ಮಲ್ಲೇಶ್ವರಂ ಲೇಡೀಸ್
ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ಸಂಕಲನಾತ್ಮಕ ಪರೀಕ್ಷೆ
ಹತ್ತನೆಯ ತರಗತಿ
ವಿಷಯ : ಕನ್ನಡ ತೃತೀಯ
ಭಾಷೆ
ಗರಿಷ್ಠ ಅಂಕ
: 80 ಪರಮಾವಧಿ : 2-30 ಗಂಟೆಗಳು
ಸೂಚನೆಗಳು :
•ಪ್ರಶ್ನೆ
ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
•ವಿಭಾಗ `ಎ’ ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ
ಅಧ್ಯಯನ) 53 ಅಂಕಗಳು
•ವಿಭಾಗ `ಬಿ’ ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು
12 ಅಂಕಗಳು
•ವಿಭಾಗ `ಸಿ’ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ
15 ಅಂಕಗಳು
•ಉತ್ತರಗಳು ನೇರವೂ, ಸ್ಪಷ್ಟವೂ ಆಗಿರಬೇಕು
•ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ,
ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
•ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ
ಪರಿಗಣಿಸುವುದಿಲ್ಲ.
ಭಾಗ - `ಎ’
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 53 ಅಂಕಗಳು
ಈ ಕೆಳಗಿನ ಪ್ರಶ್ನೆಗಳಿಗೆ
ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ. 10X1=10
1. ಗೊರೂರರು
ಮಿನಿಪೊಲೀಸ್ ನಗರಕ್ಕೆ ಹೋಗಲು ಕಾರಣವೇನು?
2. ಸುಧೆಯನ್ನು
ಹೇಗೆ ನೀಡಬೇಕೆಂದು ಚೆನ್ನವೀರ ಕಣವಿಯವರು ಕೋಗಿಲೆಯನ್ನು ಕೋರಿದ್ದಾರೆ?
3. ಅಖಂಡಮಂಡಲಾಕಾರ ಎಂದರೇನು?
4. ಅನಿಲ್
ಕುಂಬ್ಳೆಯವರಿಗೆ ಬಾಲ್ಯದಲ್ಲಿ ಕ್ರಿಕೆಟ್ ತರಬೇತಿ ನೀಡಿದ ಸಂಸ್ಥೆಯಾವುದು?
5. ಕಳಸ,
ಶಿಲುಬೆ, ಬಿಳಿ ಮಿನಾರು ಇವು ಯಾವ ಧರ್ಮದ ಸಂಕೇತಗಳಾಗಿವೆ?
6. ಅನಿಲ್
ಕುಂಬ್ಳೆಯವರಿಗೆ ಭಾರತ ಸರ್ಕಾರವು ನೀಡಿರುವ ಪ್ರಶಸ್ತಿಗಳಾವುವು?
7. ಈಡನ್
ಗಾರ್ಡನ್ಸ್ ಮೈದಾನದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಅನಿಲ್ ಕುಂಬ್ಳೆಯವರ ಸಾಧನೆಯೇನು?
8. ಹೊಸ
ಜೀವನ ಮತ್ತು ಹೊಸರೂಪವನ್ನು ಕೊಡುವುದು ಯಾವುದೆಂದು ಬಿ. ಆರ್. ಲಕ್ಷ್ಮಣರಾವ್ ಅವರು ಹೇಳಿದ್ದಾರೆ?
9. ಪುಲಿಗೆರೆ
ಸೋಮನಾಥನು ಹೇಳಿರುವಂತೆ ಯೋಗಿಯಾಗಲು ಅರ್ಹರಾದವರು ಯಾರು?
10. ಭಟ ಮತ್ತು ನಂಟರ ಬಗೆಗೆ ಪುಲಿಗೆರೆ ಸೋಮನಾಥನು
ಆಡಿರುವ ಮಾತುಗಳನ್ನು ತಿಳಿಸಿರಿ.
ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು,
ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ. 10X2=20
11. ಗೊರೂರು ರಾಮಸ್ವಾಮಿ ಅಯ್ಯಂಗಾರರು ಮಿನಿಪೊಲೀಸ್
ನಗರದಲ್ಲಿ ಗೊತ್ತುಪಡಿಸಿದ ಸ್ಥಳದಿಂದ ತಪ್ಪಸಿಕೊಳ್ಳಲು
ಕಾರಣವೇನು?
12. ಪೊಲೀಸರು ಗೊರೂರು ರಾಮಸ್ವಾಮಿ ಅಯ್ಯಂಗಾರರಿಗೆ
ಆಶ್ರಯ ನೀಡಲು ಕಾರಣವೇನು?
13. ಕ್ರಿಕೆಟ್ ಪಟು ಅನಿಲ್ ಕುಂಬ್ಳೆಯನ್ನು ಕುರಿತು
ಡುಂಢಿರಾಜ್ ಬರೆದಿರುವ ಹನಿಗವನ ಯಾವುದು?
14. ಕೋಗಿಲೆಯ ಕೂಜನದಿಂದಾಗುವ ಬದಲಾವಣೆಗಳನ್ನು ಚೆನ್ನವೀರ
ಕಣವಿಯವರ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
15.
ಕವಿಯು ಕೋಗಿಲೆಯನ್ನು ಏನೆಂದು ಕೋರಿದ್ದಾರೆ?
16. ಹೊಸ ಮನುಷ್ಯನನ್ನಾಗಿ ಮಾಡುವುದು ಯಾವುದು? ಹೇಗೆ
? ಎಂದು ಕವಿಯ ಹೇಳಿದ್ದಾರೆ.
17. ಬಿ. ಆರ್.ಲಕ್ಷ್ಮಣರಾವ್ ಅವರ ಹೇಳಿರುವಂತೆ ಈ
ದೇಶದ ಪ್ರಗತಿಗೆ ಯಾವುದು ಕಾರಣವಾಗುತ್ತದೆ? ಹೇಗೆ?
18. ಅನಿಲ್ ಕುಂಬ್ಳೆಯವರು ಎದುರಾಳಿಗೆ ಸಿಂಹಸ್ವಪ್ನವಾಗಿದ್ದರು
ಹೇಗೆ?
19. ಐಪಿಎಲ್ ಕ್ರೀಡಾಸ್ಪರ್ಧೆಯಲ್ಲಿ ಅನಿಲ್ ಕುಂಬ್ಳೆಯವರ
ಸಾಧನೆಗಳೇನು?
20. ಕಂಬಳಿಯವರು ವರ್ಣಿಸಿರುವ ಪ್ರಯಾಣದ ವೇಳೆ ಹೃದಯವೇ
ಕಿತ್ತು ಬಾಯಿಗೆ ಬಂದಂತಾಗುತ್ತಿದ್ದ ಸಂದರ್ಭವನ್ನು ವಿವರಿಸಿರಿ?
ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು
ವಾಕ್ಯಗಳಲ್ಲಿ ಬರೆಯಿರಿ. 2X3=6
21. “ಇಲ್ಲಿ ಎಲ್ಲ ಪೊಲೀಸರೂ ಹಾಗೆಯೇ”.
22. “ಎಲ್ಲ ಮರೆತು ಉಲಿಯುತಿರುವೆ ಸುಮಧುರಾ”.
ಈ ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ವಾಕ್ಯಗಳಲ್ಲಿ
ಬರೆಯಿರಿ. 2X3=6
23. ಜಿ. ಪಿ. ರಾಜರತ್ನಂ
24. ಕೆ. ಎಸ್ . ನಿಸಾರ್ ಅಹಮದ್
ಈ ಕೆಳಗಿನ ಪದ್ಯಭಾಗವನ್ನು
ಪೂರ್ಣಮಾಡಿರಿ. 1X3=3
25. ಅಕ್ಷರ __________________
_______________________ _______________________
__________________ರೂಪ
ಅಥವಾ
ಕರ್ನಾಟಕ ________________ _________________________
________________________ _______ಮುಗಿಲು__________
ಈ ಕೆಳಗಿನ ಪ್ರಶ್ನೆಗಳಿಗೆ
ಎಂಟು ಅಥವಾ ಹತ್ತು ವಾಕ್ಯಗಳ ಉತ್ತರಗಳನ್ನು ಬರೆಯಿರಿ. 2X4=8
26. ರಾಜರತ್ನಂರವರು ‘ಅಷ್ಟಾದಶಾಕ್ಷರೀಮಂತ್ರ’ದಲ್ಲಿ
ಅಡಗಿರುವ ಕನ್ನಡನಾಡಿನ ಹಿರಿಮೆಯನ್ನು ಹೇಗೆ ವರ್ಣಿಸಿದ್ದಾರೆ? ವಿವರಿಸಿರಿ.
ಅಥವಾ
ಅನಿಲ್ ಕುಂಬ್ಳೆಯವರ ಸಾಧನೆಗಳನ್ನು ವಿವರಿಸಿರಿ.
27. ಭೂಮಿತಾಯಿಯ ಮಕ್ಕಳಾದ ನಾವೆಲ್ಲರೂ ಒಂದಾಗಬೇಕೆಂಬ
ಭಾವನೆ ‘ಒಂದೇ’ ಎಂಬ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವರ್ಣಿಸಿರಿ.
ಅಥವಾ
ಚೆನ್ನವೀರ ಕಣವಿಯವರು ಮಾಡಿರುವ ‘ಕೋಗಿಲೆ’ಯ ಕೂಜನದ
ಸೊಗಸಾದ ವರ್ಣನೆಯನ್ನು ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ಭಾಗ - `ಬಿ’
ಅನ್ವಯಿಕ ವ್ಯಾಕರಣ
– 12 ಅಂಕಗಳು
ಈ ಕೆಳಗಿನ ಪ್ರಶ್ನೆಗಳಿಗೆ
ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು
ಆರಿಸಿ, ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.12X1=12
28. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು:
(ಎ) ಆರು (ಸಿ) ಏಳು (ಬಿ)
ಹದಿಮೂರು (ಡಿ) ಇಪ್ಪತ್ತೈದು
29. ಕ,ತ,ಪ ಗಳಿಗೆ ಗ,ದ,ಬ ಅಕ್ಷರಗಳು ಆದೇಶವಾಗಿ ಬರುವ
ಸಂಸ್ಕೃತ ಸಂಧಿ :
(ಎ) ಆಗಮ (ಸಿ) ಆದೇಶ (ಬಿ) ಶ್ಚುತ್ವ (ಡಿ) ಜಸ್ತ್ವ
30. ‘ಕವಿ’
ಪದದ ಅನ್ಯಲಿಂಗ ರೂಪ
(ಎ) ಕವಯಿತ್ರಿ (ಸಿ) ಕವಯತ್ರಿ (ಬಿ) ಕವಿಯಿತ್ರಿ (ಡಿ) ಕವಿಯತ್ರಿ
31. ಸಪ್ತಮೀ
ವಿಭಕ್ತಿ ಪ್ರತ್ಯಯ :
(ಎ) ಉ (ಸಿ) ಅನ್ನು
(ಬಿ) ಅ (ಡಿ) ಅಲ್ಲಿ
32. ವಿಜ್ಞಾನಿಗಳು ತಮ್ಮ ಸಂಶೋಧನೆಗಳಿಂದ ದೇಶವನ್ನು
ಬೆಳೆಸುತ್ತಿದ್ದಾರೆ. ಈ ವಾಕ್ಯದಲ್ಲಿರುವ ಅನ್ವರ್ಥನಾಮ ಪದ :
(ಎ) ವಿಜ್ಞಾನಿಗಳು (ಸಿ) ತಮ್ಮ (ಬಿ) ಸಂಶೋಧನೆ (ಡಿ) ದೇಶವನ್ನು
33. ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆಯಾಗಿರುವುದು:
(ಎ) ನಾನು (ಸಿ) ನಾವು (ಬಿ) ತಾವು (ಡಿ) ನೀವು
34. ‘ಬಿನದ’ - ಪದದ ತತ್ಸಮ ರೂಪ:
(ಎ) ವಿನೋದ (ಸಿ) ಆನಂದ (ಬಿ) ಬಿನ್ನಣ (ಡಿ) ಬಿಯದ
35. ನಾಕ ಪದದ ವಿರುದ್ಧಾರ್ಥ ಪದ :
(ಎ) ಸ್ವರ್ಗ (ಸಿ) ನರಕ (ಬಿ)
ಸಗ್ಗ (ಡಿ) ನಾಯಕ
36. ‘ಗೌರಿಯ ಮುಖ ಮಗುವಿನಂತಿದೆ’. –ಈ ಅಲಂಕಾರ ವಾಕ್ಯದಲ್ಲಿರುವ
ಉಪಮೇಯ :
(ಎ) ಗೌರಿ (ಸಿ) ಮುಖ (ಬಿ) ಮಗು (ಡಿ) ಅಂತಿದೆ.
37. ‘ಸ್ಪಿನ್ ಮಾಂತ್ರಿಕನ ಚೆಂಡುಗಳು ಎದುರಾಳಿ ದಾಂಡಿಗರಿಗೆ
ಸಿಂಹಸ್ವಪ್ನವಾಗಿರುತ್ತಿತ್ತು’- ಈ ವಾಕ್ಯದಲ್ಲಿರುವ ನುಡಿಗಟ್ಟು:
(ಎ)
ಚೆಂಡುಗಳು (ಸಿ) ಎದುರಾಳಿ (ಬಿ) ಸಿಂಹಸ್ವಪ್ನ (ಡಿ) ದಾಂಡಿಗ
38. ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದ :
(ಎ)
ಮತ್ತೆ ಮತ್ತೆ (ಸಿ) ಸರ ಸರ (ಬಿ) ದಬದಬ (ಡಿ) ಕೈಚಾಚು
39.‘ನನ್ನನ್ನು ಮೋಟಾರಿನಲ್ಲಿ ಕೂರಿಸಿಕೊಂಡು ತಮ್ಮ
ಕೆಲಸದ ಮೇಲೆ ಹೊರಟರು’. – ಈ ವಾಕ್ಯದಲ್ಲಿರುವ ಅನ್ಯದೇಶ್ಯಪದ:
(ಎ)
ನನ್ನನ್ನು (ಸಿ) ಮೋಟಾರಿನಲ್ಲಿ (ಬಿ) ಕೂರಿಸಿಕೊಂಡು (ಡಿ) ಕೆಲಸದ ಮೇಲೆ
ಭಾಗ - `ಸಿ’
ವಾಕ್ಯರಚನೆ ಹಾಗೂ ಬರವಣಿಗೆ
ಕೌಶಲ 15 ಅಂಕಗಳು
40. ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ
ಒಂದನ್ನು ಸ್ವಾರಸ್ಯ ಸಹಿತ ವಿಸ್ತರಿಸಿ ಬರೆಯಿರಿ. 1X3=3
•
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದಯ ಪರರಿಗೆ.
•
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
•
ಉಪ್ಪು ತಿಂದವನು ನೀರು ಕುಡಿಯಲೇ ಬೇಕು.
ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ
ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 1X4=4
ನಮ್ಮ
ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ,
ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಅದಕ್ಕೆಂದೇ ಗುರುನಾನಕರು
’ನನ್ನ ಮುಂದೆ ಗುರು ಮತ್ತು ಗೋವಿಂದ (ಭಗವಂತ) ಇಬ್ಬರೂ ಒಮ್ಮೆಗೆ ಬಂದರೆ ನನ್ನ ಗುರುವಿಗೆ ಮೊದಲು ವಂದಿಸುತ್ತೇನೆ
ನಂತರ ಭಗವಂತನಿಗೆ ನಮಸ್ಕರಿಸುತ್ತೇನೆ, ಏಕೆಂದರೆ ಗುರುವಿಂದಲೇ ಅರಿವು, ಅರಿವಿನಿಂದಲೇ ಭಗವಂತನ ಪ್ರಾಪ್ತಿ’
ಎಂದು ಹಾಡಿದ್ದಾರೆ. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ
ಸಾಗಬಲ್ಲರು.
ಪ್ರಶ್ನೆಗಳು:
41 ನಮ್ಮ ಪರಂಪರೆಯಲ್ಲಿ ಗುರುವಿಗೆ ಯಾವ ಸ್ಥಾನವನ್ನು
ನೀಡಿದೆ?
42. ಗುರು ಎಂದರೆ ಯಾರು?
43. ಗುರುನಾನಕರು ಗುರುವಿಗೆ ಮೊದಲು ವಂದಿಸುತ್ತೇನೆಂದು
ಹೇಳಿರುವುದೇಕೆ?
44. ಪರಿಪೂರ್ಣತೆಯೆಡೆಗೆ ಸಾಗಬಲ್ಲವರು ಯಾರು?
45. ರಜೆಗೆ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿ ಭದ್ರಾವತಿಯ
ನ್ಯೂ ಟೌನ್ ನಲ್ಲಿರುವ ನಿಮ್ಮ ಗೆಳತಿ ಆಶಾಗೆ ಒಂದು ಪತ್ರ ಬರೆಯಿರಿ.
ಅಥವಾ
ಸರ್ಕಾರಿ ಪ್ರೌಢಶಾಲೆ, ಕುವೆಂಪು ನಗರ, ಮೈಸೂರಿನಲ್ಲಿ
ಓದುತ್ತಿರುವ ಅನಿತಳಾದ ನೀವು ಸೂಕ್ತ ಕಾರಣ ತಿಳಿಸಿ ರಜೆಯನ್ನು ಕೊಡಬೇಕೆಂದು ಕೋರಿ ಶಾಲಾ ಮುಖ್ಯೋಪಾಧ್ಯಾಯರಿಗೆ
ರಜಾ ಚೀಟಿಯನ್ನು ಬರೆಯಿರಿ. 1
X4=4
46. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದು
ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.
1 X4=4
• ಸೊಳ್ಳೆ
ನಿರ್ಮೂಲನ ಆಂದೋಳನ.
• ಗ್ರಂಥಾಲಯ.
• ಮಕ್ಕಳ
ಶೋಷಣೆ.
*******************
No comments:
Post a Comment