ನುಡಿಯೆ ನುಡಿವುದು
ನುಡಿವಲ್ಲಿ ನುಡಿವುದು
ನುಡಿವುದ ನುಡಿವುದು
ನುಡಿವಷ್ಟೇ ನುಡಿವುದು
ನುಡಿವಂತೆ ನುಡಿವುದು
ನುಡಿ ಮುಟ್ಟುವಂತೆ ನುಡಿವುದು
ನುಡಿ ತಟ್ಟುವಂತೆ ನುಡಿವುದು
ಮನ ಮುಟ್ಟುವಂತೆ ನುಡಿವುದು
ಮನ ತಟ್ಟುವಂತೆ ನುಡಿವುದು
ಮನದಲಿ ಉಳಿವಂತೆ ನುಡಿವುದು
ಮನ ತೆರೆವಂತೆ ನುಡಿವುದು
ಮನ ಮಾಗುವಂತೆ ನುಡಿವುದು
ಮಿತದಲಿ ನುಡಿವುದು
ಹಿತದಲಿ ನುಡಿವುದು
ತೀಕ್ಷ್ಣದಲಿ ನುಡಿವುದು
ಘನತೆಯಲಿ ನುಡಿವುದು
ಘನತೆ ಬರುವಂತೆ ನುಡಿವುದು
ಗಾಂಭೀರ್ಯದಲಿ ನುಡಿವುದು
ಗಹನದಲಿ ನುಡಿವುದು
ಬೆಲೆ ಬರುವಂತೆ ನುಡಿವುದು
ಬೆಲೆ ಬರುವಲ್ಲಿ ನುಡಿವುದು
ಬೆಲೆ ತರುವಂತೆ ನುಡಿವುದು
ಬೆಲೆ ಬಾಳುವಂತೆ ನುಡಿವುದು
No comments:
Post a Comment