ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 1X4=4
ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದ ‘ಶಬ್ದಗಾರುಡಿಗ’, ‘ವರಕವಿ’, ‘ಸಾಧನಕೇರಿಯ ಅನರ್ಘ್ಯರತ್ನ’, ‘ಕನ್ನಡದ ಠಾಗೋರ್’, ‘ಸಹಜ ಕವಿ’, ‘ರಸ ಋಷಿ’ಎಂದೆಲ್ಲಾ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ ‘ದ. ರಾ. ಬೇಂದ್ರೆ’. ಜಾನಪದ ಧಾಟಿಯಿಂದ ಪ್ರೇರೇಪಿತರಾಗಿಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ದೇಸೀಯ ಕವಿ.ಸುಶ್ರಾವ್ಯವಾಗಿ ಹಾಡಲು ಪೂರಕವಾಗುವಂತಹ ನಾದಮಾಧುರ್ಯವನ್ನು ತಮ್ಮ ರಚನೆಗಳಲ್ಲಿ ತುಂಬಿದರಸಕವಿ. ‘ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ’ ಎಂದು ಜೀವನವನ್ನು ಸರಳವಾಗಿ ವ್ಯಾಖ್ಯಾನಿಸಿದ ಧೀಮಂತ ಕವಿ.
ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಕಾವ್ಯನಾಮ ಅಂಬಿಕಾತನಯದತ್ತ.ಜನಿಸಿದ್ದು ಮಾಘಶುದ್ಧ 'ಗುರುಪ್ರತಿಪದಾ' ಮನ್ಮಥನಾಮ ಸಂವತ್ಸರ 1896 ಜನವರಿ 31 ಧಾರವಾಡದಮಂಗಳವಾರಪೇಟೆಯ ಪೋತನೀಸ್ ಗಲ್ಲಿಯಲ್ಲಿದ್ದ ಗುಣಾರಿಯವರ ಮನೆಯಲ್ಲಿ. ಅರ್ಥಾತ್ ಅಜ್ಜಿಗಂಗೂಬಾಯಿ ಮನೆಯಲ್ಲಿ. ತಂದೆ ರಾಮಚಂದ್ರ ಪಂತರು, ತಾಯಿ ಅಂಬೂತಾಯಿ ಅಂಬಿಕೆ(ಅಂಬವ್ವ).
ಪ್ರಶ್ನೆಗಳು:
41 ಬೇಂದ್ರೆಯವರು ಯಾವ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ?
42. ಬೇಂದ್ರೆಯವರನ್ನು ದೇಸೀಯ ಕವಿ ಎಂದು ಏಕೆ ಕರೆಯುತ್ತಾರೆ?
43. ಬೇಂದ್ರೆಯವರು ಹುಟ್ಟಿದ್ದು ಎಂದು?
44. ಬೇಂದ್ರೆಯವರು ಜೀವನವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ?
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆಉತ್ತರ ಬರೆಯಿರಿ. 1X4=4
ಪಂಡಿತಾ ರಮಾಬಾಯಿ ಸರಸ್ವತಿಯವರು ಮಹಿಳೆಯರ ಸಾಮಾಜಿಕ,ಆರ್ಥಿಕ ಉನ್ನತಿಗಾಗಿ ದುಡಿದವರು. ಇವರ ತಂದೆ ಅನಂತಶಾಸ್ತ್ರಿಡೋಂಗ್ರೆ ಮತ್ತು ತಾಯಿ ಲಕ್ಷಿ ್ಮಬಾಯಿ ದೇಶ ಪ್ರವಾಸಮಾಡುತ್ತಿದ್ದಾಗ ತಲೆದೋರಿದ ಭೀಕರ ಬರಗಾಲದಿಂದನಿಧನರಾದರು. ಗಂಡ ಬಿಪಿನ್ ಬಿಹಾರಿ ದಾಸ್ ಕಾಲರಕ್ಕೆ ತುತ್ತಾಗಿಮರಣ ಹೊಂದಿದರು. ನಂತರ ರಮಾಬಾಯಿ ಅವರು ವಿದ್ಯಾಭ್ಯಾಸಮುಂದುವರಿಸಿ ಸಮಾಜ ಸೇವೆಗೆ ತನ್ನನ್ನು ಅಣಿಗೊಳಿಸಬೇಕೆಂದುನಿರ್ಧರಿಸಿ ಪುಣೆಗೆ ಬಂದರು. ಪುಣೆಯಲ್ಲಿ ‘ಆರ್ಯ ಮಹಿಳಾ ಸಮಾಜ’ಸ್ಥಾಪಿಸಿದರು. ಶಿಕ್ಷಣ ಪಡೆದು ಜ್ಞಾನವನ್ನು ಮತ್ತುಆತ್ಮಸ್ಥೈರ್ಯವನ್ನು ಗಳಿಸಿ ಸ್ವಾವಲಂಬಿಗಳಾಗಿ ಬದುಕುವಂತೆಹೆಣ್ಣು ಮಕ್ಕಳನ್ನು, ಬಾಲವಿಧವೆಯರನ್ನು ರಮಾಬಾಯಿಪೆÇ್ರೀತ್ಸಾಹಿಸಿದರು. ಇದಕ್ಕೆ ಪೂರಕವಾಗುವಂತೆ ‘ಸ್ತ್ರೀ ಧರ್ಮ ನೀತಿ’ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಹಂಟರ್ ಆಯೋಗದ ಎದುರುಹಾಜರಾದ ರಮಾಬಾಯಿ ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣದಆವಶ್ಯಕತೆಯ ಕುರಿತು ಸಮರ್ಥವಾದ ರೀತಿಯಲ್ಲಿ ವಾದಮಂಡಿಸಿದರು. ಇದು ಇಂಗ್ಲೆಂಡಿನ ರಾಣಿಯ ಗಮನಕ್ಕೆ ಬರುವಮೂಲಕ ಭಾರತದಲ್ಲಿ ಮಹಿಳೆಯರ ಪಾಲಿಗೆ ಶಿಕ್ಷಣ, ವೈದ್ಯಕೀಯಸೇವೆ ಮುಂತಾದ ಸವಲತ್ತುಗಳು ದೊರೆಯುವಂತಾಯಿತು.
ಪ್ರಶ್ನೆಗಳು :
40. ರಮಾಬಾಯಿ ಸರಸ್ವತಿಯವರು ಪುಣೆಗೆ ಏಕೆ ಬಂದರು?
41. ರಮಾಬಾಯಿ ಸರಸ್ವತಿಯವರ ತಂದೆ ತಾಯಿ ಮತ್ತು ಪತಿಯಸಾವಿಗೆ ಕಾರಣವೇನು?
42. ರಮಾಬಾಯಿ ಸರಸ್ವತಿಯವರು ‘ಸ್ತ್ರೀ ಧರ್ಮ ನೀತಿ’ ಎನ್ನುವಪುಸ್ತಕವನ್ನು ಏಕೆ ಪ್ರಕಟಿಸಿದರು.?
43. ಭಾರತದ ಮಹಿಳೆಯರಿಗೆ ಶಿಕ್ಷಣ, ವೈದ್ಯಕೀಯ ಸೇವೆ ಮುಂತಾದಸವಲತ್ತುಗಳು ದೊರೆಯುವಂತಾದುದು ಹೇಗೆ?
No comments:
Post a Comment