ಬಾಳ ಹೂಬನದ ಕೋಮಲ ಪುಷ್ಪ ಗೆಳೆತನವು
ಹೇಳಿ ಬಣ್ಣಿಸಲದನು ಪದಗಳೇ ಇಲ್ಲ
ತಾಳ ರಾಗ ಸ್ವರವು ಮೇಳೈಸಿ ಉಲಿದಂತೆ
ಬಾಳಿಗಿಂಬೀವ ಸುಮ ನನ್ನ ಕಂದ||
ಹಸನಾಗಿ ಹರಡಿರುವ ಸುವಿಶಾಲ ಮೈತ್ರಿತರು
ಬಿಸಿಲಬೇಗೆಗೆ ತನ್ನೆರಳನೀವ ವಿಟಪಿ
ರಸಭರಿತ ಸವಿಯಾದ ಫಲವೀವ ವೃಕ್ಷವದು
ಉಸಿರೀವ ಹಸಿರಂತೆ ನನ್ನ ಕಂದ||
No comments:
Post a Comment