ದೋಷ ನಿದಾನ (ಸಾಮಥ್ರ್ಯ) ಪರೀಕ್ಷೆ
ಕನ್ನಡ ಪ್ರಥಮ ಭಾಷೆ
ಜೂನ್ ಮೊದಲವಾರ
ಒಟ್ಟು ಅಂಕಗಳು : 15 ಕಾಲಾವಧಿ : 45 ನಿಮಿಷಗಳು
1. “ಅ” ಪಟ್ಟಿಯಲ್ಲಿರುವ ವ್ಯಾಕರಣಾಂಶಗಳನ್ನು “ಪ” ಪಟ್ಟಿಯಲ್ಲಿರುವ ಉದಾಹರಣೆಗಳೊಂದಿಗೆ ಹೊಂದಿಸಿ ಅವುಗಳ ಕ್ರಮಾಕ್ಷರ ಸಹಿತ ಬರೆಯಿರಿ. 3
‘ಅ’ ‘ಪ’
1) ಜೋಡುನುಡಿ ಯ)ಮಸಿಹಚ್ಚು
2) ಸರ್ವನಾಮ ರ) ಘಮಘಮ
3) ದ್ವಿರುಕ್ತಿ ಲ) ಸರ್ಕಾರ
4)ನುಡಿಗಟ್ಟು ವ) ಸುತ್ತಣ ಲೋಕ 5) ಅನುಕರಣಾವ್ಯಯ ಶ) ಹಣ್ಣು ಹಂಪಲು
6) ಅನ್ಯದೇಶ್ಯ ಷ) ಕೆಮ್ಮತ್ತ ಕೆಮ್ಮುತ್ತ
ಸ) ಇವು
2.
ಕೆಳಗೆಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರದ ಹೆಸರನ್ನು ತಿಳಿಸಿ ಸಮನ್ವಯಗೊಳಿಸಿರಿ. 2
“ಕನ್ನಡನಾಡು ಭೂಮಿಗೆ ಇಳಿದು ಬಂದ ಸ್ವರ್ಗದಂತಿದೆ.”
3.
ಕೆಳಗೆಕೊಟ್ಟಿರುವ ಪದ್ಯ ಭಾಗಕ್ಕೆ ಪ್ರಸ್ಥಾರ ಹಾಕಿ ಗಣವಿಭಾಗ ಮಾಡಿ ಛಂದಸ್ಸಿನ ಹೆಸರನ್ನು ತಿಳಿಸಿರಿ. 2
ಪ್ರತಿನಿತ್ಯ ಕಲಿತ ಪಾಠವ
ತಪ್ಪದೆ ಓದುತ ಒಲವಿನಲಿ ಗುರುಗಳುಪದೇ|
4.
ಕೆಳಗೆಕೊಟ್ಟಿರುವ ಗಾದೆಗಳಲ್ಲಿ ಒಂದನ್ನು ಐದಾರು ವಾಕ್ಯಗಳಲ್ಲಿ ವಿಸ್ತರಿಸಿರಿ. 2
ಮಾಡಿದ್ದುಣ್ಣೋ ಮಹರಾಯ
ಹಾಸಿಗೆ ಇದ್ದಷ್ಟು ಕಾಲು ಚಾಚು.
5. ಬಾಗಲಕೋಟೆಯ ಸರ್ಕಾರಿ ಪ್ರೌಢಶಾಲೆಯ 10ನೆ ತರಗತಿಯ ಎ ವಿಭಾಗದಲ್ಲಿ ಓದುತ್ತಿರುವ ಸಂಧ್ಯಾ/ ದಿವಾಕರ್ ಎಂದು ಭಾವಿಸಿ ಸೂಕ್ತಕಾರಣ ತಿಳಿಸಿ ಮುಖ್ಯೋಪಾಧ್ಯಾಯರಿಗೆ ರಜಾ ಪತ್ರ ಬರೆಯಿರಿ. 3
ಅಥವಾ
ನೀವು ತಿಪಟೂರಿನ ಗಾಂಧೀನಗರದ ಸರಸ್ವತಿ /ನಾಗೇಶ್ ಎಂದು ಭಾವಿಸಿ ಮೈಸೂರಿನ ವಾಣಿವಿಲಾಸರಸ್ತೆಯಲ್ಲಿ ವಾಸವಾಗಿರುವ ತಂದೆ ರಾಮಯ್ಯನವರಿಗೆ ಪರೀಕ್ಷಾ ಸಿದ್ಧತೆಯನ್ನು ಕುರಿತು ಒಂದು ಪತ್ರ ಬರೆಯಿರಿ.
6. ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕುರಿತು 8-10 ವಾಕ್ಯಗಳಿಗೆ ಮೀರದಂತೆ ಒಂದು ಕಿರು ಪ್ರಬಂಧ ಬರೆಯಿರಿ. 3
-ಪುಸ್ತಕದ ಮಹತ್ವ.
-ಕಲೆಯ ಬೀಡು ಕರ್ನಾಟಕ
-ಸ್ವಾತಂತ್ರ್ಯ ದಿನಾಚರಣೆ
****************
No comments:
Post a Comment