Wednesday, 16 September 2015

ಅಸ್ಥಿರತೆ

ಸಹಸ್ರಮಾನವು ಬಂತೆಂದು
ಸಡಗರಿಸಿ ಸ್ವಾಗತಕೆ ಸಜ್ಜಾಯ್ತು
ಸಂತಸ ಸಂಭ್ರಮವ ಪಟ್ಟಾಯ್ತು
ಸವಿಯ ಸವಿಯ ಸರಿಸಿ
ಬಂದ ವೀರಪ್ಪ ಕಾಡಿನಾ ಚೋರ
ನಾಡಿನಾ ರಾಜ ಕಾಡುಸೇರಿದ ಸ್ವಲ್ಲು 
ನಾಡಿಗೆ ನಾಡೇ ನಡುಗಿತ್ತು
ದುಗುಡ ದುಮ್ಮಾದಿಂದ ಕುದಿದಿತ್ತು
ನಾಡಿಗೆ ಮರಳಿ ರಾಜನ ಕಂಡು ಜನ 
ನಿಟ್ಟುಸಿರು ಬಿಟ್ಟಾಯ್ತು
ಆದರೇನು? ಭೂಕಂಪದ ಕರಾಳಛಾಯೆ
ಜನರ ದುಗುಡದವ ಇಮ್ಮಡಿಸಿತ್ತು 

ಜೀವನದಸ್ಥಿರತೆಯ ಸಾರಿತ್ತು.

No comments:

Post a Comment