ನಾನಲ್ಲದ ನನ್ನನು ನನ್ನನಾಗಿಸಿದಿರಿ
ನಾನಾ ವಿಶೇಷಣಗಳ ನನ್ನಲಿ ಕಂಡಿರಿ
ನಾನಾ ಬಗೆಬಗೆಯಲಿ ನನ್ನ ಚಿತ್ರಿಸಿರಿ
ನಾನಾ ರೀತಿನೀತಿಯಲಿ ಅರ್ಥೈಸಿದಿರಿ
ನಾನಾ ಬಗೆಯಲಿ ವ್ಯಾಖ್ಯಾನಿಸಿದಿರಿ
ನಾನಾ ರೂಪಿನಲೆನ್ನ ರೂಪಿಸಿದಿರಿ
ನಾನಾ ವರ್ಣದಲಿ ನನ್ನ ಚಿತ್ರಿಸಿದಿರಿ
ನಾನಾ ಬಗೆಯಲೆನ್ನ ತಿದ್ದಿ ತೀಡಿದಿರಿ
ನಾನಾ ಕಾರ್ಯಗಳ ಮಾಡಲನುವಾದಿರಿ
ನೀವಾಡಿಸಿದಂತೆ ನಾನಾಡಿರುವೆನು
ನೀವ್ಮಾಡಿಸಿದಂತೆ ನಾನ್ಮಾಡಿರುವೆನು
ನಾನಾ ಪರಿಯಲೆನ್ನ ವ್ಯಕ್ತಿತ್ವವ ಬೆಳೆಸಿದಿರಿ
ನಾನಾ ಜೀವನವನೆನಗೆ ಪರಿಚಯಿಸಿದಿರಿ
ನನ್ನನೀವ್ಗಳು ಸ್ಥಿತಪ್ರಜ್ಞಳನ್ನಾಗಿ ಮಾಡಿದಿರಿ
ನಾನು ನಾನಾಗಿರಲೆನಗೆ ನೀವನುವಾದಿರಿ
ನನ್ನ ಜೀವನದ ಚಿತ್ರಕಾರರೆ ಶಿಲ್ಪಿಗಳೆ ರೂವಾರಿಗಳೆ
ನಿಮ್ಮೆಲ್ಲರಿಗೂ ನನ್ನ ಮನದಾಳದ ನಮನ
ನಾನಾ ವಿಶೇಷಣಗಳ ನನ್ನಲಿ ಕಂಡಿರಿ
ನಾನಾ ಬಗೆಬಗೆಯಲಿ ನನ್ನ ಚಿತ್ರಿಸಿರಿ
ನಾನಾ ರೀತಿನೀತಿಯಲಿ ಅರ್ಥೈಸಿದಿರಿ
ನಾನಾ ಬಗೆಯಲಿ ವ್ಯಾಖ್ಯಾನಿಸಿದಿರಿ
ನಾನಾ ರೂಪಿನಲೆನ್ನ ರೂಪಿಸಿದಿರಿ
ನಾನಾ ವರ್ಣದಲಿ ನನ್ನ ಚಿತ್ರಿಸಿದಿರಿ
ನಾನಾ ಬಗೆಯಲೆನ್ನ ತಿದ್ದಿ ತೀಡಿದಿರಿ
ನಾನಾ ಕಾರ್ಯಗಳ ಮಾಡಲನುವಾದಿರಿ
ನೀವಾಡಿಸಿದಂತೆ ನಾನಾಡಿರುವೆನು
ನೀವ್ಮಾಡಿಸಿದಂತೆ ನಾನ್ಮಾಡಿರುವೆನು
ನಾನಾ ಪರಿಯಲೆನ್ನ ವ್ಯಕ್ತಿತ್ವವ ಬೆಳೆಸಿದಿರಿ
ನಾನಾ ಜೀವನವನೆನಗೆ ಪರಿಚಯಿಸಿದಿರಿ
ನನ್ನನೀವ್ಗಳು ಸ್ಥಿತಪ್ರಜ್ಞಳನ್ನಾಗಿ ಮಾಡಿದಿರಿ
ನಾನು ನಾನಾಗಿರಲೆನಗೆ ನೀವನುವಾದಿರಿ
ನನ್ನ ಜೀವನದ ಚಿತ್ರಕಾರರೆ ಶಿಲ್ಪಿಗಳೆ ರೂವಾರಿಗಳೆ
ನಿಮ್ಮೆಲ್ಲರಿಗೂ ನನ್ನ ಮನದಾಳದ ನಮನ