Sunday, 29 November 2026

*ಭಗವದ್ಗೀತೆಯ ಸಾರ* ೧೮ನೇ ಅಧ್ಯಾಯ

ಕರ್ಮವನಿವಾರ್ಯ ಜೀವಿತದ ಕೊನೆಯವರೆಗೂ 

ಕರ್ಮವನು ಬಿಟ್ಟೊಡನೆ ಬದುಕೆಂಬುದಿಲ್ಲ

ಕರ್ಮಮಾಡುವಗೆ ಫಲಭೀತಿ ತಪ್ಪಿದ್ದಲ್ಲ 

ಧರ್ಮಪಥದಲಿ ಸಾಗು ನನ್ನ ಕಂದ||


ಹುಟ್ವಿದೊಡನೆಯೆ ಬಿಡದೆ ಬೆನ್ಹತ್ತುವುದು ಕರ್ಮ

ಅಟ್ಟಿಸುತ ಬರುತಿಹುದು ಹಿಂದೆ ಕರ್ಮಫಲ 

ಬಿಟ್ಟೋಡದಿರು ಕರ್ಮವನು ಫಲದಭೀತಿಯಲಿ

ಮೆಟ್ಟಿಬಿಡು ಕರ್ಮಫಲ ನನ್ನ ಕಂದ||


No comments:

Post a Comment