![]() |
ಅನುಪಮ ಚೆಲುವಿನ ರಸದೌತಣ
ಚಿಗುರು ಚಿನ್ನದ ತಳಿರು ತೋರಣ
ಹೋಳಿಗೆಯೊಳಗೆ ಘಮಘಮ ಹೂರಣ
ಕಹಿ ಸಿಹಿಯ ಬೇವು ಬೆಲ್ಲದ ಮಿಶ್ರಣ
ಸುಖ ದುಃಖಗಳ ಸಂಗಮ ಬಾಳಿನಂಕಣ
ಸವಿ ನೆನಪುಗಳ ಚಿಗುರಿಸುತ
ಕಂಡ ಕನಸ ನನಸ ಮಾಡುತ
ಕಹಿನೆನಪುಗಳನೆಲ್ಲ ಮರೆಸುತ
ಹೊಸ ಹರುಷವ ಮನಕೆ ತರುತ
ಸವಿಚೈತ್ರದೊಡನೆ ಮತ್ತೆ ಬಂತು ಯುಗಾದಿ
ನವ ವರುಷದ ಹೊಸ ಹರುಷಕೆ ಹಾದಿ
“ಬೇವು ಬೆಲ್ಲದ” ಸವಿ ಸಮನ್ವಯ ಸಾಧಿಸಲಿ
ಎಲ್ಲರ ಒಳಗೆ ಹೊರಗೆ ಹರುಷವಿರಲಿ
ಎಲ್ಲರಿಗೂ ಎಣೆಯಿಲ್ಲದ ಜಯವು ಸಿಗಲಿ
ಏಳು ಬೀಳು, ನೋವು ನಲಿವು, ಸೋಲು ಗೆಲುವು
ಸಿಹಿಕಹಿಯ ಸಮಚಿತ್ತದಿಂದ ಸಹಿಪ ಮನವು ಇರಲಿ
ನವ ಸಂವತ್ಸರದಿ ಬಾಳಪಥವು ಸುಗಮವಿರಲಿ
ಶ್ರೀವಿಳಂಬಿನಾಮ ಸಂವತ್ಸರದಲಿ
ಎಲ್ಲರಿಗೂ ಸಂತೃಪ್ತಿ ಸಿಗಲಿ ಎಂಬ ಸದಾಶಯದೊಂದಿಗೆ
ಯುಗಾದಿ ಶುಭಾಶಯಗಳನ್ನು ಕೋರುವ
ಪದ್ಮಶ್ರೀಧರ
No comments:
Post a Comment