ಶ್ರೀಮತಿ ಎಸ್. ಲೀಲಮ್ಮ
ಲೀಲಾ ಜಾಲವಲ್ಲ
ಲಘು ವಿಷಯವಿದಲ್ಲವೇ ಅಲ್ಲ-
ಮ್ಮನ ಸ್ಥಾನದಲಿರುವಿರಿ ನೀವೀಗ
ನಿಮ್ಮ ಪಾತ್ರವಧಿಕವೀಗ
ಮಮತೆ, ಪ್ರೀತಿಯನೆ ಬಯಸುವೆವು ನಾವು
ಗೆಲುವಿನ ಸಾಧನೆಯ ಸೂತ್ರದಾರರು ನೀವು
ಸುಮ್ಮನೆ ಕೂರುವ ಸಮಯವಿದಲ್ಲ
ಸ್ವಾನುಭವದಿಂದೆಲ್ಲವನೀಕ್ಷಿಸಿ
ಗತವೈಭವವ ಮೀರಿದ ವೈಭವವ
ತರುವಯೋಜನೆಯ ರೂಪಿಸಿರೆಂದು
ಕೋರುವೆವು ನಯ ವಿನಯದಿಂದ
ರುಜು ಮಾರ್ಗದಿ ಮಾರ್ಗದರ್ಶನವ ಮಾಡಿ
ವಹಿಸಿ ಗುರುತರ ಜವಾಬ್ದಾರಿಯನು ಆಗ
ನಾವೆಂದೆಂದಿಗೂ ನಿಮ್ಮೊಂದಿಗೆನುವೆ-
ವು ನಾವು ನಿಮ್ಮ ಸಹೋದ್ಯೋಗಿಗಳು
- ಎ. ಪದ್ಮ ಫೆಬ್ರವರಿ 2006
No comments:
Post a Comment