ಸ್ಪರ್ಶಮಾತ್ರದಿಂದಲೇ ಕ್ಷಣಾರ್ಧದಲಿ ಹರಡುತ
ಜೀವನದ ಅನಿಶ್ಚಿತತೆಯ ಎಲ್ಲೆಡೆಯೂ ಸಾರುತ
ಸುಖಲೋಲುಪ್ತಿಯ ಕ್ಷಣಿಕತೆಯ ಅರುಹುತ
'ಆರೋಗ್ಯವೇ ಭಾಗ್ಯ'ವೆಂದು ದೃಢ ಪಡಿಸುತ
ವಿಶ್ವದಾಟವನು ಬುಡಮೇಲು ಗೊಳಿಸುತ
ಎಲ್ಲೆಡೆ ಭೀತಿಯ ಹರಡಿ ತಲ್ಲಣಗೊಳಿಸುತ
ವ್ಯಾಲಂಟೈನ್ ಡೇ ಬೆನ್ನಲೇ ಕ್ವಾರಂಟೈನ್ ಮಾಡುತ
ಮಾರಣ ಹೋಮಕೆ ಬಂದಿದೆ ಮಹಾಮಾರಿ ಕರೋನ
ಕರೋನಳ ಒದ್ದೋಡಿಸಲೆಲ್ಲರ ಅಣಿಗೊಳಿಸುತ
ಮಾಂಸಾಹಾರಕೆ ಕಡಿವಾಣವ ಹಾಕುತ
ಸ್ವಚ್ಛತೆಯ ಮಹತ್ವವ ಎಲ್ಲರಿಗೂ ತಿಳಿಸುತ
ಕೈಮುಗಿವಾ ಸಂಸ್ಕೃತಿಯ ಎತ್ತಿಹಿಡಿಯುತ
ಅಜ್ಜಿಯ ಆಚರಣೆಯ ಔಚಿತ್ಯವ ಅರುಹುತ
ಲಾಕ್‌ಡೌನ್ ಮಾಡಿ ಗೃಹ ಬಂಧನದಲಿರಿಸುತ
''ಜನತಾ ಕಫ್ರ್ಯೂ'ನ ಯಶಸ್ವಿಗೊಳಿಸುತ
'ಶರೀರ ಮಾಧ್ಯಂ ಖಲುಧರ್ಮ ಸಾಧನಂ' ಎನ್ನುತ
'ಆರೋಗ್ಯವೇ ಭಾಗ್ಯ' ಎಂದು ನುಡಿಯುತ
ಜಾತಿಮತ ಧರ್ಮಮರೆತು ಎಲ್ಲರನು ಒಂದಾಗಿಸುತ
'ವಸುಧೈವ ಕುಟುಂಬ'ವೆಂಬ ಐಕ್ಯಮಂತ್ರವ ಸಾರುತ
ಶಾಂತಿ ಮಂತ್ರವ ಪಠಿಸಿ ಮನುಕುಲವ ಉಳಿಸಿ ಬೆಳೆಸುತ
ಬನ್ನಿ ಬಾಂಧವರೆ ಎಲ್ಲರೊಂದಾಗಿ ವಿಶ್ವವ ಉಳಿಸೋಣ ಮಹಾಮಾರಿ ಕರೋನಳ ಹೆಸರಿಲ್ಲದಂತೆ ಒದ್ದೋಡಿಸೋಣ.
ಜೀವನದ ಅನಿಶ್ಚಿತತೆಯ ಎಲ್ಲೆಡೆಯೂ ಸಾರುತ
ಸುಖಲೋಲುಪ್ತಿಯ ಕ್ಷಣಿಕತೆಯ ಅರುಹುತ
'ಆರೋಗ್ಯವೇ ಭಾಗ್ಯ'ವೆಂದು ದೃಢ ಪಡಿಸುತ
ವಿಶ್ವದಾಟವನು ಬುಡಮೇಲು ಗೊಳಿಸುತ
ಎಲ್ಲೆಡೆ ಭೀತಿಯ ಹರಡಿ ತಲ್ಲಣಗೊಳಿಸುತ
ವ್ಯಾಲಂಟೈನ್ ಡೇ ಬೆನ್ನಲೇ ಕ್ವಾರಂಟೈನ್ ಮಾಡುತ
ಮಾರಣ ಹೋಮಕೆ ಬಂದಿದೆ ಮಹಾಮಾರಿ ಕರೋನ
ಕರೋನಳ ಒದ್ದೋಡಿಸಲೆಲ್ಲರ ಅಣಿಗೊಳಿಸುತ
ಮಾಂಸಾಹಾರಕೆ ಕಡಿವಾಣವ ಹಾಕುತ
ಸ್ವಚ್ಛತೆಯ ಮಹತ್ವವ ಎಲ್ಲರಿಗೂ ತಿಳಿಸುತ
ಕೈಮುಗಿವಾ ಸಂಸ್ಕೃತಿಯ ಎತ್ತಿಹಿಡಿಯುತ
ಅಜ್ಜಿಯ ಆಚರಣೆಯ ಔಚಿತ್ಯವ ಅರುಹುತ
ಲಾಕ್‌ಡೌನ್ ಮಾಡಿ ಗೃಹ ಬಂಧನದಲಿರಿಸುತ
''ಜನತಾ ಕಫ್ರ್ಯೂ'ನ ಯಶಸ್ವಿಗೊಳಿಸುತ
'ಶರೀರ ಮಾಧ್ಯಂ ಖಲುಧರ್ಮ ಸಾಧನಂ' ಎನ್ನುತ
'ಆರೋಗ್ಯವೇ ಭಾಗ್ಯ' ಎಂದು ನುಡಿಯುತ
ಜಾತಿಮತ ಧರ್ಮಮರೆತು ಎಲ್ಲರನು ಒಂದಾಗಿಸುತ
'ವಸುಧೈವ ಕುಟುಂಬ'ವೆಂಬ ಐಕ್ಯಮಂತ್ರವ ಸಾರುತ
ಶಾಂತಿ ಮಂತ್ರವ ಪಠಿಸಿ ಮನುಕುಲವ ಉಳಿಸಿ ಬೆಳೆಸುತ
ಬನ್ನಿ ಬಾಂಧವರೆ ಎಲ್ಲರೊಂದಾಗಿ ವಿಶ್ವವ ಉಳಿಸೋಣ ಮಹಾಮಾರಿ ಕರೋನಳ ಹೆಸರಿಲ್ಲದಂತೆ ಒದ್ದೋಡಿಸೋಣ.
No comments:
Post a Comment