ಘಟಕ- 3 ಅಮೇರಿಕಾದಲ್ಲಿ ಗೊರೂರು
-ರಾಮಸ್ವಾಮಿ ಅಯ್ಯಂಗಾರ್
1. ಯಾವ ವಿಚಾರಗಳನ್ನು ಸಂಪೂರ್ಣವಾಗಿ ತಿಳಿದು ಸ್ವಾಧೀನ ಪಡಿಸಿಕೊಳ್ಳ ಬೇಕೆಂದು ಗೊರೂರರು ಹೇಳಿದ್ದಾರೆ? ಏಕೆ?
2. ಪಾಶ್ಚಾತ್ಯರಲ್ಲಿ ಮಕ್ಕಳಾದಿಯಾಗಿ ಎಲ್ಲರಿಗೂ ತಕ್ಕಮಟ್ಟಿಗೆ ತಿಳಿದಿರುವ ವಿಚಾರ ಯಾವುವು? ಅವುಗಳ ಉಪಯೋಗವನ್ನು ನಾವು ತಿಳಿದುಕೊಳ್ಳ ಬೇಕು ಏಕೆ?
3. ಗೊರೂರರ ಮಗಳು ಅಳಿಯ ಇಬ್ಬರೂ ಮನೆಯಲ್ಲಿ ಇಲ್ಲವಾದಾಗ ಸಂಭವಿಸಿದ ಘಟನೆಯನ್ನು ಕುರಿತು ಬರೆಯಿರಿ.
4. ಗೊರೂರರು ಗಾಬರಿಯಾಗಲು ಕಾರಣವೇನು?
5. ದುರ್ಯೋಧನ ಕಟ್ಟಿಸಿದ ಮನೆ ಗೊರೂರರಿಗೆ ನೆನಪಿಗೆ ಬರಲು ಕಾರಣವೇನು?
6. ಅಮೇರಿಕ ಮತ್ತು ಕೆನಡಯ ಮನೆಗಳಿಗೆ ಬೆಂಕಿಯಿಂದ ಅಪಾಯ ಹೆಚ್ಚು ಏಕೆ?
7. ದೊಡ್ಡ ಧ್ವನಿಯಲ್ಲಿ ಕೂಗುತ್ತಿದ್ದುದ ಯಾವುದು? ಏಕೆ?
8. ರಾಮಸ್ವಾಮಿ ಅಯ್ಯಂಗಾರ್ ದಂಪತಿಗಳನ್ನು ಹೆದರಿಸಿದ ಧ್ವನಿಯಾವುದು?
9. ಗೊರೂರರು ಮನೆಯ ಸಮೀಪವಿದ್ದ ಶಾಲೆಗೆ ಹೋಗಲು ಕಾರಣವೇನು?
10. ನಮ್ಮಲ್ಲಿ ವಿದ್ಯುತ್ ಒಲೆಗೂ ಅಮೇರಿಕಾದಲ್ಲಿನ ವಿದ್ಯುತ್ ಒಲೆಗೂ ಇರುವ ವ್ಯತ್ಯಾಸವೇನು?
11. ಮಗ್ಗಲು ಮನೆಯಿಂದ ಯಾರನ್ನಾದರೂ ಕರೆದುಕೊಂಡು ಬರುವಂತೆ ಗೊರೂರರ ಹೆಂಡತಿ ಹೇಳಲು ಕಾರಣವೇನು?
12. ಶಾಲೆಯಿಂದ ಯಾರಾದರೂ ಹುಡುಗರನ್ನೋ ಮೇಷ್ಷ್ರನ್ನೋ ಕರೆದುಕೊಂಡು ಬರುವಂತೆ ಲೇಖಕರ ಹೆಂಡತಿ ತಿಳಿಸಲು ಕಾರಣವೇನು?
13. ಮನೆಯಲ್ಲಿ ಸಂಭವಿಸಿದ ಅಪಾಯದಿಂದ ಪಾರಾಗಲು ಮಾಡಿದ ಪ್ರಯತ್ನಗಳಾವುವು?
14. ಮನೆಯಲ್ಲಿ ಸಂಭವಿಸಿದ ಅಪಾಯದಿಂದ ಪಾರಾದುದು ಹೇಗೆ?
15. ಗೊರೂರು ದಂಪತಿಗಳಿಗೆ ಮನೆಸುಟ್ಟು ಹೋದೀತೆಂಬ ಭಯವುಂಟಾಗಲು ಕಾರಣವೇನು?
16. ಗೊರೂರರ ಹೆಂಡತಿ ಗೊರೂರರನ್ನು ಕುರಿತು ಏನು ಹೇಳಿದರು? ಏಕೆ?
17. ಗೊರೂರರನ್ನು ತಮ್ಮೆಡೆಗೇ ಬರುತ್ತಿರುವುದನ್ನು ನೋಡಿದ ಹುಢುಗರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು?ಏಕೆ?
18. ಲೇಖಕರ ದೃಷ್ಟಿ ಯಾರ ಕಡೆಗೆ ಇತ್ತು ? ಏಕೆ?
19. ಗೊರೂರರನ್ನು ಕಂಡು ಹುಡುಗರು ಯಾವರೀತಿ ನಡೆದುಕೊಂಡರು.
20. ವಿದ್ಯಾರ್ಥಿಗಳು ಟೆನ್ನಿಸ್ ಕೋರ್ಟ್ಕಡೆಗೆ ನುಗ್ಗಿದ್ದೇಕೆ?
21. ಲೇಖಕರು ಟೆನ್ನಿಸ್ ಕೋರ್ಟ್ ಹಾಲನ್ನು ಪ್ರವೇಶಿಸಿದಾಗ ತಿಳಿದು ಬಂದ ವಿಚಾರವೇನು?
22. ಗೊರೂರರು ಉಪಾಧ್ಯಾಯರ ಬಳಿಗೆ ಹೊರಟ ವಿದ್ಯಾರ್ಥಿಗಳು ಯಾವ ರೀತಿ ದಾರಿಯನ್ನು ಬಿಟ್ಟರು?
23. ಎಲ್ಲಾರ ಕಣ್ಣುಗಳೂ ತಮ್ಮ ಮೇಲೆ ನೆಟ್ಟಿದ್ದರಿಂದ ಗೊರೂರರಿಗೆ ಏನೆನಿಸಿತು?
24. ಇದ್ದಕ್ಕಿದ್ದಂತೆ ಗೊರೂರರಿಗೆ ಹೊಳೆದ ಅಂಶ ಯಾವುದು?
25. ಶಾಲೆಗೆ ಹೋದ ದಿನ ಗೊರೂರ ವೇಷ ಭೂಷಣಗಳು ಹೇಗಿದ್ದವು?
26. ಗೊರೂರರನ್ನು ಕಂಡು ಉಪಾಧ್ಯಾಯರು ನಕ್ಕಿದ್ದೇಕೆ?
27. ಗೊರೂರರನ್ನು ಕಂಡು ನಕ್ಕ ಹುಡುಗರು ಏನೆಂದು ಕೂಗಿದರು?ಏಕೆ?
28. ಗೊರೂರರ ವೇಷ ಭೂಷಣಗಳನ್ನು ಕಂಡ ವಿದ್ಯಾರ್ಥಿಗಳು ಗೊರೂರರನ್ನು ಯಾರಿಗೆ ಹೋಲಿಸಿದರು?
29. ಗೊರೂರರು ಯಾವ ಪಂಚೆಯನ್ನು ಹೆಚ್ಚಾಗಿ ಭಾರತದಲ್ಲಿ ಉಡುತ್ತಿರಲಿಲ್ಲ? ಏಕೆ?
30. ಗೊರೂರರ ಉಡುಪನ್ನು ಕುರಿತು ಉಪಾಧ್ಯಾಯರು ಏನೆಂದು ಹೇಳಿರು?
31. ಸ್ಕೂಲಿಗೆ ಬಂದ ಉದ್ದೇಶವನ್ನೇ ರಾಮಸ್ವಾಮಿ ಅಯ್ಯಂಗಾರರು ಮರೆಯಲು ಕಾರಣವೇನು?
32. ರಾಮಸ್ವಾಮಿ ಅಯ್ಯಂಗಾರರು ತಮ್ಮನ್ನು ಹೇಗೆ ಪರಿಚಯಿಸಿಕೊಂಡರು?
33. ರಾಮಸ್ವಾಮಿ ಅಯ್ಯಂಗಾರರು ಖಾದಿಯ ಪ್ರಚಾರವನ್ನು ಹೇಗೆ ಮಾಡಿದರು?
34. ರಾಮಸ್ವಾಮಿ ಅಯ್ಯಂಗಾರರು ನೂಲುವುದು ಮತ್ತು ನೇಯುವುದನ್ನು ವಿವರಿಸಲು ಕಾರಣವೇನು?
35. ಭಾರತದಲ್ಲಿ ಅತ್ಯಂತ ಕಡಿಮೆ ಬಟ್ಟೆಯಲ್ಲೇ ಜೀವಿಸ ಬಹುದೆಂದು ಗೊರೂರು ತಿಳಿಸಲು ಕಾರಣವೇನು?
36. ರಾಮಸ್ವಾಮಿ ಅಯ್ಯಂಗಾರರ ಬಟ್ಟೆಗಳನ್ನು ಉಪಾಧ್ಯಾಯರೂ, ಹುಡುಗರೂ ಮುಟ್ಟಿ ನೋಡಿದ್ದೇಕೆ?
37. ಬಂದಿದ್ದ ಕಾರ್ಯದ ಬಗೆಗೆ ರಾಮಸ್ವಾಮಿ ಅಯ್ಯಂಗಾರರಿಗೆ ಜ್ಞಾನೋದಯವಾದುದು ಯಾವಾಗ?
38. ರಾಮಸ್ವಾಮಿ ಅಯ್ಯಂಗಾರರ ಹೆಂಡತಿ ಶಾಲೆಗೆ ಬರಲು ಕಾರಣವೇನು?
39. ‘ಇವರಿಗೆ ಸಹಾಯ ಮಾಡಿ ಬಾ’ ಎಂದು ಉಪಾಧ್ಯಾಯರು ಹುಡುಗನಿಗೆ ಹೇಳಿದ್ದೇಕೆ?
40. ರಾಮಸ್ವಾಮಿ ಅಯ್ಯಂಗಾರರಿಗೆ, ತಾನೊಬ್ಬ ಅಪರಾಧಿಯೋ, ಪ್ರಮುಖನೋ, ವಿಚಿತ್ರಪ್ರಾಣಿಯೋ ಎಂಬಂತೆ ಭಾಸವಾದುದೇಕೆ?
41. ಗೊರೂರರ ಮಗಳ ಮನೆಯಲ್ಲಿ ಬರುತ್ತಿದ್ದ ಧ್ವನಿ ನಿಂತಿದ್ದು ಹೇಗೆ?
42. ಗೊರೂರರ ಮಗಳ ಮನೆಯಲ್ಲಿ ವಿದ್ಯುತ್ ಒಲೆಯು ಧ್ವನಿಮಾಡಲು ಕಾರಣವೇನು?
43. ರಾಮಸ್ವಾಮಿ ಅಯ್ಯಂಗಾರರು ನಾಲ್ಕೈದು ದಿನ ಶಾಲೆಗೆ ಹೋಗಲು ಕಾರಣವೇನು?
44. ರಾಮಸ್ವಾಮಿ ಅಯ್ಯಂಗಾರರು ಅಮೇರಿಕಾದ ಮಕ್ಕಳನ್ನು ಹೇಗೆ ರಂಜಿಸಿದರು?
45. ಅಮೇರಿಕಾದ ವಿದ್ಯಾರ್ಥಿಗಳನ್ನು ರಂಜಿಸಿದ ಕನ್ನಡ ಸಾಹಿತ್ಯದ ಭಾಗಗಳಾವುವು?
46. ರಾಮಸ್ವಾಮಿ ಅಯ್ಯಂಗಾರರ ವೇಷ ಭೂಷಣಗಳು ಹೇಗಿತ್ತು? ಅದನ್ನು ಓದಿದಾಗ ನಿಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ತಿಳಿಸಿರಿ.
47. ಶಾಲೆಯವರು ರಾಮಸ್ವಾಮಿ ಅಯ್ಯಂಗಾರರಿಗೆ ಅತ್ಯಂತ ಆತ್ಮೀಯವಾಗಿ ಬೀಳ್ಕೊಡಲು ಕಾರಣವೇನು?
48. ರಾಮಸ್ವಾಮಿ ಅಯ್ಯಂಗಾರರು ಉಪಾಧ್ಯಾಯರು ಮತ್ತು ಹುಡುಗರನ್ನು ಹೇಗೆ ರಂಜಿಸಿದರು?
49. ಗೊರೂರು ದಂಪತಿಗಳನ್ನು ಭಯಭೀತರನ್ನಾಗಿ ಮಾಡಿದ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
50. ರಾಮಸ್ವಾಮಿ ಅಯ್ಯಂಗಾರರು ಕನ್ನಡ ನಾಡಿನ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಅಮೇರಿಕಾದವರಿಗೆ ಹೇಗೆ ಪರಿಚಯಿಸಿದರು?
51. ರಾಮಸ್ವಾಮಿ ಅಯ್ಯಂಗಾರರ ಸ್ಥಳ, ಕಾಲ ಮತ್ತು ಕೃತಿಗಳನ್ನು ತಿಳಿಸಿ.
52. ರಾಮಸ್ವಾಮಿ ಅಯ್ಯಂಗಾರರ ಪ್ರಮುಖ ಕೃತಿಗಳಾವುವು?
53. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ರಾಮಸ್ವಾಮಿ ಅಯ್ಯಂಗಾರ ಕೃತಿಯಾವುದು?
54. ರಾಮಸ್ವಾಮಿ ಅಯ್ಯಂಗಾರರು ಬರೆದಿರುವ ಲಲಿತ ಪ್ರಬಂಧಗಳಾವುವು?
55. ರಾಮಸ್ವಾಮಿ ಅಯ್ಯಂಗಾರವರಿಗೆ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದ ವಿಶ್ವವಿದ್ಯಾನಿಲಯ ಯಾವುದು?
56. 1967ರಲ್ಲಿ ತರೀಕೆರೆಯಲ್ಲಿ ನಡೆದ ಸಮ್ಮೇಳನ ಯಾವುದು? ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದವರು ಯಾರು?
57. 1982ರಲ್ಲಿ ಅಖಿಲ ಭಾರತ ಸಮ್ಮೇಳನವು ಎಲ್ಲಿ ಜರುಗಿತು? ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಯಾರು?
58. ರಾಮಸ್ವಾಮಿ ಅಯ್ಯಂಗಾರರ ಪ್ರವಾಸ ಕಥನ ಯಾವುದು? ಆ ಕೃತಿಗೆ ಸಂದ ಪ್ರಶಸ್ತಿಯಾವುದು?
59. ಯಾಂತ್ರೀಕರಣ ಎಂದರೇನು?
60. ವಿದ್ಯುದೀಕರಣ ಎಂದರೇನು
61. ಔದ್ಯೋಗೀಕರಣ ಎಂದರೇನು?
62. ಪೈಡ್ ಪೈಪರ್ ನಾಟಕದ ಕರ್ತೃಯಾರು?
63. ಸಾಂತಕ್ಲಾಸ್ ಎಂದರೆ ಯಾರು?
64. ರಾಮಸ್ವಾಮಿ ಅಯ್ಯಂಗಾರರು ಎದುರಿಸಿದ ವಿದ್ಯುತ್ ಒಲೆಯ ಪ್ರಕರಣವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
65. ಸಂಧಿ ಬಿಡಿಸಿ ಸಂಧಿ ಹೆಸರನ್ನು ತಿಳಿಸಿರಿ.
ಪೂರ್ಣವಾಗು, ಜ್ಞಾನವನ್ನು, ಮಕ್ಕಳಾದಿ, ಒಲೆಯನ್ನು, ಎಲ್ಲಿಗಾದರೂ, ಶ್ರುತಿಯಂತೆ, ಮನೆಯಲ್ಲಿ, ಬೀದಿಯಲ್ಲಿ, ಮನೆಯೊಳಗೆ, ಲಕ್ಷ್ಯವಿಲ್ಲದೆ, ವಿದ್ಯಾರ್ಥಿ, ನಾನೊಬ್ಬ, ನಾಲ್ಕಾರು, ಅತ್ಯಂತ, ಕೈಯಿಂದ, ದಿಗ್ಭ್ರಮೆ, ಜ್ಞಾನೋದಯ, ಪ್ರಶ್ನೋತ್ತರ, ಸಂಸ್ಕøತಿಯನ್ನು. ನೀಳವಾದ,
66. ಗೊರೂರು ರಾಮಸ್ವಾಮಿ ಅಯ್ಯಂಗಾರರ ಹಾಸ್ಯ ಪ್ರವೃತ್ತಿಯನ್ನು ಕುರಿತು ಬರೆಯಿರಿ.
67. ಗೊರೂರರು ಸ್ವದೇಶಾಭಿಮಾನವನ್ನು ಅಮೇರಿಕಾದಲ್ಲಿ ಮೆರೆಸಿದರು?
68. ‘ಗೊರೂರರು ಅಪ್ಪಟ ಗಾಂಧಿವಾದಿಗಳು’-‘ಅಮೇರಿಕಾದಲ್ಲಿ ಗೊರೂರು’, ಗದ್ಯದ ಆಧಾರದಿಂದ ವಿವರಿಸಿರಿ.
69. ‘ಅಮೇರಿಕಾದಲ್ಲಿ ಗೊರೂರು’ ಪಾಠದಲ್ಲಿರುವ ಸಮಾಸ ಪದಗಳನ್ನು ಪಟ್ಟಿಮಾಡಿ, ಆ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರನ್ನು ತಿಳಿಸಿರಿ.
70. ಅಲಂಕಾರ ತಿಳಿಸಿ ಸಮನ್ವಯ ಗೊಳಿಸಿರಿ.
ಅಮೇರಿಕಾ ಹಾಗೂ ಕೆನಡಾದ ಮನೆಗಳು ದುರ್ಯೋಧನನ ಅರಗಿನ ಮನೆಯಂತೆ.
71. ಅಮೇರಿಕಾದಲ್ಲಿ ಗೊರೂರು ಗದ್ಯ ಭಾಗದಲ್ಲಿರುವ ದ್ವಿರುಕ್ತಿ, ಜೋಡುನುಡಿ, ನುಡಿಗಟ್ಟು, ಅವ್ಯಯಗಳನ್ನು ಪಟ್ಟಿ ಮಾಡಿರಿ.
72. ‘ಅಮೇರಿಕಾದಲ್ಲಿ ಗೊರೂರು’ ಪಾಠದಲ್ಲಿ ಬಂದಿರುವ ಅನ್ಯದೇಶ್ಯ ಪದಗಳನ್ನು ಪಟ್ಟಿಮಾಡಿರಿ.
73. ವಿರುದ್ಧ ಪದಗಳನ್ನು ಬರೆಯಿರಿ.
ಶಕ್ತಿ, ಪೂರ್ಣ, ಜ್ಞಾನ, ಸಾಧಾರಣ, ಭಯ, ಮೇಲೆ, ವಿರಳ, ಲಕ್ಷ್ಯ, ದೊಡ್ಡ, ಒಳಗೆ, ಉಪಕಾರ, ಅಪನಂಬಿಕೆ,
74. ತತ್ಸಮ-ತದ್ಭವಗಳನ್ನು ಬರೆಯಿರಿ.
ಬಣ್ಣ, ಗರ, ದೃಷ್ಟಿ, ಪುಸ್ತಕ, ಗಾದೆ.
75. ಈ ಕೆಳಗಿನ ಪದಗಳ ಅರ್ಥವನ್ನು ತಿಳಿಸಿರಿ
ಜರ್ಬು, ಎಕ್ಕಡ,
**************
ಪಾಠದ ಪ್ರಶ್ನೆಕೋಟಿಯು ತುಂಬಾ ಚನ್ನಾಗಿದೆ ಮೇಡಂ ಧನ್ಯವಾದಗಳು ಹೀಗೇ ಮುಂದುವರೆಯಲಿ ತಮ್ಮ ಕಾಯ ವಂದನೆಗಳು
ReplyDelete