ಟೊಳ್ಳು ಬಾಂಧವ್ಯದಲಿ ತೊಳಲಾಡುತಿದೆ ಬದುಕಿಂದು
ಸೋದರಿಕೆಯ ಸೌಹಾರ್ದ ಸೋರಿ ಹೋಗಿದೆ ಇಂದು
ಮಕ್ಕಳು ಮೊಮ್ಮಕ್ಕಳಲಿ ಮಮಕಾರವಿಲ್ಲವಾಗಿದೆ ಇಂದು
ಅಜ್ಜಅಜ್ಜಿಯ ಅಕ್ಕರೆಯ ನುಡಿ ಅಣಕವಾಗುತಿವೆ ಇಂದು
ನಾಗಾಲೋಟಕೆ ನಲುಗಿ ನರಳುತಿದೆ ಬದುಕು
ಯಾಂತ್ರಿಕತೆಯಲಿ ಯಂತ್ರವಾಗಿದೆ ಬದುಕು
ನಾಗಾಲೋಟಕೆ ನಲುಗಿ ನರಳುತಿದೆ ಬದುಕು
ಯಾಂತ್ರಿಕತೆಯಲಿ ಯಂತ್ರವಾಗಿದೆ ಬದುಕು
ತಾಂತ್ರಿಕತೆಗೆ ತತ್ತರಿಸಿ ಅತಂತ್ರವಾಗಿದೆ ಬದುಕುಆ ಆಧುನಿಕತೆಯ ಆರ್ಭಟಕೆ ಆತಂಕಗೊಂಡಿದೆ ಬದುಕು
ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆ
ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆ
ಮುಖವಾಡ ನಿಜಮುಖವ ಮರೆಮಾಚುತಿದೆ
ಅಹಮಿಕೆಯ ಹಮ್ಮಿನಲಿ ಎಲ್ಲ ಬರಡಾಗುತಿದೆ
ಬಣ್ಣ ಬಣ್ಣದ ಬಾಯಿ ಮಾತಿಗೆ ಬರಗಾಲವಿಲ್ಲ
ಪರರ ಪರಿಶ್ರಮವ ಪರಿಗಣಿಸಿ ಮನ್ನಿಸುವರಿಲ್ಲ
ಪದವಿ ಪ್ರತಿಷ್ಟೆ ಬಿರುದಿನ ಹಿಂದೆ ಬಿದ್ದಿರುವರೆಲ್ಲ
ಭ್ರಷ್ಟತೆಯು ಸ್ಪಷ್ಟವಾಗಿದ್ದರು ಬಡಿದೋಡಿಪರಿಲ್ಲ
ಭ್ರಷ್ಟತೆಯು ಸ್ಪಷ್ಟವಾಗಿದ್ದರು ಬಡಿದೋಡಿಪರಿಲ್ಲ
ಮುತ್ತಿಟ್ಟು ತುತ್ತಿಟ್ಟು ಮುದ್ದಿಸಿದ ಮನಗಳಿಲ್ಲವಾಗಿವೆ ಇಂದು
ಕಷ್ಟ ಸುಖದಲಿ ಇಂಬುಗೈದಾ ಹೃದಯಗಳು ಕಾಣದಾಗಿವೆ ಇಂದು
ನಮ್ಮವರು ತಮ್ಮವರು ಎಂಬ ವಾತ್ಸಲ್ಯ ದೂರವಾಗಿದೆ ಇಂದು
ಅಕ್ಕರೆಯ ನುಡಿ ಕಲಿಸಿ, ತಿದ್ದಿ ತೀಡಿದ ಪರಂಪರೆ ಮರೆಯಾಗಿದೆ ಇಂದು
ಪ್ರೀತಿ ವಾತ್ಸಲ್ಯ ಸಹನೆ ಸಹಕಾರ ಬೇಕಿದೆ ಇಂದು
ಪ್ರೀತಿ ವಾತ್ಸಲ್ಯ ಸಹನೆ ಸಹಕಾರ ಬೇಕಿದೆ ಇಂದು
ಅಹಮಿಕೆಯ ಅಹಂಕಾರ ಅಳಿಯ ಬೇಕಿದೆ ಇಂದು
ಶಾಂತಿ ಸೌಹಾರ್ದ ಸಹಬಾಳ್ವೆ ಬೇಕಿದೆ ನಮಗಿಂದು
ಶಾಂತಿ ಸೌಹಾರ್ದ ಸಹಬಾಳ್ವೆ ಬೇಕಿದೆ ನಮಗಿಂದು
ಅದು ಬರುವುದು ಎಂದು ?
ಬೇಗನೇ ಬರಲೆಂದು ಆಶಿಸುವೆವು ನಾವಿಂದು
No comments:
Post a Comment