ಮಂಗಳಾಂಬ ಸದಾ ಮಂಗಳೇ
ರಾಮಚಂದ್ರ ಪ್ರಿಯ
ವಲ್ಲಭೇ
ಉದಯಭರತಾರವಿಂದ ಜನನಿ
ಸೋಸಲೆವಂಶಾಭಿವರ್ಧಿನಿ||
ನಿತ್ಯಾನಂದ ಸ್ಮಿತ ವದನೆ
ನಿತ್ಯಪೀತಾಂಬರ ಧಾರಿಣಿ
ತ್ರಿಪುರ ಸುಂದರ ಮಾನಿನಿ
ನವನವೋನ್ಮೇಷ ಶಾಲಿನಿ||
ಗುಣವತಿ
ಗುಣಗ್ರಾಹಿಣಿ
ಗುಣಾತೀತೆ
ಗುಣವರ್ಧಿನಿ
ಸಕಲ ವಿದ್ಯಾ
ಪ್ರದಾಯಿನಿ
ಹಿಂದೂ ಸಂಸ್ಕೃತಿ ಪೋಷಿಣಿ||
ವಿದ್ಯಾಶಾರದೆ ವಿದ್ಯಾದಾಯಿನಿ
ಆಧುನಿಕ ವಿದ್ಯಾಭಿಲಾಷಿಣಿ
ಸರಸ್ವತಿ ಕೃಪಾವಲಂಬಿನಿ
ಸುಜ್ಞಾನ, ವೈರಾಗ್ಯ ಧಾರಿಣಿ||
ದೀನ ದಲಿತೋದ್ಧಾರಿಣಿ
ಅಶನ ವಸನ ವಸ್ತ್ರ
ದಾಯಿನಿ
ಸಮಸ್ತ ಜನಾನುರಾಗಿಣಿ
ಬಹುಜನ ಸಂಕಷ್ಟ
ಹಾರಿಣಿ||
ಸ್ವಾದಿಷ್ಟ ಭೋಜನದಾಯಿನಿ
ಮಾತಾನ್ನಪೂರ್ಣೆ ಅನ್ನದಾಯಿನಿ
ಬಿಸಿಯೂಟ ಕೃಪಾಕಾರಿಣಿ
ಅನ್ನಬ್ರಹ್ಮ ಅನ್ನಪೂರ್ಣೇಶ್ವರಿ||
ನಿರಹಂಕಾರಿ ನಿರೋಗಿ
ಪರಿಸರಾರೋಗ್ಯ
ರಕ್ಷಕಿ
ಸಮಾಜಾರೋಗ್ಯ ಪಾಲಕಿ
ಆರೋಗ್ಯ
ಭಾಗ್ಯವರ್ಧಕಿ||
ಸಕಲಕಾರ್ಯ ಯಶಸ್ವಿನಿ
ಸಹಸ್ರ ಚಂದ್ರ ದರ್ಶಿನಿ.
ಶಿರಡಿಬಾಬಾ ಪದಪದ್ಮವಾಸಿನಿ
ಮಂಗಳಂ ಕುರು ಮಂಗಳೇ||
*****************
No comments:
Post a Comment