ಮೂವರ ಸಾರಥ್ಯದಲಿ ನೋವು ನಲಿವುಗಳ ಕಂಡಿರುವೆ
ಸಂತಸದ ಕ್ಷಣಗಳನು ಬಿಡದೆ ಸಂಭ್ರಮಿಸಿರುವೆ
ನಾಲ್ಕನೆಯ ಸಾರಥ್ಯದ ತೇರನಿಂದು ನಾನು
ನಾನಾ ನಿರೀಕ್ಷೆಯಿಂದಲೇ ಎಲ್ಲರೊಡಗೂಡಿ ಏರುತಿರುವೆ
ಸ್ವಾನುಭವದಿಂದ ಯೋಜನೆಗಳನು ಯೋಜಿಸುತ
ಗರಿಮೂಡಿಸುವ ಸಾಧನೆಯ ಹಾದಿಯನರಸಿ ಸಾಗುತ
ತರತಮವನೆಣಿಸದೆ ಎಲ್ಲರ ಸಾಮರ್ಥ್ಯವ ಬಳಸುತ
ನಿರೀಕ್ಷಿತ ಫಲವ ಗಳಿಸೆ ಉತ್ಸಾಹದಿಂ ಹೆಜ್ಜೆಯಿಡುತ
ಮನ್ನಣೆಯ ಬಯಸದೆ ನಿಸ್ವಾರ್ಥದಿಂ ಕಾರ್ಯವೆಸಗುತ
ಗೆಲುವು ಸೋಲಿನ ಹಾದಿಯೆನ್ನದೆ ನಿಮ್ಮೊಂದಿಗಿಹೆವು ನಾವು
ಸುಮೈತ್ರಿಯಿಂ ಸಮನ್ವಯವ ಸಾಧಿಸುತ-
-ಮಿತ ಜಾಣ್ಮೆಯ ತೋರಿ ಪರಿಶ್ರಮದಿಂ ಮಾಳ್ಪ ಪವಿ-
-ತ್ರ ಕಾರ್ಯವಿದು ಉಪಾಸನಾ ಕೈಂಕರ್ಯವಿದು
ಇದನರಿತು ನಡೆದೊಡೆ ಸೋಲಿಲ್ಲ ನಿಮಗೆಂದೆಂದೂ
ನಿಮ್ಮೊಡೆನಿಹೆವು ಎಂ.ಎಲ್.ಎ ಸಂಸ್ಥೆಯೇಳ್ಗೆಯ ಕಾಯಕದಲಿ ನಾವೆಂದೆಂದೂ
-ಎ.ಪದ್ಮ
ಮೇ 2015
No comments:
Post a Comment