಗಿದ್ದು ಆರುವ ವರೆಗೆ ಇರಲಾರರೇ
- ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
- ಆಗೋದೆಲ್ಲಾ ಒಳ್ಳೇದಕ್ಕೆ
- ಆಚಾರ ಹೇಳೋಕ್ಕೆ,ಬದನೆಕಾಯಿ ತಿನ್ನೋಕೆ
- ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
- ಆಚಾರವೇ ಸ್ವರ್ಗ; ಅನಾಚಾರವೇ ನರಕ
- ಆಟ ಕೆಟ್ಟರೆ ದೀವಟಿಗೆಯವನ ಸುತ್ತ
- ಆಟಕ್ಕುಂಟು, ಲೆಕ್ಕಕ್ಕಿಲ್ಲ
- ಆಡಿ ಉಂಡ ಮೈ ಅಟ್ಟು ಉಂಡೀತೇ?
- ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
- ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
- ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ
- ಆಡಿದರೆ ಅರಗಿಣಿ ಕಾಡಿದರೆ ನಾಗರ ಕಾಟ
- ಆಡು ಬೆಳೆದರೆ ಆನೆಯಾದೀತೇ?
- ಆಡು ಮುಟ್ಟದ ಸೊಪ್ಪಿಲ್ಲ
- ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
- ಆಡುವವ ಆಡಿದ್ರೆ ನೋಡುವವಗೆ ಸಿಗ್ಗು
- ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ
- ಆಡೋಣ ಬಾ ಕೆಡಿಸೋಣ ಬಾ
- ಆಡೋದು ಮಡಿ ಉಂಬೋದು ಮೈಲಿಗೆ
- ಆತ್ಮೀಯವಾದ ಪ್ರೇಮ ಅಮರವಾದದ್ದು.
- ಆತುರಕ್ಕೆ ಅಜ್ಜಿ
ಮೈನೆರೆದಳು
- ಆತುರಗಾರನಿಗೆ ಬುದ್ಧಿ ಮಟ್ಟ
- ಆದ ಕೆಲಸಕ್ಕೆ ಅತ್ತೆ ಬಂದಂತೆ
- ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
- ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
- ಆದರೆ ಹಬ್ಬ, ಇಲ್ಲದಿದ್ದರೆ ಬರಗಾಲ.
- ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ?
- ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು
- ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
- ಆನೆ ಸತ್ರೂ ಸಾವಿರ ಆದ್ರೂ ಸಾವಿರ
- ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ
- ಆನೆ ಹೋದಲ್ಲೇ ದಾರಿ, ಶಟ್ಟಿ ಬಿಟ್ಟಲ್ಲೇ ಪಟ್ಟಣ !
- ಆನೆಗೂ ಅಡಿ ತಪ್ಪೀತು (ಆನೆಯಂಥದೂ ಮುಗ್ಗರಿಸ್ತದೆ )
- ಆನೆಗೆ ಚಡ್ಡಿ
ಹೊಲಿಸಿದ ಹಾಗೆ
- ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ
- ಆಪತ್ತಿಗಾದವನೇ ನಿಜವಾದ ಗೆಳೆಯ.
- ಆಪತ್ತಿಗಾದವನೇ ನೆಂಟ
- ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
- ಆಯ್ಕೊಂಡ್ ತಿನ್ನೋ ಕೋಳಿ ಕಾಲು ಮುರಿದ ಹಾಗೆ !
- ಆಯಕಟ್ಟು ಇಲ್ಲದವನಿಗೆ ಆರುಕಟ್ಟು ವೀಭೂತಿ
- ಆರಕ್ಕೇರಲಿಲ್ಲ,
ಮೂರಕ್ಕೀಳಿಯಲಿಲ್ಲ. (ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ)
- ಆರತಿಗೆ ಒಬ್ಬ ಮಗಳು ಕೀರ್ತಿಗೆ ಒಬ್ಬ ಮಗ
- ಆರಿದ್ರಾ ಮಳೆ ಆರದೇ ಹುಯ್ಯುತ್ತೆ.(ಪೂರ್ವಾಷಾಢ, ಉತ್ತರಾಷಾಢ ಮಳೆಗಳು)
- ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
- ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು
- ಆರು ಕಾಸಿನ ಕೆಲಸ ಆದರೂ ಅರಮೆನೆಯ ಕೆಲಸ ಮಾಡು
- ಆರು
ಕೊಟ್ಟರೆ
ಅತ್ತೆ
ಕಡೆ,
ಮೂರು
ಕೊಟ್ಟರೆ
ಸೊಸೆ
ಕಡೆ
- ಆರು ದೋಸೆ ಕೊಟ್ರೆ ಅತ್ತೆ ಕಡ, ಮೂರು ದೋಸೆ ಕೊಟ್ರೆ ಮಾವನ ಕಡೆ
- ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
- ಆರುವ ದೀಪಕ್ಕೆ ಕಾಂತಿ ಹೆಚ್ಚು
- ಆರೋಗ್ಯವೇ ಭಾಗ್ಯ
- ಆಲಸ್ಯಂ ಅಮೃತಂ ವಿಷಂ
- ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
- ಆವು ಕಪ್ಪಾದ್ರೆ ಹಾಲು ಕಪ್ಪೇನು
- ಆಶ್ಲೇಷ ಮಳೆ , ಈಸಲಾರದ ಹೊಳೆ.
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
- ಆಸರೆ ಇಲ್ಲದ ಹೆಣ್ಣು ಬೀದಿ ಹಣ್ಣು
- ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
- ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
- ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ್ದು
- ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
- ಆಸೆಗೆ ಕೊನೆಯಿಲ್ಲ
- ಆಸೆಗೆ ತಕ್ಕ ಪರಿಶ್ರಮ ಬೇಕು.
- ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
- ಆಸೆಯಿ೦ದ ಅಳಿಯ ಬ೦ದ್ರೆ ಮಗಳು ಹೊರಗಾಗಿರೋದೇ?
- ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
- ಆಸೆಯೇ ಜೀವನ, ಜೀವನವೇ ಆಸೆ.
- ಆಸೆಯೇ ದು:ಖಕ್ಕೆ ಮೂಲ
- ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
- ಆಳಾಗದವ ಅರಸನಲ್ಲ,
ಹಟ ಹಿಡಿದವ ಸಾಮ್ರಾಟನಲ್ಲ.
- ಆಳಾಗಬಲ್ಲವನು ಅರಸನಾಗಬಲ್ಲ.
- ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
- ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
Tuesday, 16 February 2016
'ಆ'ಕಾರದಿಂದ ಪ್ರಾರಂಭವಾಗುವ ಗಾದೆಗಳು
Subscribe to:
Post Comments (Atom)
No comments:
Post a Comment