ದೋಷ ನಿದಾನ (ಸಾಮರ್ಥ್ಯ) ಪರೀಕ್ಷೆ
ಜೂನ್
ಒಂಬತ್ತನೇ ತರಗತಿ
ಪ್ರಥಮ ಭಾಷೆ ಕನ್ನಡ
ಒಟ್ಟು ಅಂಕಗಳು : 15 ಕಾಲಾವಧಿ : 40 ನಿಮಿಷಗಳು1. ಮಹಾಪ್ರಾಣಾಕ್ಷರವಿರುವ ಎರಡು ಪದ ಬರೆಯಿರಿ. 1
2. ಕೌರವನು ವೈಭವದಿಂದ ಮೆರೆದನು. – ಈ ವಾಕ್ಯದಲ್ಲಿರುವ ವೃದ್ಧಿಅಕ್ಷರಗಳನ್ನು ಗುರುತಿಸಿರಿ. 1
3. ಯಾವುದಾದರೂ ಎರಡು ಷಟ್ಪದಿಯ ಹೆಸರನ್ನು ತಿಳಿಸಿರಿ. 1
4. ಅನುಕರಣಾವ್ಯಯವಿರುವ ಒಂದು ವಾಕ್ಯವನ್ನು ಬರೆಯಿರಿ. 1
5. ಸವರ್ಣದೀರ್ಘಸಂಧಿಗೆ ಒಂದು ಉದಾಹರಣೆಯನ್ನು ಕೊಡಿರಿ. 1
6. ಬಿಟ್ಟಸ್ಥಳವನ್ನು ತುಂಬಿರಿ. 5
1) ಕಂದ ಪದ್ಯದಲ್ಲಿರುವ ಒಟ್ಟು ಸಾಲುಗಳ ಸಂಖ್ಯೆ------
2) ಪದದ ಮೂಲರೂಪಕ್ಕೆ------ಎನ್ನುತ್ತಾರೆ
3) ಅಂಚೆ ಪದದ ತತ್ಸಮ ರೂಪ------
4) ತಪತಪ, ಅಲ್ಲಲ್ಲಿ, ಗುರುವಿಂದ-ಇವುಗಳಲ್ಲಿ ದ್ವಿರುಕ್ತಿಪದ-----
5) ಉಪಮಾನ ಉಪಮೇಯಗಳಿಗೆ ಸುಂದರ ಹೋಲಿಕೆ ಇರುವ ಅಲಂಕಾರ-----
7. ‘ಮಾಡಿದ್ದುಣ್ಣೋ ಮಹರಾಯ’ – ಈ ಗಾದೆಯನ್ನು ವಿಸ್ತರಿಸಿ ಬರೆಯಿರಿ. 2
8. ನಿಮ್ಮ ತಂದೆಯವರಿಗೆ ಒಂದು ಪತ್ರ ಬರೆಯಿರಿ. 3
No comments:
Post a Comment