ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ಸಂಕಲನಾತ್ಮಕ ಪರೀಕ್ಷೆ
ಹತ್ತನೆಯ ತರಗತಿ
ವಿಷಯ : ಕನ್ನಡ ತೃತೀಯ ಭಾಷೆ
ಗರಿಷ್ಠ ಅಂಕ : 80 ಪರಮಾವಧಿ : 2-30 ಗಂಟೆಗಳು
ಸೂಚನೆಗಳು :
•ಪ್ರಶ್ನೆ ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
•ವಿಭಾಗ `ಎ’ ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
•ವಿಭಾಗ `ಬಿ’ ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು 12 ಅಂಕಗಳು
•ವಿಭಾಗ `ಸಿ’ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ 15 ಅಂಕಗಳು
•ಉತ್ತರಗಳು ನೇರವೂ, ಸ್ಪಷ್ಟವೂ ಆಗಿರಬೇಕು
•ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
•ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಭಾಗ - `ಎ’
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ. 10X1=10
1.
ಅಲೆಮಾರಿಗಳು ರಾತ್ರಿವೇಳೆ ಅಮೇರಿಕಾದಲ್ಲಿ
ಕಂಡುಬಂದರೆ ಯಾವ ಶಿಕ್ಷೆಯನ್ನು ಅನುಭವಿಸ ಬೇಕಾಗುತ್ತದೆ?
2.
ಅನಿಲ್ ಕುಂಬ್ಳೆಯವರು ಔಟಾಗದೆ 110 ರನ್ ಗಳಿಸಿದ ಟೆಸ್ಟ್ ಪಂದ್ಯ ಯಾವುದು?
3.ಅನಿಲ್ ಕುಂಬ್ಳೆಯವರು
ಯಾವ ಆಟದ ಮೈದಾನಲ್ಲಿ ಎಲ್ಲಾ ಹತ್ತು ವಿಕೆಟ್ಗಳನ್ನೂ
ಪಡೆದು ವಿಶ್ವದಾಖಲೆಯನ್ನು ಸಾಧಿಸಿದರು?
4 ಸುಕವಿಯಶೋ ನಿರ್ಮತ್ಸರನ್’ ಎಂಬ ಬಿರುದನ್ನು ಪಡೆದಿದ್ದ ಕವಿ
ಯಾರು?
5. ಅತ್ಯಂತ ಇಂಪಾದ ಗಾನಕ್ಕೆ ಹೆಸರಾದ ಹಕ್ಕಿ ಯಾವುದು?
6. ಮನುಷ್ಯರೆಲ್ಲಾ ಒಂದೇ
ಎಂದು ಹೇಳಿರುವ ಕನ್ನಡದ ಆದಿಕವಿಯ ವಾಣಿಯಾವುದು?
7. ಬಿ. ಆರ್. ಲಕ್ಷ್ಮಣರಾವ್ ಅವರು ಅಕ್ಷರವನ್ನು ಯಾವುದಕ್ಕೆ ಹೋಲಿಸಿದ್ದಾರೆ?
8.’ಕರ್ನಾಟಕ(ತ್ವ) ಗದ್ಯಭಾಗದಲ್ಲಿ
ಪ್ರಸ್ತಾಪಿಸಿರುವಂತೆ ಮಾನಭಂಗಕ್ಕೂ, ಮರಣಕ್ಕೂ ಇರುವ ವ್ಯತ್ಯಾಸವೇನು?
9. ಈರಪ್ಪ ಎಂ. ಕಂಬಳಿಯವರು ಕೊಪ್ಪಳದಿಂದ ಹೊರಟ ತುಂಬಿದ ಬಸ್ಸನ್ನು ಯಾವುದಕ್ಕೆ ಹೋಲಿಸಿದ್ದಾರೆ?
10.ಈರಪ್ಪ ಎಂ. ಕಂಬಳಿಯವರ ಯಾವ ಮಾತಿಗೆ ಸಹ ಪ್ರಯಾಣಿಕರು ಹುಬ್ಬೇರಿಸಿದರು?.
ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ. 10X2=20
11 ರಾಜರತ್ನಂರವರು ವಳಯ ಪದವನ್ನು ಬಳೆಗೆ ಹೋಲಿಸಿ ವಿವರಿಸಿರುವುದರ
ವೈಶಿಷ್ಟ್ಯವೇನು?
12. ವಸುಧಾ ಎಂಬ ಪದದ ಅರ್ಥವೇನು? ಈ ಅರ್ಥ ಬರಲು ಕಾರಣವೇನು?
13 ರಾಜರತ್ನಂರವರು ತಿಳಿಸಿರುವಂತೆ
ಕರ್ನಾಟಕತ್ವದ ಗುಣಗಳಾವುವು?
14. ಕಲ್ಕತ್ತದಲ್ಲಿರುವ
ಪ್ರಖ್ಯಾತ ಆಟದ ಮೈದಾನ ಯಾವುದು? ಆ ಮೈದಾನದಲ್ಲಿ ಕುಂಬ್ಳೆಯವರ ಅದ್ಭುತ ಸಾಧನೆ ಯಾವುದು?
15.
ಕುಂಬ್ಳೆಯವರ ಶಾಲಾ ಶಿಕ್ಷಣವನ್ನು ಕುರಿತು ಬರೆಯಿರಿ?
16. ಮನುಜ ಲೋಕವನ್ನು ದಿವಿಜಲೋಕವನ್ನಾಗಿ ಮಾಡಿವವರು
ಯಾರು? ಹೇಗೆ?
17. ಕೋಗಿಲೆಯ ಗಾನವನ್ನು ಕೇಳಿ ಕವಿಯಲ್ಲಾದ ಬದಲಾವಣೆಗಳಾವುವು?
18. ಆಂಗ್ಲರು ಆಫ್ರಿಕನ್ನರಲ್ಲಿ ಹರಿವ ನೆತ್ತರೊಂದೆ ಎಂದು ಹೇಳಿರುವುದರ ಔಚಿತ್ಯವೇನು?
19. ‘ಬೆಳಕ ಸತ್ವ ಒಂದೇ’ ಎನ್ನುವುದಕ್ಕೆ ಕವಿಯು ನೀಡಿರುವ ನಿದರ್ಶನಗಳಾವುವು?
20. ಯಾವ ಯಾವ ಕಾರ್ಯಗಳಿ
ಯಾವ ಯಾವ ಸಾಮರ್ಥ್ಯವಿರಬೇಕೆಂದು ಸೋಮನಾಥನು ಹೇಳಿದ್ದಾನೆ?
ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಬರೆಯಿರಿ. 2X3=6
21. “ಎದುರಾಳಿ ದಾಂಡಿಗರಿಗೆ ಸಿಂಹಸ್ವಪ್ನವಂತೂ ಆಗಿರುತ್ತಿದ್ದರು”.
22. “ಧರ್ಮದುಸಿರು ಒಂದೆ”.
ಈ ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ ಬರೆಯಿರಿ. 2X3=6
23. ಗೊರೂರು ರಾಮಸ್ವಾಮಿ ಅಯ್ಯಂಗಾರ್
24. ಚೆನ್ನವೀರ ಕಣವಿ
ಈ ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ. 1X3=3
25. ದೀಪ __________________
_______________________ _______________________
__________________ಸಮಸ್ತ ಅಥವಾ
ನಾವು________________
_____________________
______________________
_________________ಇಂದೆ
ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ. 2X4=8
26. ಮಿನಿಪೊಲೀಸ್ ನಗರದಲ್ಲಿ ಎದುರಾದ ಸಮಸ್ಯೆಯಿಂದ ಗೊರೂರರು ಪಾರಾದುದು ಹೇಗೆ? ನಿಮ್ಮ ಮಾತುಗಳಲ್ಲಿ ವಿವರಿಸಿರಿ.
ಅಥವಾ
ಅನಿಲ್ ಕುಂಬ್ಳೆಯವರಿಗೆ ಸಂದ ಪುರಸ್ಕಾರ ಹಾಗೂ ಪ್ರಶಸ್ತಿಗಳನ್ನು ಕುರಿತು ಬರೆಯಿರಿ.
27.ಅಕ್ಷರ ಜ್ಞಾನದ ಮಹತ್ವವನ್ನು ಬಿ. ಆರ್ ಲಕ್ಷ್ಮಣರಾವ್ ಅವರು ‘ಮಾಯಾದೀಪ’ ಪದ್ಯದಲ್ಲಿ ಹೇಗೆ ವರ್ಣಿಸಿದ್ದಾರೆ? ವಿವರಿಸಿ .
ಅಥವಾ
ಭೂಮಿತಾಯಿಯ ಕುಡಿಗಳೆಲ್ಲಾ ಒಂದೇ ಎಂಬ ಭಾವನೆಯನ್ನು ಕೆ. ಎಸ್. ನಿಸಾರ್ ಅಹಮದ್ ಅವರು ತಮ್ಮ ಕವನದಲ್ಲಿ ಹೇಗೆ ವ್ಯಕ್ತ ಪಡಿಸಿದ್ದಾರೆ ? ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
.
ಭಾಗ - `ಬಿ’
ಅನ್ವಯಿಕ ವ್ಯಾಕರಣ – 12 ಅಂಕಗಳು
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.12X1=12
28. ‘ಮಿನಿಪೊಲೀಸ್’ ಎಂಬುದು ಈ ನಾಮಪದಕ್ಕೆ ಉದಾಹರಣೆಯಾಗಿದೆ:
(ಎ) ರೂಢನಾಮ (ಸಿ) ಅಂಕಿತನಾಮ (ಬಿ) ಸರ್ವನಾಮ (ಡಿ) ಅನ್ವರ್ಥನಾಮ
29. ವರ್ಗದ ಕೊನೆಯ ಅಕ್ಷರವು ಆದೇಶವಾಗಿ ಬರುವ ಸಂಸ್ಕೃತ ಸಂಧಿ :
(ಎ) ಅನುನಾಸಿಕ (ಸಿ) ಸವರ್ಣದೀರ್ಘ (ಬಿ) ಶ್ಚುತ್ವ (ಡಿ) ಜಸ್ತ್ವ
30.“ಮಾಮರದ ಕೆಂಪು ತಳಿರು ಕೋಗಿಲೆಯ ಗಾನಕ್ಕೆ ಸ್ಫೂರ್ತಿ”.–ಈ ವಾಕ್ಯದಲ್ಲಿರುವ ಗುಣವಾಚಕ ಪದ
(ಎ) ಮಾಮರ (ಸಿ) ಕೆಂಪು (ಬಿ) ತಳಿರು (ಡಿ) ಗಾನ
31.’ಕ್ಷಣ ಕ್ಷಣ’ ಎಂಬುದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :
(ಎ) ಅನುಕರಣಾವ್ಯಯ (ಸಿ) ಜೋಡುನುಡಿ (ಬಿ) ನುಡಿಗಟ್ಟು (ಡಿ) ದ್ವಿರುಕ್ತಿ.
32. ‘ಮತಗಳ ಮಲೆಬಿಲ್ಲು’ -. ಈ ವಾಕ್ಯದಲ್ಲಿರುವ ಅಲಂಕಾರ :
(ಎ) ಉಪಮಾ (ಸಿ) ಯಮಕ (ಬಿ) ರೂಪಕ (ಡಿ) ಚಿತ್ರಕವಿತ್ವ
33.’ತೆಂಕಣ’- ಎಂದರೆ:
(ಎ) ದಕ್ಷಿಣ (ಸಿ) ಉತ್ತರ (ಬಿ) ಪೂರ್ವ (ಡಿ) ಪಶ್ಚಿಮ
34. ‘ಭೂಮಿ’ - ಪದದ ತದ್ಭವ ರೂಪ:
(ಎ) ಭುವಿ (ಸಿ) ಬುವಿ (ಬಿ) ಭೂಮಿಕ (ಡಿ) ಭೌಮ
35.’ಅಸೂಯೆ’ ಪದದ ವಿರುದ್ಧಾರ್ಥ ಪದ :
(ಎ) ಅನಸೂಯೆ (ಸಿ) ಅನೂಸೂಯೆ (ಬಿ) ಅನಾಸೂಯೆ (ಡಿ) ಅನನುಸೂಯೆ
36. ತಾಯಿ ಪದದ ಅನ್ಯಲಿಂಗ:
(ಎ) ಮಾತೃ (ಸಿ) ಪಿತೃ (ಬಿ) ತಂದೆ (ಡಿ) ಅವ್ವ.
37 ನಾನು, ನೀವು, ಅವರು, ಇವರು ಎಲ್ಲಾ ಒಂದೆ-ಈ ವಾಕ್ಯದಲ್ಲಿರುವ ಉತ್ತಮ ಪುರುಷ ಸರ್ವನಾಮ:
(ಎ) ನಾನು, (ಸಿ) ನೀವು, (ಬಿ) ಅವರು, (ಡಿ) ಇವರು.
38. ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದ :
(ಎ) ಬಾಣ ಬಿರುಸು (ಸಿ) ಅಕ್ಕಿ ರಾಗಿ (ಬಿ) ಬಿಳಿದು ಕರಿದು (ಡಿ) ನೆತ್ತರು ನೆತ್ತರು
39.‘ನೆರವಿಂದ’ – ಇಲ್ಲಿರುವ ವಿಭಕ್ತಿ ಪ್ರತ್ಯಯ:
(ಎ) ತೃತೀಯಾ (ಸಿ) ದ್ವಿತೀಯಾ (ಬಿ) ಪಂಚಮೀ (ಡಿ) ಷಷ್ಠೀ
ಭಾಗ - `ಸಿ’
ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 15 ಅಂಕಗಳು
40. ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ಸ್ವಾರಸ್ಯ ಸಹಿತ ವಿಸ್ತರಿಸಿ ಬರೆಯಿರಿ.1X3=3
• ಅತಿ ಆಸೆ ಗತಿ ಕೆಡಸಿತು.
• ದುಡ್ಡಿದ್ದವನೇ ದೊಡ್ಡಪ್ಪ.
• ಕತ್ತೆಗೆ ಏನು ಗೊತ್ತು ಕಸ್ತೂರಿ ಪರಿಮಳ.
ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 1X4=4
ರತ್ನಾಕರವರ್ಣಿಯ ‘ಭರತೇಶವೈಭವ’ ಕನ್ನಡ ಸಾಹಿತ್ಯದಲ್ಲಿ ಒಂದು ಅಪೂರ್ವ ಕೃತಿ. ಆದಿಜಿನನ ಹಿರಿಯ ಮಗ ಪ್ರಥಮ ಚಕ್ರಿ ಭರತೇಶನ ಅನುಪಮ ಚಿತ್ರಣ. ಮಾನವೀಯ ಲಕ್ಷಣಗಳಿಂದ ಆತ್ಮೀಯತೆಯಿಂದ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತವೆ. ಭರತೇಶವೈಭವದ ವಸ್ತು ತೀರ್ಥಂಕರನ ಕಥೆಯಲ್ಲ; ಭರತ ಚಕ್ರವರ್ತಿಯ ಚರಿತ್ರೆ. ಆದಿದೇವನ ಯೋಗದ ಕಥೆಗೆ ಹಾಗೂ ಬಾಹುಬಲಿಯ ವೈರಾಗ್ಯದ ಕಥೆಗೆ ನಡುವೆ ಭರತಚಕ್ರವರ್ತಿಯ ಭೋಗ ವೈಭವ ಮಹತ್ವಾಕಾಂಕ್ಷೆಯ ಚಿತ್ರ ಪರಂಪರಾಗತವಾಗಿ ಚಿತ್ರಿತವಾಗಿದೆ. ಯೋಗಭೋಗಗಳ ಒಂದು ಸಮನ್ವಯದ ಚಿತ್ರವನ್ನು ಕಟ್ಟಿಕೊಡಲು ಕವಿ ಪ್ರಯತ್ನಿಸಿರುವುದು ಅತ್ಯಂತ ಸ್ವತಂತ್ರ ಪ್ರತಿಭಾಶೀಲತೆಯ ಲಕ್ಷಣವಾಗಿದೆ.
ಪ್ರಶ್ನೆಗಳು:
41 ರತ್ನಾಕರವರ್ಣಿಯ ಅಪೂರ್ವ ಕೃತಿಯಾವುದು?
42. ಭರತೇಶನ ತಂದೆಯಾರು?
43. ರತ್ನಾಕರವರ್ಣಿಯ ಕೃತಿಯ ವಸ್ತು ಯಾವುದು?
44. ರತ್ನಾಕರವರ್ಣಿಯ ಕೃತಿಯ ಅತ್ಯಂತ ಸ್ವತಂತ್ರ ಪ್ರತಿಭಾಶೀಲತೆಯ ಲಕ್ಷಣ ಯಾವುದು?
45. ನಿಮ್ಮ ಊರಿನಲ್ಲಿ ನಡೆಯುವ ದಸರ ಮಹೋತ್ಸವವನ್ನು ನೋಡಲು ಬರುವಂತೆ ಆಹ್ವಾನಿಸಿ ತುಮಕೂರಿನಲ್ಲಿರುವ ನಿಮ್ಮ ಗೆಳತಿ ಅನಘ /ಗೆಳಯ ಅವಿನಾಶ್ ಗೆ ಒಂದು ಪತ್ರ ಬರೆಯಿರಿ.
ಅಥವಾ
ಯಾದಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸಮನ್ಯು/ಆದ್ಯ ಎಂದು ಭಾವಿಸಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಬೆಂಗಳೂರಿನ ದೂರದರ್ಶನ ಕೇಂದ್ರಕ್ಕೆ ಹೋಗಬೇಕಾಗಿರುವುದರಿಂದ ಎರಡು ದಿನ ರಜೆಯನ್ನು ಕೊಡಬೇಕೆಂದು ಕೋರಿ ತರಗತಿಯ ಉಪಾಧ್ಯಾಯರಿಗೆ ಒಂದು ರಜಾ ಚೀಟಿಯನ್ನು ಬರೆಯಿರಿ. 1
X4=4
46. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ. 1 X4=4
*******************
No comments:
Post a Comment