Sunday, 28 June 2015
Friday, 26 June 2015
ಭಾಷಾ ಚಟುವಟಿಕೆಗಳು ಗಾದೆಗಳ ಮೂಲಕ ಭಾಷಾಕೌಶಲ
ನೂರಾರು
ಮಾತುಗಳಲ್ಲಿ ಹೇಳಬಹುದಾದ ಬದುಕಿನ ಅನುಭವವು ಸಾರವತ್ತಾಗಿ, ಸಂಕ್ಷಿಪ್ತವಾಗಿ, ನೀತಿಬೋಧಕವಾಗಿರುವ
ಗಾದೆಗಳು ನಿತ್ಯದ ಬದುಕಿನಲ್ಲಿ ಬಳಕೆಯಾಗುತ್ತಿವೆ. ಪ್ರತಿನಿತ್ಯ, ಪ್ರತಿಕ್ಷಣ ವೈವಿಧ್ಯಮಯವಾದ
ಅನುಭವವನ್ನು ನೀಡುತ್ತಿರುವ ಚಲನಶೀಲ ಬದುಕಿನ ಪರಿಣಾಮವಾಗಿ ಹುಟ್ಟಿಕೊಂಡಿರುವ ಗಾದೆಗಳು
ಅನುಭವಾಧಾರಿತವಾದ ನುಡಿಗಳಾಗಿದ್ದು ಗಹನವಾದ ಅರ್ಥ ಶ್ರೀಮಂತಿಕೆಯಿಂದ ಹೊರಹೊಮ್ಮುತ್ತವೆ.
ಕೇಳುಗರ ಮನಸ್ಸಿಗೆ ಆಹ್ಲಾದಕರವನ್ನುಂಟು ಮಾಡುವುದಲ್ಲದೆ ಮನಮುಟ್ಟುವಂತೆಯೂ ಇರುತ್ತವೆ.
‘ವೇದ ಸುಳ್ಳಾದರೂ ಗಾದೆ
ಸುಳ್ಳಾಗದು,’ ಆಡುಮುಟ್ದ ಸೊಪ್ಪಲ್ಲ ಗಾದೆ ಹೇಳದ ವಿಷಯವಿಲ್ಲ,’ ‘ಹಸಿಗೋಡೆಯಲ್ಲಿ ಹರಳು
ಮೆಟ್ಟಿದಂತೆ,’ ‘ಆಕಾರದಲ್ಲಿ ಬಿಂಧು ಅರ್ಥದಲ್ಲಿ ಸಿಂಧೂ,’ ‘ರೂಪದಲ್ಲಿ ವಾಮನ ಅರ್ಥದಲ್ಲಿ
ತ್ರಿವಿಕ್ರಮ,’ ಮುಂತಾದ ಗಾದೆಯನ್ನು ಕುರಿತಾದ ಗಾದೆಗಳೇ ಗಾದೆಯ ಮಹತ್ವವನ್ನು ಎತ್ತಿ
ಹಿಡಿಯುತ್ತವೆ.
ಇಂತಹ
ಮಹತ್ವವುಳ್ಳ ಗಾದೆಗಳಾಧಾರಿತ ಭಾಷಾ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲವನ್ನು
ಹೆಚ್ಚಿಸಲು ಪ್ರಯತ್ನಿಸ ಬಹುದು. ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ಗಾದೆ ಆಧಾರಿತ
ಚಟುವಟಿಕೆಗಳನ್ನು ನೀಡಿ ಭಾಷಾ ಕೌಶಲ್ಯಗಳನ್ನು ಬೆಳಸಲು ಯೋಜಿಸಿರುವ ಕೆಲವು ಚಟುವಟಿಕೆಗಳನ್ನು
ಇಲ್ಲಿ ನೀಡಲಾಗಿದೆ.
Iಯಾವುದಾದರೂ ಒಂದು ವ್ಯಂಜನದಿಂದ ಪ್ರಾರಂಭವಾಗುವ ಗಾದೆಗಳನ್ನು ಆಯ್ಕೆ ಮಾಡಿಕೊಳ್ಳುವುದು. ಆ ಗಾದೆಗಳಲ್ಲಿ ಸಂಯುಕ್ತಾಕ್ಷರಗಳಿರದಂತೆ ಎಚ್ಚರವಹಿಸುವುದು.
ಉದಾಹರಣೆಗೆ:
1.ಕಡು, ಕೋಪ, ಕಾಯಕವೇ, ಕಾಲಿನದು, ಕಾಸಿಗೊಂದು, ಕಾಡು, ಕುಣಿಯಲಾರದವಳು,
ಕುರು, ಕೋತಿ, ಖಂಡಿತ.ಕೈಲಾಸ, ಕಾಲಿಗೆ, ಕೊಸರಿಗೊಂದು ಕಿಡಿಯಿಂದ,ಕುಡಿಸಿದಂತೆ ಇತ್ಯಾದಿ.
2.ಯಾವ ವ್ಯಂಜನವನ್ನು ಆರಿಸಿಕೊಂಡಿರುತ್ತೇವೆಯೋ ಆ ವ್ಯಂಜನದಿಂದ ಆರಂಭವಾಗುವ ಗಾದೆಗಳನ್ನು ಆರಿಸಿ
ಕೊಳ್ಳುವುದು. ಆರಿಸಿಕೊಂಡಿರುವ ಗಾದೆಗಳಲ್ಲಿ ಬರುವ ಇತರ ಪದಗಳನ್ನೂ ಕಲಿತಾರ್ಥಿಗಳಿಗೆ ಪರಿಚಯಿಸುವುದು
3. ಪರಿಚಯಿಸಿದ ಪದಗಳು ವಿದ್ಯಾರ್ಥಿಗಳಿಗೆ ತಪ್ಪಿಲ್ಲದೆ ಓದಲು ಮತ್ತು ಬರೆಯಲು ಬರುತ್ತದೆ ಎಂದು ದೃಢಪಡಿಸಿ
ಕೊಳ್ಳುವುದು.
4. ವಿದ್ಯಾರ್ಥಿಗಳು ಕಲಿತಿರುವ ಪದಗಳನ್ನು ಒಳಗೊಂಡ ಗಾದೆ ನುಡಿಗಳ ಮಿಂಚು ಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು.
ಉದಾಹರಣೆ:
ಕಡು
ಕೋಪ ಬಂದಾಗ ತಡಕೊಂಡವನೇ ಜಾಣ
ಕಾಯಕವೇ ಕೈಲಾಸ
ಕಾಲಿನದು ಕಾಲಿಗೆ; ತಲೆಯದು ತಲೆಗೆ
ಕಾಸಿಗೊಂದು,ಕೊಸರಿಗೆರಡು
ಕಿಡಿಯಿಂದ
ಕಾಡು ಸುಡ ಬಹುದು
ಕುಣಿಯಲಾರದವಳು
ನೆಲ ಡೊಂಕು ಅಂದಳಂತೆ
ಕುರು
ಮೇಲೆ ಬರೆ ಎಳೆದ ಹಾಗೆ
ಕೋತಿಗೆ
ಹೆಂಡ ಕುಡಿಸಿದಂತೆ
ಖಂಡಿತ
ವಾದಿ,ಲೋಕ ವಿರೋಧಿ
5. ಪ್ರದರ್ಶಿಸಿದ ಗಾದೆಗಳನ್ನು ಗಟ್ಟಿಯಾಗಿ ಓದಿಸುವುದು.
6. ಕಪ್ಪು ಹಲಗೆಯ ಮೇಲೆ ಅದೇ ಗಾದೆಗಳನ್ನು ಬರೆದು ಎಲ್ಲರೂ ತಪ್ಪಿಲ್ಲದೆ ಬರೆದುಕೊಳ್ಳುವಂತೆ ಸೂಚಿಸುವುದು.
7. ತಾವೇ ಬರೆದುಕೊಂಡಿರುವ ಗಾದೆಗಳನ್ನು ಮನಸ್ಸಿನಲ್ಲಿ ಓದಿ ಅರ್ಥಮಾಡಿಕೊಳ್ಳುವಂತೆ ಸೂಚಿಸುವುದು.
8. ವಿದ್ಯಾರ್ಥಿಗಳು ಬರೆದು ಕೊಂಡಿರುವ ಗಾದೆಗಳ ಅರ್ಥವನ್ನು ತರಗತಿಯಲ್ಲಿ ಚರ್ಚಿಸುವುದು.
9 ಸರಳ ಪ್ರಶ್ನೆಗಳನ್ನು ಕೊಟ್ಟು ಕಲಿಕೆಯನ್ನು ಗಟ್ಟಿಗೊಳಿಸುವುದು.
5. ಪ್ರದರ್ಶಿಸಿದ ಗಾದೆಗಳನ್ನು ಗಟ್ಟಿಯಾಗಿ ಓದಿಸುವುದು.
6. ಕಪ್ಪು ಹಲಗೆಯ ಮೇಲೆ ಅದೇ ಗಾದೆಗಳನ್ನು ಬರೆದು ಎಲ್ಲರೂ ತಪ್ಪಿಲ್ಲದೆ ಬರೆದುಕೊಳ್ಳುವಂತೆ ಸೂಚಿಸುವುದು.
7. ತಾವೇ ಬರೆದುಕೊಂಡಿರುವ ಗಾದೆಗಳನ್ನು ಮನಸ್ಸಿನಲ್ಲಿ ಓದಿ ಅರ್ಥಮಾಡಿಕೊಳ್ಳುವಂತೆ ಸೂಚಿಸುವುದು.
8. ವಿದ್ಯಾರ್ಥಿಗಳು ಬರೆದು ಕೊಂಡಿರುವ ಗಾದೆಗಳ ಅರ್ಥವನ್ನು ತರಗತಿಯಲ್ಲಿ ಚರ್ಚಿಸುವುದು.
9 ಸರಳ ಪ್ರಶ್ನೆಗಳನ್ನು ಕೊಟ್ಟು ಕಲಿಕೆಯನ್ನು ಗಟ್ಟಿಗೊಳಿಸುವುದು.
ಉದಾಹರಣೆ:
1. ಆವರಣದಲ್ಲಿ ಕೊಟ್ಟಿರುವ ಪದಗಳನ್ನು ಬಿಟ್ಟಿರುವ ಸ್ಥಳಗಳಲ್ಲಿ ತುಂಬಿ ಗಾದೆಗಳನ್ನು ಪೂರ್ಣಮಾಡಿರಿ.
1. ಕಡು--------ಬಂದಾಗ , ತಡ----------ಜಾಣ
2. ಕಾಯಕವೇ------------
3. ಕಾಲಿನದು----------ತಲೆಯದು ತಲೆಗೆ
4. --------ಒಂದು, -------ಎರಡು
5. --------ಯಿಂದ ಸುಡ-------ಬಹುದು
6. --------ಯಲಾರದವಳು ನೆಲ ಡೊಂಕು ಅಂದಳಂತೆ
7. --------ಮೇಲೆ ಬರೆ ಎಳೆದ ಹಾಗೆ
8. ---------ಗೆ ಹೆಂಡ-------ದಂತೆ
9. --------ವಾದಿ,----------ವಿರೋಧಿ.
(1 ಕೋತಿ, 2 ಖಂಡಿತ, 3 ಕುಣಿ, 4 ಕೊಂಡವನೇ, 5 ಕೊಸರಿಗೆ, 6 ಕುಡಿಸಿ, 7 ಕೋಪ,
8 ಕಾಡು, 9 ಕೈಲಾಸ, 10 ಕುರು, 12 ಕಿಡಿ, 13 ಕಾಸಿಗೆ, 14 ಕಾಲಿಗೆ, 15 ಲೋಕ)
2. ಈ ಕೆಳಗಿನ ಪದಗಳಿಂದ ಪ್ರಾರಂಭವಾಗುವ ಗಾದೆಗಳನ್ನು ಬರೆಯಿರಿ.
1 ಕಡುಕೋಪ, 2 ಕಾಯಕವೇ, 3 ಕಾಲಿನದು, 4 ಕಾಸಿಗೆ, 5 ಕಿಡಿ, 6 ಕುಣಿ, 7 ಕುರು, 8 ಕೋತಿ, 9 ಖಂಡಿತ. ಇದೇ ರೀತಿಯಲ್ಲಿ ಒತ್ತಕ್ಷರಗಳಿರುವ ಗಾದೆಗಳನ್ನು ಅಭ್ಯಾಸ ಮಾಡಿಸಿವುದು.
3. ಗಾದೆಯ ಮಹತ್ವವನ್ನು ತಿಳಿಸುವ ಗಾದೆಗಳನ್ನು ಪಟ್ಟಿಮಾಡಿರಿ.
4. ಈ ಕೆಳಗಿನ ಗಾದೆಗಳನ್ನು ಪೂರ್ಣಮಾಡಿರಿ.
1. ಅಟ್ಟ ಮೇಲೆ ಒಲೆ ಉರಿತು ಕೆಟ್ಟ ಮೇಲೆ ---------
2. ----------------ನೀರು ಕುಡಿಯಲೇ ಬೇಕು
3. ಕಾಯಕವೇ -----------
4. ಕುರಿ ಕಾಯಲು ------------ ನೇಮಿಸಿದಂತೆ
5. ಕೊಟ್ಟಿದ್ದು ತನಗೆ ------------
6. -------------- ಕುಡಿಕೆ ಹೊನ್ನು ಸಾಲದು
7. ಬಾಯಲ್ಲಿ ----------- ಕೈಯಲ್ಲಿ ದೊಣ್ಣೆ
8. ಮಾತು ಬೆಳ್ಳಿ ----------------
9. -------- ಸುಳ್ಳಾದರು -------- ಸುಳ್ಳಾಗದು
10. ------ಗಿಂತ ------ ಮೇಲು
11. ----------- ಇದ್ದಷ್ಟು ---------- ಚಾಚು
II.ಯಾವುದಾರರೂ ಒಂದು ವ್ಯಂಜನವನ್ನು ತೆಗೆದುಕೊಂಡು ಆ ಅಕ್ಷರದಿಂದಲೇ ಪ್ರಾರಂಭವಾಗುವ ಮತ್ತು ಆ ಅಕ್ಷರಗಳೇ ಮಧ್ಯ ಮಧ್ಯದಲ್ಲಿ ಬರುವ ಗಾದೆಗಳನ್ನು ಬಳಸಿ ಗುಣಿತಾಕ್ಷರದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಬಳಸಿಕೊಳ್ಳ ಬಹುದು. ವಿದ್ಯಾರ್ಥಿಗಳಿಗೆ ಕಾಗುಣಿತದ ಪರಿಕಲ್ಪನೆ ಮೂಡಿದ ಮೇಲೆ ಬೇರೆ ಬೇರೆ ಗುಣಿತಾಕ್ಷರಗಳಿಂದ ಆರಂಭವಾಗುವ ಗಾದೆಗಳನ್ನು ಪಟ್ಟಿಮಾಡುವಂತೆ ತಿಳಿಸುವುದು.
ಉದಾಹರಣೆ:
ಕ್+ಅ = ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಕ್+ಆ = ಕಾಸಿಗೆ ತಕ್ಕ ಕಜ್ಜಾಯ.
ಕ್+ಇ = ಕಿಡಿ ಸಣ್ಣದಾದರೂ ಕಾಡನ್ನೆಲ್ಲಾ ಸುಡ ಬಲ್ಲದು
ಕ್+ಈ = ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
ಕ್+ಉ = ಕುದುರೆ ಕಂಡರೆ ಕಾಲುನೋವು
ಕ್+ಊ = ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು
ಕ್+ಋ = ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ
ಕ್+ಎ = ಕೆಡುವ ಕಾಲಕ್ಕೆ ಬುದ್ಧಿಯಿಲ್ಲ ಮರಣ ಕಾಲಕ್ಕೆ ಮದ್ದಿಲ್ಲ
ಕ್+ಏ = ಕೇಳಿ ತಿಳಿ ಮಾಡಿ ಕಲಿ
ಕ್+ಐ = ಕೈ ಕೆಸರಾದರೆ ಬಾಯಿ ಮೊಸರು
ಕ್+ಒ = ಕೊಡಲಿ ಕಾವು ಕುಲಕ್ಕೆ ಸಾವು
ಕ್+ಓ = ಕೋಣೆಯ ಕೂಸು ಕೊಳೆಯಿತು; ಬೀದಿ ಕೂಸು ಬೆಳೆಯಿತು
ಕ್+ಅಂ = ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
ಕ್+ಅಃ = ಕಃ
III ಕೆಳಗಿನ ಮನೆಯಲ್ಲಿರುವ ಅಕ್ಷರಗಳನ್ನು ಮನಸ್ಸಿಟ್ಟು ಗಮನಿಸಿ. ಕಾಗುಣಿತದಿಂದ (ಕ ಯಿಂದ ಕಂ ವರೆಗೆ) ಆರಂಭವಾಗುವ ಗಾದೆಗಳು ಅಡಗಿ ಕುಳಿತಿವೆ. ಅವುಗಳನ್ನು ಪತ್ತೆಮಾಡಿ. ಬೇರೆ ಬೇರೆ ಬಣ್ಣಗಳನ್ನು ತುಂಬಿ ಗುರುತಿಸಿರಿ. ಉಳಿದ ಅಕ್ಷರಗಳನ್ನು ಹೆಕ್ಕಿ ಹೊರಗೆ ತೆಗೆಯಿರಿ. ಆ ಅಕ್ಷರಗಳನ್ನು ಬಳಸಿ ಜನಪ್ರಿಯ ಪ್ರಚಲಿತ ಗಾದೆಗಳನ್ನು ಬರೆಯಿರಿ.
ವಿ ಸೂ: ಸುಳಿವಿಗಾಗಿ ಕಾಗುಣಿತದ ಸ್ಥಾನದ ಸಂಖ್ಯೆಯನ್ನು ಕೊಟ್ಟಿದೆ.
III ಕೆಳಗಿನ ಮನೆಯಲ್ಲಿರುವ ಅಕ್ಷರಗಳನ್ನು ಮನಸ್ಸಿಟ್ಟು ಗಮನಿಸಿ. ಕಾಗುಣಿತದಿಂದ (ಕ ಯಿಂದ ಕಂ ವರೆಗೆ) ಆರಂಭವಾಗುವ ಗಾದೆಗಳು ಅಡಗಿ ಕುಳಿತಿವೆ. ಅವುಗಳನ್ನು ಪತ್ತೆಮಾಡಿ. ಬೇರೆ ಬೇರೆ ಬಣ್ಣಗಳನ್ನು ತುಂಬಿ ಗುರುತಿಸಿರಿ. ಉಳಿದ ಅಕ್ಷರಗಳನ್ನು ಹೆಕ್ಕಿ ಹೊರಗೆ ತೆಗೆಯಿರಿ. ಆ ಅಕ್ಷರಗಳನ್ನು ಬಳಸಿ ಜನಪ್ರಿಯ ಪ್ರಚಲಿತ ಗಾದೆಗಳನ್ನು ಬರೆಯಿರಿ.
ವಿ ಸೂ: ಸುಳಿವಿಗಾಗಿ ಕಾಗುಣಿತದ ಸ್ಥಾನದ ಸಂಖ್ಯೆಯನ್ನು ಕೊಟ್ಟಿದೆ.
ಕಾಗುಣಿತದಿಂದ (ಕ ಯಿಂದ ಕಂ) ಆರಂಭವಾಗುವ ಗಾದೆಗಳನ್ನು ಮೇಲೆನ ಮನೆಗಳಲ್ಲಿ ಗುರುತಿಸಿದ ಮೇಲೆ ಉಳಿಯುವ ಅಕ್ಷರಗಳು ಈ ಕೆಳಕಂಡಂತಿವೆ. ಈ ಅಕ್ಷರಗಳನ್ನು ಬಳಸಿ ಪ್ರಚಲಿತವಿರು ಜನಪ್ರಿಯ ಗಾದೆಗಳನ್ನು ಬರೆಯಿರಿ.
(ಶ ಕೂ ನಿ ಕು ಕ್ತಿ ಕಾ ಹಾ ಸಿ ಗೆ ಇ ದ್ದ ತು ಗೆ ರಿ ಕಾ ಯ ಗಿಂ ಡಿ ಕೂ ತು ತಿಂ ಷ್ಟು ಉ ಯ ಕು ಲು ತೋ ಳ ಡಿ ಣ್ಣು ಕಾ ರೆ ದ ಕ ಕು ದ್ದ ತ ಕೈ ರೆ ಸಿ ಕೆ ವೇ ಚು ಲು ವ ಕೆ ಲಾ ಯು ಸ ಕೈ ನ್ನು ಚಾ ವ ಹೊ ಬು ನ ನ್ನು ಬಾ ನೇ ಲ ಸಾ ಹೊ ಲಾ ಕ್ತಿ ಸ ಮೇ ಲು ನ್ನು ಮಿ ಯ ಕೆ ದು ಮೇ ಲೆ ಸಾ ಸಿ ಲ್ಲಿ ಶ ದಂ ಲ ದ್ಧಿ ಟ್ಟ ಬಂ ತು ದು ನೀ ತೆ ರ ಣಾ ಡಿ ಕು ರು ಟ್ಟ ಅ ಮೇ ಲೆ ಉ ಯ ಲೇ ಬೇ ಕು ರ್ತಿ ಕೈ ಲ್ಲಿ ಯ ದೊ ಣ್ಣೆ ತು ರಿ ಒ ಲೆ ಕೊ ಟ್ಟಿ ಟ್ಟಿ ದ್ದು ಪ ರ ಉ ಪ್ಪು ದ್ದು ತ ನ ಗೆ ಬ ಚ್ಚಿ ರಿ ತಿಂ ದ ವ ಗೆ ಯೇ ನ್ನು ನು)
IV ನಿಮಗೆ ಗೊತ್ತಿರುವ ಯಾವುದಾದರೂ ಹತ್ತು ಗಾದೆಗಳನ್ನು ಬರೆದು ಅವುಗಳಲ್ಲಿ ನಿಮಗೆ ಪ್ರಿಯವಾದ ಐದು ಗಾದೆಗಳನ್ನು ವಿಶ್ಲೇಷಿಸಿ ಬರೆಯಿರಿ.
V ಹೆಚ್ಚು ಕಡಿಮೆ ಒಂದೇ ಅರ್ಥ ಬರುವ ಗಾದೆಗಳನ್ನು ಪಟ್ಟಿಮಾಡಿರಿ..
ಉದಾಹರಣೆ:
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ಬಿತ್ತಿದಂತೆ ಬೆಳೆ
ಮಾಡಿದುಣ್ಣೋ ಮಹಾರಾಯ
**********
ಉತ್ತರ
ಬೇರೆ ಬೇರೆ ಬಣ್ಣಗಳನ್ನು ತುಂಬಿ ಗುರುತಿಸಿರುವ ಗಾದೆಗಳು
ಉಳಿಯುವ ಅಕ್ಷರಗಳನ್ನು ಬಳಸಿ ಮಾಡ ಬಹುದಾದ ಪ್ರಚಲಿತವಿರು ಜನಪ್ರಿಯ ಗಾದೆಗಳು.
(ಇದೇ ರೀತಿ ಬೇರೆ ಗಾದೆಗಳನ್ನು ಮಾಡಿರಿ).
· ಅಟ್ಟ ಮೇಲೆ ಒಲೆ ಉರಿತು ಕೆಟ್ಟ ಮೇಲೆ ಬುದ್ಧಿ ಬಂತು
· ಉಪ್ಪು ತಿಂದವನು ನೀರು ಕುಡಿಯಲೇ ಬೇಕು
· ಕಾಯಕವೇ ಕೈಲಾಸ
· ಕುರಿ ಕಾಯಲು ತೋಳನನ್ನು ನೇಮಿಸಿದಂತೆ
· ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು
· ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
· ಬಾಯಲ್ಲಿ ಶರಣಾರ್ಥಿ ಕೈಯಲ್ಲಿ ದೊಣ್ಣೆ
· ಮಾತು ಬೆಳ್ಳಿ ಮೌನ ಬಂಗಾರ
· ವೇದ ಸುಳ್ಳಾದರು ಗಾದೆ ಸುಳ್ಳಾಗದು
· ಶಕ್ತಿಗಿಂತ ಯುಕ್ತಿ ಮೇಲು
· ಹಾಸಿಗೆ ಇದ್ದಷ್ಟು ಕಾಲು ಚಾಚು
Subscribe to:
Posts (Atom)