ಸೆಪ್ಟೆಂಬರ್ 25, 1916ರಂದು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಬಾನ್ ಎಂಬ ಹಳ್ಳಿಯಲ್ಲಿ ಜನಿಸಿದ ಪಂಡಿತ ದೀನದಯಾಳ
ಉಪಾಧ್ಯಾಯರು ಅನನ್ಯ ಸಂಘಟನಾ ಶಕ್ತಿಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಇಡೀ ದೇಶದ ಸೇವೆಗೆ ಕಂಕಣಬದ್ಧರಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ, ಗ್ರಾಮೋದ್ಧಾರಕ್ಕಾಗಿ ಸರ್ವೋದಯಕ್ಕಾಗಿ ಅವಿತರ ದುಡಿದು ಕನಸು ಕಂಡು ನನಸಾಗಿಸಲು ಕೊನೆಯ ಉಸಿರಿನ ತನಕ ದುಡಿದ ಮಹಾಪುರುಷ. ಅವರ ಕನಸು ನನಸಾಗಿಸಲು ನಾವೆಲ್ಲರೂ ಕಂಕಣ ಬದ್ಧರಾಗಿ ಶ್ರಮಿಸೋಣ.
ನಾಗ್ಲಾ ಚಂದ್ರಬಾನ್ ಕುಗ್ರಾಮದಿ ಜನುಮವತಾಳಿ
ಬಾಲ್ಯದಲೇ ಮಾತಾಪಿತೃತಾತನ ಪ್ರೀತಿಯಿಂ ವಂಚಿತನಾಗಿ
ಸೋದರತ್ತೆ ಮಾವರ ವಾತ್ಸಲ್ಯದಲ್ಲಿ ಮಿಂದು ಬೆಳೆದು
ವಿಚಾರಶೀಲ, ಅಧ್ಯಯನಶೀಲತಾನೆನಿಸಿ
ನಾನಾಜಿ ದೇಶ್ ಮುಖ್, ಭಾವ್ ಜುಗಾದೆಯ ಸಹಚರ್ಯೆಯಲಿ
ಪಕ್ಷ ಹಾಗೂ ಪರಿವಾರದ ಹಿತಚಿಂತಕನಾಗಿ
ಅನನ್ಯ ಸಂಘಟನಾಕಾರ ತಾನೆನಿಸಿ
ಕಿರಿಯರಿಗೆ ಮಾರ್ಗದರ್ಶಕನಾಗಿ
ದೇಶದ ಸೇವೆಗೆ ಕಂಕಣಬದ್ಧರಾಗಿ
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಾಗಿ
‘ರಾಷ್ಟ್ರಧರ್ಮ ಪ್ರಕಾಶನ’, ‘ರಾಷ್ಟ್ರ ಧರ್ಮ’
‘ಪಾಂಚಜನ್ಯ’, ‘ಸ್ವದೇಶ್’ ಗಳ ಜನ್ಮದಾತನಾಗಿ
No comments:
Post a Comment