|
![]() |
ಹಣತೆ |
![](https://blogger.googleusercontent.com/img/b/R29vZ2xl/AVvXsEg34rLffbvaci2fag_yNaEd9NhNsshRWUPN2fSB2T9PgpsQPMJ-YTpLXLF_z9Qp_aHdpJfZPjPQYsZ0Q4Y3RRJ8tDN0TY4h8Z-RNKZ0u4l6hHAOQfe3gidwabRkOWdB6Fz_zpbAfGGHtSO5/s1600/%E0%B2%9C%E0%B2%BF%E0%B2%8E%E0%B2%B8%E0%B3%8D+%E0%B2%8E%E0%B2%B8%E0%B3%8D.jpg)
ಕುವೆಂಪು ಅವರ ಮೆಚ್ಚಿನ ಶಿಷ್ಯರೂ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತರರೂ ಆಗಿದ್ದಾರೆ.
ನವೆಂಬರ್ 1, 2006ರ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಗೋವಿಂದ ಪೈ ಮತ್ತು ಕುವೆಂಪು ನಂತರ ಕನ್ನಡ ನಾಡಿನ ಮೂರನೆಯ ರಾಷ್ಟ್ರಕವಿ ಎಂಬ ಕೀರ್ತಿಗೆ ಭಾಜನರಾದರು.
•
ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. 1949ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿ ಪಡೆದರು.
•
ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕೆಲಕಾಲ ಕನ್ನಡ ಉಪನ್ಯಾಸಕರಾಗಿದರು. 1953 ರಲ್ಲಿ ಎಂ.ಎ.
ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ![](https://blogger.googleusercontent.com/img/b/R29vZ2xl/AVvXsEibOEsOEDJFjxfI_MTo9Yg6hkmBMyynjOcWNuBYyhFAp8O6l2fXDIKpdWUeOyGrKKXgbH_8m610SGoRHipnNMyUVdJ-Torc8pwvRsgjjLLGGAyzt0Rv0UqZHLm5UPpcPT-Bp7v0MdFU6oU_/s1600/1855.jpg)
•
ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ – ‘ಸೌಂದರ್ಯ ಸಮೀಕ್ಷೆ
•
ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರುವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
•
1963ರ ನವೆಂಬರ್ನಿಂದ 2 ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
•
1971ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು
"ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.
•
ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು 1971ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ'ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ 3000ಕ್ಕೂ ಹೆಚ್ಚು ಓಲೆಗರಿಯ ಹಾಗೂ 1000ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು.
•
ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ 1949ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.
ನಿವೃತ್ತಿಯ ನಂತರದ ಸೇವೆಗಳು
![](https://blogger.googleusercontent.com/img/b/R29vZ2xl/AVvXsEggfFUWa87jlEyKWLlsSUB-EB-neVBazNPXOfKoHQznszTSMENlLlb51pCM5X8mc4QwsS0gmPNK24nbFbUAGqB52wk1IhbmalrJ3Ma8-tFIlb-O7GJ2DWaLKNErAkPtDKRigmcAKvwVtwHy/s1600/1+%E0%B2%9C%E0%B2%BF%E0%B2%8E%E0%B2%B8%E0%B3%8D+%E0%B2%8E%E0%B2%B8%E0%B3%8D.jpg)
•
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ 1966 ರಿಂದ 1987 ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
ವಿವಿ ಅಧ್ಯಕ್ಷರು ಸೇವೆ
ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳು
ಕವನ ಸಂಕಲನಗಳು
• ಅನಾವರಣ
• ಎದೆ ತು೦ಬಿ ಹಾಡುವೆನು
• ಕಾಡಿನ ಕತ್ತಲಲ್ಲಿ
• ಕಾರ್ತಿಕ
• ಗೋಡೆ
• ಚಕ್ರಗತಿ
• ಚೆಲುವು-ಒಲವು
• ತೀರ್ಥವಾಣಿ
• ತೆರೆದ ಬಾಗಿಲು/ತೆರೆದ ದಾರಿ
• ದೀಪದ ಹೆಜ್ಜೆ
• ದೇವಶಿಲ್ಪಿ/ಶಿಲ್ಪ
• ವ್ಯಕ್ತಮಧ್ಯ ಓರೆ ಅಕ್ಷರಗಳು
ವಿಮರ್ಶೆ/ಗದ್ಯ
• ಅನುರಣನ
• ಕನ್ನಡ ಕವಿಗಳ ಕಾವ್ಯ ಕಲ್ಪನೆ
• ಕನ್ನಡ ಸಾಹಿತ್ಯ ಸಮೀಕ್ಷೆ
• ಕಾವ್ಯಾರ್ಥ ಚಿಂತನ
• ಕುವೆಂಪು : ಪುನರವಲೋಕನ
• ಗತಿಬಿಂಬ
• ನವೋದಯ
• ಪರಿಶೀಲನ
• ಪ್ರತಿಕ್ರಿಯೆ
• ಬೆಡಗು
• ಮಹಾಕಾವ್ಯ ಸ್ವರೂಪ
• ವಿಮರ್ಶೆಯ ಪೂರ್ವ ಪಶ್ಚಿಮ
• ಸಮಗ್ರ ಗದ್ಯ ಭಾಗ 1,2
ಮತ್ತು 3
• ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್ಡಿ ಮಹಾ ಪ್ರಬಂಧ)
• ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
• "Kuvempu-a Reappraisal" (ಸರ್ಕಾರಕ್ಕಾಗಿ ಬರೆದ ಗ್ರಂಥ)
ಪ್ರವಾಸ ಕಥನ
• ಅಮೆರಿಕದಲ್ಲಿ ಕನ್ನಡಿಗ
• ಇಂಗ್ಲೆಂಡಿನಲ್ಲಿ ಚತುರ್ಮಾಸ
• ಗಂಗೆಯ ಶಿಖರಗಳಲ್ಲಿ
ಜೀವನ ಚರಿತ್ರೆ
ಪ್ರಶಸ್ತಿ/ಪುರಸ್ಕಾರಗಳು
ಕ್ರಮ ಸಂಖ್ಯೆ
|
ಪ್ರಶಸ್ತಿ/ಪುರಸ್ಕಾರ
|
ರ್ಷ
|
1
|
ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ 22 ದಿನ" ಪ್ರವಾಸ ಕಥನಕ್ಕೆ)
|
1974
|
2
|
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ
|
1982
|
3
|
ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
|
1984
|
4
|
ದಾವಣಗೆರೆಯಲ್ಲಿ ನಡೆದ 61 ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
|
1992
|
5
|
.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ
|
1997
|
6
|
ಪಂಪ ಪ್ರಶಸ್ತಿ
|
1998
|
7
|
ಮಾಸ್ತಿ ಪ್ರಶಸ್ತಿ
|
2000
|
8
|
ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್
|
2001
|
9
|
ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್
|
2004
|
10
|
ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ
|
2006
|
11
|
ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್
|
2006
|
`12
|
ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
|
2006
|
13
|
ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್
|
2007
|
14
|
ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
|
2007
|
15
|
ನೃಪತುಂಗ ಪ್ರಶಸ್ತಿ
|
2010
|
ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್. ಶಿವರುದ್ರಪ್ಪನವರು ಬನಶಂಕರಿಯ ಸ್ವಗೃಹದಲ್ಲಿ 23, ಡಿಸೆಂಬರ್ 2013ರಂದು ಸ್ವರ್ಗಸ್ಥರಾದರು. ಎಸ್.ಶಿವರುದ್ರಪ್ಪನವರ ಆಣತಿಯಂತೆಯೆ ಅವರ ದೇಹವನ್ನು ಮರಣಾನಂತರ ಮಣ್ಣು ಮಾಡದೆ ಅಗ್ನಿಸ್ಪರ್ಷಮಾಡಲಾಯಿತು. 24 ಡಿಸೆಂಬರ್ 2013ರಂದು ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ನೇರವೇರಿಸಲಾಯಿತು.
ಹೂವಿನಿಂದ ನಾರೂ ಸ್ವರ್ಗಸೇರಿತು ಎಂಬ ನುಡಿಯಂತೆ ನನ್ನ ನೆಚ್ಚಿನ ಸೋದರಿ, ಒಲವಿನ ಗೆಳತಿ ಶಾಂತಾಮಣಿಯವರ ದೆಸೆಯಿಂದ ಗುರುಪೂರ್ಣಿಮೆಯಂದು ಗುರುಗಳ ನಿವಾಸದಲ್ಲೇ ಗುರುವಿನ ದರ್ಶನಮಾಡಿ, ಆಶೀರ್ವಾದಪಡೆಯುವ ಭಾಗ್ಯ ನನ್ನದಾಯಿತು. ಅನಾರೋಗ್ಯದ ನಿಮಿತ್ತ ಹೆಚ್ಚು ಮಾತನಾಡಲು ಅವರಿಂದ ಸಾಧ್ಯವಾಗಲಿಲ್ಲ. ಅವರ ಧರ್ಮ ಪತ್ನಿ ರುದ್ರಾಣಿಯವರು ನಡೆಸುತ್ತಿರುವ ವೃದ್ಧಾಶ್ರಮ ‘ಸಂಧ್ಯಾದೀಪ’ದ
ವಿಚಾರವನ್ನು ಕುರಿತು
ನಮ್ಮೊಂದಿಗೆ ಹಂಚಿಕೊಂಡ ವಿಷಯದ ಕೆಲವು ತುಣುಕನ್ನೂ ನಿಮಗೂ ಕೇಳಿಸ ಬಯಸುತ್ತೇನೆ. ಇದರೊಂದಿಗೆ ವಿಡಿಯೋ ಆಡಿಯೋ ಫೈಲನ್ನೂ ಕಳಿಸುತ್ತಿದ್ದೇನೆ. ಕವಿಯ ಅಧ್ಯಯನ ಕೊಠಡಿ ಹಾಗೂ ಮನೆಯಂಗಳದ ದೃಶ್ಯಗಳನ್ನೂ
ಕಳುಹಿಸುತ್ತಿದ್ದೇನೆ.
|
ಎ. ಪದ್ಮ
ಸಹಶಿಕ್ಷಕಿ
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ.
ಮಲ್ಲೇಶ್ವರಂ.
ಬೆಂಗಳೂರು.
No comments:
Post a Comment